spot_img
Tuesday, March 17, 2026
spot_img

ಸಿಡಬ್ಲ್ಯೂಸಿ, ನಮ್ಮಭೂಮಿ : 21ನೇ ಪದವಿ ಪ್ರದಾನ ಸಮಾರಂಭ

ಜನಪ್ರತಿನಿಧಿ (ಕುಂದಾಪುರ) : ನೀವು ಏನಾದರೂ ಸಾಧಿಸಿ, ಎಲ್ಲಿಯವರೆಗೆ ಅತ್ಯುತ್ತಮ ಪ್ರಯತ್ನವನ್ನು ನೀವು ಮಾಡುತ್ತೀರಿ, ಅಲ್ಲಿಯವರೆಗೆ ನೀವು ಅಸ್ತಿತ್ವದಲ್ಲಿರುತ್ತೀರಿ. ಪ್ರಯತ್ನ ಎಂದಿಗೂ ಮಖ್ಯ ಎಂದು FORUT ಸಂಸ್ಥೆ ನಾರ್ವೆಯ ಇಂಗ್ಟರ್ ಮಿಡ್ತುನ್ ಹೇಳಿದರು.

ಅವರು ನಮ್ಮಭೂಮಿ ಆವರಣದಲ್ಲಿ ನಡೆದ ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್,‌ ನಮ್ಮ ಭೂಮಿ ರಾಜ್ಯ ಸಂಪನ್ಮೂಲ ಕೇಂದ್ರ ಇದರ 21ನೇ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಿಡಬ್ಲ್ಯೂಸಿ ಸಂಸ್ಥೆಯೊಂದಿಗೆ FORUT ಸಂಸ್ಥೆ ಪಾಲುದಾರಿಕೆ ಹೊಂದುವುಕ್ಕೆ ಸಂತಸ ಪಡುತ್ತದೆ. ಜಗತ್ತಿನಲ್ಲಿ ಹೊಸ ಬದಲಾವಣೆ ಕಾಣುವುದೇ ನಮ್ಮ ಉದ್ದೇಶ. ಬದಲಾವಣೆ ಆಗುವವರೆಗೆ ನಾವು ನಮ್ಮ ಕಾರ್ಯ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಲ್ಲದೇ, ಪದವಿಧರರಿಗೆ ಇದೇ ಸಂದರ್ಭದಲ್ಲಿ ಅವರು ಶುಭ ಹಾರೈಸಿದರು.

ಉಡುಪಿ ಜಿಲ್ಲೆಯ ಕಾನೂನು ಸೇವೆಗಳ ಪಾಧಿಕಾರದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್. ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು.

ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ನ್ಯಾಯವಾದಿಗಳು ಹಾಗೂ ಸದಸ್ಯರು ಮಕ್ಕಳ ಕಲ್ಯಾಣ ಸಮಿತಿ, ಉಡುಪಿ ಜಿಲ್ಲೆಯ ಮುರುಳಿಧರ್ ಶೆಟ್ಟಿ, ಕುಂದಾಪುರ ತಾಲೂಕಿನ ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕ‌ರ್ ಶೆಟ್ಟಿ, SAA AB ಇಂಜಿನಿಯರಿಂಗ್ ಪೈ. ಲಿ., ನ ಸೀನಿಯರ್ ಮ್ಯಾನೇಜರ್ (PED) ಪ್ರವೀಣ್ ಕುಮಾರ್, ಮಕ್ಕಳ ಪಂಚಾಯತ್ ನಮ್ಮ ಭೂಮಿಯ ಅಧ್ಯಕ್ಷ ಕು. ಸುಜಯ್ ಉಪಸ್ಥಿತರಿದ್ದರು.

ದಿ ಸಿ.ಡಬ್ಲ್ಯೂ.ಸಿ ಕಾರ್ಯಕಾರಿ ನಿರ್ದೇಶಕಿ ಕವಿತಾ ರತ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪ ಕಾರ್ಯಕಾರಿ ನಿರ್ದೇಶಕ ಶಿವಾನಂದ ಶೆಟ್ಟಿ ಸ್ವಾಗತಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!