spot_img
Thursday, April 2, 2026
spot_img

ಕುಂದಾಪುರ ಪುರಸಭೆಗೆ ನಾಮನಿರ್ದೇಶಕ ಸದಸ್ಯರ ನೇಮಕ ಆದೇಶ ಪತ್ರ ಹಸ್ತಾಂತರ: ಅಭಿನಂದನಾ ಕಾರ್ಯಕ್ರಮ

ಕುಂದಾಪುರ, ಫೆ. 6; ರಾಜ್ಯ ಸರ್ಕಾರದಿಂದ ಕುಂದಾಪುರ ಪುರಸಭೆಗೆ ನೂತನ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಿಗೆ ಆದೇಶ ಪತ್ರ ವಿತರಣೆ ಹಾಗೂ ಅಭಿನಂದನ ಕಾರ್ಯಾಕ್ರಮವು ಫೆ.6 ರಂದು ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಆನಂದ ಅವರು ಸದಸ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ನಾಮನಿರ್ದೇಶಕ ನೇಮಕಗೊಂಡ ಸದಸ್ಯರಾದ ಗಣೇಶ್ ಶೇರಿಗಾರ್, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿ ರಾಜ್ ಎಂ ಪೂಜಾರಿ ಮತ್ತು ಶಶಿಧರ ಕೋಟೆ ಅವರಿಗೆ ಆದೇಶ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ‘ನಾಮನಿರ್ದೇಶಕ ನೇಮಕಗೊಂಡ ಸದಸ್ಯರಿಗೆ ಅಭಿನಂದಿಸಿ, ನಿಮಗೆ ರಾಜ್ಯ ಸರ್ಕಾರ ಮಹತ್ವದ ಜವಾಬ್ದಾರಿಯನು ನೀಡಿದೆ, ಅದನ್ನು ಉತ್ತಮವಾಗಿ ನಿಭಾಯಿಸಬೇಕು. ಪುರಸಭೆಯ ಅಭಿವ್ರದ್ದಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಗ್ಯಾರೆಂಟಿ ಸಮಿತಿಯ ಉಪಾಧ್ಯಕ್ಷರಾದ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ “ನಾಮ ನಿರ್ದೇಶಕಗೊಂಡ ಸದಸ್ಯರು, ಪುರಸಭೆಯ ಒಳಿತಿಗಾಗಿ ಶ್ರಮಿಸಬೇಕು, ಕಾಂಗ್ರೆಸಿನಿಂದ ಚುನಾಯಿತಗೊಂಡ ಸದಸ್ಯರಾಗಿರಬಹುದು, ನಾಮ ನಿರ್ದೇಶಕಗೊಂಡ ಸದಸ್ಯರಾಗಿರಬಹುದು ಅಲ್ಲದೆ ಪುರಸಭೆಯ ಇತರ ಸದಸ್ಯಾರಾಗಿರಬಹುದು ಅವರೆಲ್ಲರೂ ಪುರಸಭೆಯ ಹಿತಕ್ಕಾಗಿ ಪ್ರಯತ್ನ ಪಡೆಯಬೇಕು ಎಂದು ಹೇಳಿ, ಶುಭ ಕೋರಿ, ಅವರು ಅತಿಥಿಗಳು ಜೊತೆ , ನಾಮ ನಿರ್ದೇಶಕಗೊಂಡ ಸದಸ್ಯರನ್ನು ಸನ್ಮಾನಿಸಿದರು.

ವೇದಿಕೆಯಲ್ಲಿ ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ, ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಉಪಸ್ಥಿತರಿದ್ದರು.

ಸಭೆಯಲ್ಲಿ ನಾಮ ನಿರ್ದೇಶಕಗೊಂಡ ಸದಸ್ಯರನ್ನು, ಪುರಸಭೆಯ  ಚುನಾಯಿತಗೊಂಡ ಸದಸ್ಯರು, , ಅಭಿಮಾನಿಗಳು, ಕುಟುಂಬಸ್ಥರು, ಅನೇಕರು ಸನ್ಮಾನಿಸಿದರು.

ಅಭಿಮಾನಿಗಳು ಪಕ್ಷಾತೀತವಾಗಿ , ತುಂಬು ಸಂಖ್ಯೆಯಲ್ಲಿ ನೆರೆದಿದ್ದರಿಂದ ,  ಸರಳವಾಗಿ ಮುಖ್ಯ ಅಧಿಕಾರಿಯ ಕಚೇರಿಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮ ಪುರಸಭಾ ಸಭಾಂಗಣದಲ್ಲಿ ನಡೆಯಿತು.

ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!