spot_img
Wednesday, April 1, 2026
spot_img

ಫೆ.8ರಂದು ಬೆಂಗಳೂರಿನಲ್ಲಿ ಯಶಸ್ವಿ ಕಲೋಲ್ಲಾಸ| ಮಂಥರೆಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ

ಜನಪ್ರತಿನಿದಿ ವಾರ್ತೆ] ಕುಂದಾಪುರ: ಯಶಸ್ವಿ ಕಲಾವೃಂದ ರಿ., ಕೊಮೆ ತೆಕ್ಕಟ್ಟೆ ಇವರ 25ರ ಸಂಭ್ರಮದ ಯಾನದ ಪ್ರಯುಕ್ತ ಶ್ವೇತಯಾನ 108 ಕಾರ್ಯಕ್ರಮದ ಅಂಗವಾಗಿ ಫೆ.8ರಂದು ಶನಿವಾರ ರಾತ್ರಿ 9.30ರಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿ ಕಲೋಲ್ಲಾಸ-ವಾಗ್ವಿಲಾಸದ ಯಕ್ಷವಿಶೇಷ ನಡೆಯಲಿದೆ.
ಹಿರಿಯ ಚಲನಚಿತ್ರ, ರಂಗಭೂಮಿ ಕಲಾವಿದೆ ಉಮಾಶ್ರೀ ಮಂಥರೆಯ ಪಾತ್ರ ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಕೈಕೇಯಿ ಪಾತ್ರದಲ್ಲಿ ಪ್ರೊ.ಪವನ್ ಕಿರಣ್ ಕೆರೆ, ವಾಲ್ಮೀಲಿಯಾಗಿ ರಾಧಾಕೃಷ್ಣ ಕಲ್ಚಾರ್, ರಾಮನಾಗಿ ಗಣರಾಜ್ ಕುಂಬ್ಳೆ, ಭರತನಾಗಿ ಮಹೇಶ ಭಟ್ ಇಡುಗುಂದಿ, ಸೀತೆಯಾಗಿ ಸುಧಾ ಮಣೂರು, ಸುಗ್ರೀವನಾಗಿ ಶಶಾಂಕ್ ಅರ್ನಾಡಿ ವಾಗ್ವಿಲಾಸಕ್ಕೆ ಜೀವ ತುಂಬಲಿದ್ದಾರೆ.
ಭಾಗವತರಾಗಿ ಸುರೇಶ ಶೆಟ್ಟಿ ಶಂಕರನಾರಾಯಣ, ಲಂಭೋದರ ಹೆಗಡೆ ನಿಟ್ಟೂರು, ಪಂಚಮಿ ವೈದ್ಯ, ಚಂಡೆಯಲ್ಲಿ ರಾಹುಲ್ ಕುಂದರ್, ಮದ್ದಳೆಯಲ್ಲಿ ಭರತ್ ಚಂದನ್ ಸಾಥ್ ನೀಡಲಿದ್ದಾರೆ. ಪ್ರಣೂತ ಆರ್ ಗಾಣಿಗ ನಿರ್ವಹಣೆ ಮಾಡಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!