spot_img
Sunday, February 15, 2026
spot_img

ಫೆ.12 ಮಂದಾರ್ತಿ ಕೆಂಡಸೇವೆ, ಫೆ.13ಕ್ಕೆ ಶ್ರೀ ಮನ್ಮಹಾರಥೋತ್ಸವ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಫೆ.13ರಂದು ನಡೆಯಲಿದೆ.

ಫೆ.9ರಂದು ಆದಿತ್ಯವಾರ ಬೆಳಿಗ್ಗೆ 9ಗಂಟೆಯಿಂದ ಬಾರಾಳಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣಹೋಮ, ರಾತ್ರಿ 8 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ವಿಘ್ನೇಶ್ವರ ಪ್ರಾರ್ಥನೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ) ಫೆ.10 ಸೋಮವಾರ ರಾತ್ರಿ 8 ಗಂಟೆಯಿಂದ ವಿಶೇಷ ಪೂಜೆ, ರಂಗಪೂಜೆ (ಹೆಗ್ಗುಂಜೆ ದೊಡ್ಡಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ, ಫೆ.11 ಮಂಗಳವಾರ ರಾತ್ರಿ 8 ಗಂಟೆಗೆ ರಂಗಪೂಜೆ (ಹೆಗ್ಗುಂಜೆ ಹೊಸಮನೆಯವರಿಂದ ಕಟ್ಟುಕಟ್ಟಳೆ) ಕಟ್ಟೆಪೂಜೆ, ವಸಂತ ಪೂಜೆ ನಡೆಯಲಿದೆ.

ಫೆ.12 ಬುಧವಾರ ಕುಂಭ ಸಂಕ್ರಮಣ, ರಾತ್ರಿ 9 ಗಂಟೆಯಿಂದ ಕೆಂಡಸೇವೆ, ರಾತ್ರಿ 3 ಗಂಟೆಯಿಂದ ಹಾಲಿಟ್ಟು ಸೇವೆ, ನಾಗದರ್ಶನ, ರಾತ್ರಿ 4ರಿಂದ ಹಿರೇ ರಂಗಪೂಜೆ, ಬಲಿ ಉತ್ಸವ, ಡಕ್ಕೆಬಲಿ ನಡೆಯಲಿದೆ.
ಫೆ.13 ಗುರುವಾರ ಮಧ್ಯಾಹ್ನ 12.30ಕ್ಕೆ ಶ್ರೀ ಮನ್ಮಹಾರಥಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ರಥೋತ್ಸವ, ರಾತ್ರಿ 8 ಗಂಟೆಯಿಂದ ಓಲಗ ಮಂಟಪ ಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.

ಫೆ.14 ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕವಾಟ ವಿಸರ್ಜನೆ, ಲಕ್ಷ್ಮೀ ಮಂಟಪ ಪೂಜೆ, ರಾತ್ರಿ 8ರಿಂದ ದೀಪೋತ್ಸವ, ರಂಗಪೂಜೆ (ಹೆಗ್ಗುಂಜೆ ಪಠೇಲರಮನೆಯವರಿಂದ ಕಟ್ಟುಕಟ್ಟಳೆ), ಓಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆಗಳು, ತದನಂತರ ಮಂದಾರ್ತಿಯ ಐದು ಮೇಳದವರಿಂದ ಯಕ್ಷಗಾನ ಸೇವೆ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!