spot_img
Wednesday, April 1, 2026
spot_img

ಗೋಕಳ್ಳರ ಮೇಲೆ ಶೂಟೌಟ್‌ ಹೇಳಿಕೆ : ವ್ಯಾಪಕ ಖಂಡನೆ | ಗೃಹ ಸಚಿವರು ಹೇಳಿದ್ದೇನು ?

ಜನಪ್ರತಿನಿಧಿ (ಬೆಂಗಳೂರು) : ಗೋಕಳ್ಳತನ ಮಾಡುವವರ ಮೇಲೆ ಸ್ಥಳದಲ್ಲೇ ಶೂಟೌಟ್ ಮಾಡಲಾಗುವುದು ಎಂಬ ಕಾಂಗ್ರೆಸ್ ಸಚಿವ ಮಂಕಾಳ್ ವೈದ್ಯ ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಮಂಕಾಳ್ ವೈದ್ಯ ಅವರ ಹೇಳಿಕೆಯನ್ನು ಆರ್ ಎಸ್ಎಸ್ ಮನಸ್ಥಿಗೆ ಹೋಲಿಕೆ ಮಾಡಿದರೆ, ಮತ್ತೊಂದೆಡೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು, ಸಚಿವರ ಹೇಳಿಕೆಯನ್ನು ಖಂಡಿಸಲೂ ಆಗದೇ, ಸಮರ್ಥಿಸಿಕೊಳ್ಳಲೂ ಆಗದೇ ಇರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇದೆ.

ತಮ್ಮ ಸಹೋದ್ಯೋಗಿ ಸಚಿವ ಮಂಕಾಳ್ ವೈದ್ಯ ಅವರ ಹೇಳಿಕೆಗಳ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳ ವರದಿಗಾರರಿಗೆ ಉತ್ತರಿಸಿರುವ ಗೃಹ ಸಚಿವ ಡಾ.ಜಿ ಪರಮೆಶ್ವರ್, ಮಂಕಾಳ್ ವೈದ್ಯ ಅವರದ್ದು ವೈಯಕ್ತಿಕ ಹೇಳಿಕೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮಂಕಾಳ್ ವೈದ್ಯ ಅವರ ಹೇಳಿಕೆಗೆ ಹಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಮಂಕಾಳ್ ವೈದ್ಯ ಸಮಾಜವಾದಿ ಸಿದ್ದರಾಮಯ್ಯ ಅವರ ಸರ್ಕಾರದ ಸಚಿವರಾ? ಮಂಕಾಳು ವೈದ್ಯ ಅವರು ಸಿದ್ದರಾಮಯ್ಯ ಸರ್ಕಾರವನ್ನು ಬಿಜೆಪಿ ಸರ್ಕಾರ ಎಂದು ಭಾವಿಸಿದ್ದಾರಾ? ದನಕಳ್ಳತನ ಮಾಡಿದರೆ ಅವರಿಗೆ ಶಿಕ್ಷೆ ಕೊಡಿಸುವ ವ್ಯವಸ್ಥೆ ಇದೆ ಎಂಬುದನ್ನೂ ಮರೆತು ಮಾತನಾಡುತ್ತಿರುವ ಸಚಿವರ ಹೇಳಿಕೆ ಸರ್ವಾಧಿಕಾರಿತನವನ್ನು ತೋರುತ್ತಿದೆ. ಇಂತಹ ಮಂತ್ರಿಯನ್ನು ತಕ್ಷಣವೇ ಸಿದ್ದರಾಮಯ್ಯ ವಜಾಗೊಳಿಸಬೇಕೆಂಬ ಆಗ್ರಹ ಸಾಮಾಜಿಕ ವಲಯದಿಂದ ಕೇಳಿಬಂದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!