spot_img
Tuesday, March 31, 2026
spot_img

ಕೇಂದ್ರ ಬಜೆಟ್ 2025 : ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? : ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಜನಪ್ರತಿನಿಧಿ (ನವದೆಹಲಿ) : ಇಂದು(ಶನಿವಾರ) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ.

ರಕ್ಷಣಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಗೃಹ ವ್ಯವಹಾರಗಳು, ಕೃಷಿ, ಶಿಕ್ಷಣ, ಆರೋಗ್ಯ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಹಲವು ಇಲಾಖೆಗಳಿಗೆ ಬಂಪ‌ರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಯಾವ್ಯಾವ ವಲಯಕ್ಕೆ ಎಷ್ಟು ಅನುದಾನ? (ಕೋಟಿಗಳಲ್ಲಿ)

ರಕ್ಷಣಾ ಇಲಾಖೆ: ₹4.91 ಲಕ್ಷ ಕೋಟಿ
ಗ್ರಾಮೀಣ ಅಭಿವೃದ್ಧಿ: ₹2.66 ಲಕ್ಷ ಕೋಟಿ
ಗೃಹ ಇಲಾಖೆ: ₹2.33 ಲಕ್ಷ ಕೋಟಿ
ಕೃಷಿ & ರೈತರ ಕಲ್ಯಾಣ: ₹1.71 ಲಕ್ಷ ಕೋಟಿ
ಶಿಕ್ಷಣ: ₹1.28 ಲಕ್ಷ ಕೋಟಿ
ಆರೋಗ್ಯ: ₹98,311 ಕೋಟ
ನಗರಾಭಿವೃದ್ಧಿ: ₹96,777 ಕೋಟಿ
ಮಾಹಿತಿ ತಂತ್ರಜ್ಞಾನ: ₹95,298 ಕೋಟಿ
ಇಂಧನ: ₹81,174 ಕೋಟಿ
ವಾಣಿಜ್ಯ ಮತ್ತು ಕೈಗಾರಿಕೆ: ₹68,553 ಕೋಟಿ
ಸಮಾಜ ಕಲ್ಯಾಣ ಇಲಾಖೆ: ₹60,052 ಕೋಟಿ
ವಿಜ್ಞಾನ ಕ್ಷೇತ್ರ: ₹55,679 ಕೋಟಿ

ಕಳೆದ ಬಾರಿ ರಕ್ಷಣಾ ಇಲಾಖೆಗೆ ₹5.94 ಲಕ್ಷ ಕೋಟಿ, ಗೃಹ ಇಲಾಖೆ ₹1.96 ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿ ₹1.60 ಲಕ್ಷ ಕೋಟಿ, ರಸ್ತೆ ಹಾಗೂ ಹೆದ್ದಾರಿ 2.70 ಲಕ್ಷ ಕೋಟಿ, ರೈಲ್ವೆ ₹2.41 ಲಕ್ಷ ಕೋಟಿ, ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ₹2.06 ಲಕ್ಷ ಕೋಟಿ, ರಾಸಾಯನಿಕ ಹಾಗೂ ರಸಗೊಬ್ಬರ ₹1.78 ಲಕ್ಷ ಕೋಟಿ, ಕೃಷಿ & ರೈತರ ಕಲ್ಯಾಣ ₹1.25 ಲಕ್ಷ ಕೋಟಿ, ದೂರ ಸಂಪರ್ಕ ₹1.2 ಲಕ್ಷ ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!