spot_img
Thursday, April 2, 2026
spot_img

ಮದ್ಯದ ಕಡೆಗೆ ಕೇಜ್ರೀವಾಲ್‌ ಗಮನ, ಆಮ್ ಆದ್ಮಿ ಪಕ್ಷ ಸೋಲು | ಮದ್ಯದಿಂದ ಕೇಜ್ರೀವಾಲ್‌ ಚಾರಿತ್ರ್ಯಕ್ಕೆ ಕಳಂಕ : ಅಣ್ಣಾ ಹಜಾರೆ

ಜನಪ್ರತಿನಿಧಿ (ನವ ದೆಹಲಿ) : ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಅಂತಿಮ ಹಂತದಲ್ಲಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸತತ 3ನೇ ಬಾರಿಗೆ ಅಧಿಕಾರಕ್ಕೆ ಏರುವ ಕನಸು ಕನಸಾಗಿಯೇ ಉಳಿಯಲಿದೆ.

20 ವರ್ಷಗಳಿಂದ ಅಧಿಕಾರದ ಅಜ್ಞಾತವಾಸ ಅನುಭವಿಸಿದ್ದ ಬಿಜೆಪಿ ಈಗ 40ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ದೆಹಲಿಯಲ್ಲಿ ಅಧಿಕಾರಕ್ಕೇರಲು ಸಜ್ಜಾಗಿದೆ.

ಒಂದು ಕಾಲದಲ್ಲಿ ಕೇಜ್ರಿವಾಲ್ ಗೆ ಮಾರ್ಗದರ್ಶಕರಾಗಿದ್ದ ಅಣ್ಣ ಹಜಾರೆ, ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಉತ್ತಮವಾದ ಚಾರಿತ್ರ್ಯ ಇರಬೇಕು, ಉತ್ತಮ ಚಿಂತನೆಗಳು, ಐಡಿಯಾಗಳಿರಬೇಕು ಎಂದು ನಾನು ಈ ಹಿಂದಿನಿಂದ ಹೇಳುತ್ತಾ ಬಂದಿದ್ದೇನೆ. ಆದರೆ ಅದನ್ನು ಆಮ್ ಆದ್ಮಿ ಪಕ್ಷ ಅರ್ಥ ಮಾಡಿಕೊಳ್ಳಲಿಲ್ಲ. ಕೇಜ್ರಿವಾಲ್ ಮದ್ಯ ಮತ್ತು ಹಣದಲ್ಲಿ ಸಿಲುಕಿಕೊಂಡರು, ಇದೇ ಕಾರಣದಿಂದಾಗಿ ಅವರ ಚಾರಿತ್ರ್ಯಕ್ಕೆ ಕಳಂಕ ಉಂಟಾಯಿತು. ಪರಿಣಾಮ ಆಮ್ ಆದ್ಮಿ ಪಕ್ಷ ಈಗ ಅಧಿಕಾರ ಕಳೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್ ಒಳ್ಳೆಯ ಚಾರಿತ್ರ್ಯದ ಬಗ್ಗೆ ಮಾತನಾಡುತ್ತಿದ್ದರು ಆದರೆ ಸ್ವತಃ ಅವರೇ ಮದ್ಯದ ಲಾಬಿಯಲ್ಲಿ ಅವರೇ ಸಿಲುಕಿದ್ದನ್ನು ಜನತೆ ನೋಡಿದ್ದರು. ರಾಜಕೀಯದಲ್ಲಿ ಆರೋಪಗಳು ಸಹಜ. ಆದರೆ ಆರೋಪ ಎದುರಿಸುವವರು ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಬೇಕು, ಸತ್ಯ ಎಂದಿಗೂ ಸತ್ಯವಾಗಿರುತ್ತದೆ. ಹಿಂದೊಮೆ ಪಕ್ಷ ರಚನೆಯ ಸಭೆ ನಡೆದಾಗ ನಾನು ಆ ಪಕ್ಷದ ಭಾಗವಾಗುವುದಿಲ್ಲ ಎಂದು ನಿರ್ಧರಿಸಿದ್ದೆ. ಅಂದಿನಿಂದ ಇಂದಿನವರೆಗೂ ನಾನು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದು ಅಣ್ಣ ಹಜಾರೆ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!