spot_img
Thursday, April 2, 2026
spot_img

ಹಂಚು ಕಾರ್ಮಿಕರ ಸಹಕಾರ ಸಂಘ ಕುಂದಾಪುರ: ಅಧ್ಯಕ್ಷರಾಗಿ ಎಚ್. ನರಸಿಂಹ, ಉಪಾಧ್ಯಕ್ಷರಾಗಿ ವಿ. ಆನಂದ ಶೆಟ್ಟಿ ಆಯ್ಕೆ

ಕುಂದಾಪುರ, ಫೆ.24: ಹಂಚು ಕಾರ್ಮಿಕರೇ ’ಎ’ ವರ್ಗದ ಸದಸ್ಯರಾಗಿದ್ದು, ಕಾರ್ಯ ನಿರ್ವಹಿಸುತ್ತಿರುವ ಏಕೈಕ ಸಹಕಾರ ಸಂಸ್ಥೆ ಹಂಚು ಕಾರ್ಮಿಕರ ಸಹಕಾರ ಸಂಘ ನಿ., ಕುಂದಾಪುರ ಇದರ ಆಡಳಿತ ಮಂಡಲಿಯ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಫೆ.೨೪ ರಂದು ಸಂಘದ ಕಛೇರಿಯಲ್ಲಿ ಜರುಗಿತು.

ಸಂಘದ ಅಧ್ಯಕ್ಷರಾಗಿ ಎಚ್. ನರಸಿಂಹ ಹಾಗೂ ಉಪಾಧ್ಯಕ್ಷರಾಗಿ ವಿ. ಆನಂದ ಶೆಟ್ಟಿ ಅವಿರೋಧವಾಗಿ ಪುನರಾಯ್ಕೆಗೊಂಡರು.

ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಸುಮಿತ್ರ ಕುಮಾರಿ ಎನ್.ಎಸ್. ಆಯ್ಕೆ ಪ್ರಕ್ರಿಯೆ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರಾದ ವಿ. ನರಸಿಂಹ, ಡಿ. ಲಕ್ಷ್ಮಣ, ಜಿ.ಡಿ.ಪಂಜು, ಚಂದ್ರ ದೇವಾಡಿಗ, ಚಂದ್ರ ಪೂಜಾರಿ ಕನ್ಯಾನ, ಸುರೇಂದ್ರ ಹೇರಿಕುದ್ರು, ಚಂದ್ರ ನೇರಳಕಟ್ಟೆ, ಡಿ.ಅಣ್ಣಪ್ಪ, ದೇವರಾಜ ನಾಯ್ಕ, ಶ್ರೀಮತಿ ಜ್ಯೋತಿ, ಶ್ರೀಮತಿ ರತ್ನ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಕುಮಾರ್ ಬಿ. ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!