spot_img
Saturday, February 14, 2026
spot_img

ಕೇಂದ್ರ ಬಜೆಟ್ 2025‌ : ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ | ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ !

ಜನಪ್ರತಿನಿಧಿ (ನವದೆಹಲಿ) : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಬದಲಾವಣೆ ತರಬಹುದೆಂಬ ಮಧ್ಯಮ ವರ್ಗದ ನಿರೀಕ್ಷೆಗೆ ಪುಷ್ಟಿ ದೊರೆತಿದೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ ಸಿಕ್ಕಿದೆ.

₹75 ಸಾವಿರ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗಲಿರುವುದರಿಂದ, ಒಟ್ಟು ₹12,75,000 ವರೆಗಿನ ಆದಾಯವುಳ್ಳವರಿಗೆ ತೆರಿಗೆ ರಿಯಾಯಿತಿ ಲಭ್ಯವಾಗಲಿದೆ.

ಇದು ದೇಶದ ಬೆಳವಣಿಗೆಗೆ ಮಧ್ಯಮವರ್ಗವು ಹೆಚ್ಚಿನ ಬಲ ತುಂಬುತ್ತಿದೆ. ಇದನ್ನು ಮನಗಂಡಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ತೆರಿಗೆದಾರರ ಪರವಾಗಿ ಹಿಂದಿನಿಂದಲೂ ಸಾಕಷ್ಟು ರಿಯಾಯಿತಿಗಳನ್ನು ನೀಡಿದೆ. ಆರಂಭದಲ್ಲಿ 2.5 ಲಕ್ಷ ಇದ್ದ ತೆರಿಗೆ ರಹಿತ ಫ್ಲ್ಯಾಬ್ ಅನ್ನು 2019ರಲ್ಲಿ ₹5 ಲಕ್ಷಕ್ಕೆ ಏರಿಸಲಾಗಿತ್ತು.

2023ರಲ್ಲಿ ತೆರಿಗೆ ರಿಯಾಯಿತಿಯ ಸ್ಪ್ಯಾಬ್ ಅನ್ನು ₹7 ಲಕ್ಷಕ್ಕೆ ಏರಿಕೆ ಮಾಡಿತ್ತು. ಇದೀಗ ₹12 ಲಕ್ಷದವರೆಗೆ ವಾರ್ಷಿಕ ಆದಾಯವಿರುವವರು ತೆರಿಗೆ ಪಾವತಿಸಬೇಕಾಗಿಲ್ಲ. ಇದರೊಂದಿಗೆ ₹75,000 ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಅನ್ವಯವಾಗುವುದರಿಂದ, ಒಟ್ಟಾರೆಯಾಗಿ ವಾರ್ಷಿಕ ₹12,75,000 ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ವಿವರಿಸಿದರು.

ಇದರ ಪರಿಣಾಮವಾಗಿ, ಹೊಸ ರೆಜಿಮ್ ಆಯ್ಕೆ ಮಾಡುವ ತೆರಿಗೆದಾರರಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂದು ಈ ಕೆಳಗಿನಂತೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ತೆರಿಗೆ ರಿಯಾಯಿತಿ (ಸಾರಾಂಶ)

₹12 ಲಕ್ಷವರೆಗಿನ ಆದಾಯವಿದ್ದವರಿಗೆ ವಾರ್ಷಿಕ ₹80 ಸಾವಿರ ತೆರಿಗೆ ಉಳಿತಾಯ ಆಗಲಿದೆ.

₹18 ಲಕ್ಷದವರೆಗೆ ವಾರ್ಷಿಕ ಆದಾಯ ಇದ್ದವರಿಗೆ ₹70 ಸಾವಿರ ತೆರಿಗೆ ಉಳಿತಾಯವಾಗಲಿದೆ.

₹25 ಲಕ್ಷ ವಾರ್ಷಿಕ ಆದಾಯ ಇದ್ದವರಿಗೆ ₹1,10,000ರಷ್ಟು ತೆರಿಗೆ ಉಳಿತಾಯ ಆಗಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!