spot_img
Wednesday, April 1, 2026
spot_img

ಚಿತ್ತೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ: ಗ್ರಾಮದ ಅಭಿವೃದ್ಧಿಯ ಬಗ್ಗೆ ಪ್ರತೀಯೋರ್ವ ಸಾರ್ವಜನಿಕರು ತಮ್ಮ ಜವಬ್ದಾರಿಯನ್ನು ಪಾಲಿಸಿದಾಗ ಮಾದರಿ ಗ್ರಾಮವಾಗಿ ಮೂಡಿಬರಲು ಸಾಧ್ಯವಿದೆ. ನಮ್ಮ ಊರು ಮಾದರಿ ಊರು ಆಗಬೇಕು ಇಲ್ಲಿನ ವ್ಯವಸ್ಥೆಗಳು ಕೂಡ ಮಾದರಿಯಾಗಬೇಕು ಎನ್ನುವ ನೆಲೆಯಲ್ಲಿ ಇಲ್ಲಿಯ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಜನರು ಮಾಡುತ್ತಿದ್ದಾರೆ. ಎಲ್ಲರ ಸಹಕಾರದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ. ಅತುಲ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಜನವರಿ 24ರಂದು ಚಿತ್ತೂರು ಗ್ರಾಮ ಪಂಚಾಯಿತಿನ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಕಟ್ಟಡವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸುಮಾರು ೪೫ ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ಮತ್ತು ಒಳಾಂಗಣ ವಿನ್ಯಾಸವನ್ನು ಮಾಡಲಾಗಿದೆ. ಅನೇಕ ದಾನಿಗಳು ಬೇರೆಬೇರೆ ಕೊಡುಗೆಗಳನ್ನು ನೀಡಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ತಾಲೂಕು ಮಾಜಿ ಸದಸ್ಯ ಜಿ ಪೂಜಾರಿ ಅವರು ಪಂಚಾಯಿತಿ ಅಭಿವೃದ್ದಿ ಕೊಠಡಿಯನ್ನು ಉದ್ಘಾಟಿಸಿದರು. ಅಧ್ಯಕ್ಷರ ಕೊಠಡಿಯನ್ನು ರಘುರಾಮ್ ಶೆಟ್ಟಿ ಗುಡಿಗೇರಿ ಉದ್ಘಾಟಿಸಿದರು. ಅಭಿಲೇಕ ಆಲಯವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಇಂದಿರಾ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಬ್ಬು, ದಿವಾಕರ ಆಚಾರ್ಯ, ಚಂದ್ರಶೇಖರ್ ಶೆಟ್ಟಿ, ಸಿ.ಡಿ ಮಂಜುನಾಥ, ಜಯಂತಿ ಪೂಜಾರಿ, ವಸಂತಿ, ಕಲಾವತಿ ಶೆಟ್ಟಿ ಉಪಸ್ಥಿತರಿದ್ದರು.

ನೂತನ ಕಟ್ಟಡ ಉದ್ಘಾಟನೆ ಸಂದರ್ಭ ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ವಂಡವಳ್ಳಿ ಜಯರಾಮ ಶೆಟ್ಟಿ, ಸಂಜೀವ್ ಪೂಜಾರಿ ವಂಡ್ಸೆ, ರಾಮಚಂದ್ರ ಮಂಜ ಮಾರಣಕಟ್ಟೆ, ಗೋವರ್ಧನ್ ಜೋಗಿ, ಶಂಕರ ಭಟ್ ಮಾರಣಕಟ್ಟೆ, ನಾಗರಾಜ ಮಂಜ ಮಾರಣಕಟ್ಟೆ, ವಿ.ಕೆ.ಶಿವರಾಮ ಶೆಟ್ಟಿ ವಂಡ್ಸೆ, ನಾಗರಾಜ ಶೆಟ್ಟಿ ಕೈಲಾಡಿ, ರವೀಂದ್ರ ಶೆಟ್ಟಿ ಇಡೂರು ಇನ್ನಿತರರು ಭಾಗವಹಿಸಿ ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶೀಲ ವಂದಿಸಿದರು. ಕಾರ್ಯದರ್ಶಿ ಗಣೇಶ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!