spot_img
Friday, March 21, 2025
spot_img

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕೆ. ಜೈರಾಜ್ ಬಿ.ರೈ ಸತತ ೩ನೇ ಅವಧಿಗೆ ಪುನರಾಯ್ಕೆ

ಜನಪ್ರತಿನಿಧಿ ವಾರ್ತೆ] ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಚುನಾವಣಾ ದಿನದಿಂದ ಮುಂದಿನ 5 ವರ್ಷ ಅಂದರೆ 2025ರಿಂದ 2030ರ ಅವಧಿಗೆ ಅಧ್ಯಕ್ಷರಾಗಿ ಕೆ.ಜೈರಾಜ್ ಬಿ. ರೈ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿಜಯಪಾಲ ಶೆಟ್ಟಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ದಿನಾಂಕ ಫೆ.15ರಂದು ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ನವೀನ್ ಕುಮಾರ್ ಎಂ.ಎಸ್ ಆಯ್ಕೆ ಪ್ರಕ್ರಿಯೆ ನೆಡೆಸಿಕೊಟ್ಟರು.

ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾದ ಕೆ. ಜೈರಾಜ್ ಬಿ. ರೈಯವರು ಸಹಕಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳವರಾಗಿದ್ದಾರೆ ಹಾಗೂ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀಮತಿ ಎ. ರತ್ನಕಾಂತಿ ಶೆಟ್ಟಿ, ಕೆ. ಸೀತಾರಾಮ ರೈ ಸವಣೂರು, ಡಾ.ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ. ಶಿವರಾಮ ಅಡ್ಯಂತಾಯ, ಸಿ‌ಎ. ಎಚ್. ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್‌ ಕುಮಾರ್ ಶೆಟ್ಟಿ, ಪಿ. ಬಿ. ದಿವಾಕರ ರೈ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎ. ಚಿಕ್ಕಪ್ಪ ನಾಕ್ ಮತ್ತು ಡಾ. ಬಿ. ಸಂಜೀವ ರೈ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!