spot_img
Tuesday, March 17, 2026
spot_img

ಗಾಂಧಿ ಮಾರ್ಗ ಎಂದಿಗೂ ಪ್ರಸ್ತುತ-ಡಾ.ರಾಮದಾಸ್ ಪ್ರಭು

ಜನಪ್ರತಿನಿಧಿ ವಾರ್ತೆ] ಕುಂದಾಪುರ: ರಾಜಕೀಯ ರಹಿತವಾಗಿ, ಎಲ್ಲರನ್ನು ಒಂದೇ ವೇದಿಕೆಯಲ್ಲಿ ಜೋಡಿಸುವ, ಒಂದೇ ಮಾರ್ಗದಲ್ಲಿ ಮುನ್ನೆಡೆಸುವುದೇ ಗಾಂಧಿಮಾರ್ಗ. ವೈವಿಧ್ಯತೆಯಲ್ಲಿ ಗೆಲ್ಲುವುದು ಸುಲಭ, ಆದರೆ ವೈರುದ್ಯತೆಗಳ ನಡುವೆ ಗೆಲ್ಲುವುದು ಹೆಚ್ಚು ಮುಖ್ಯವಾಗುತ್ತದೆ. ಗಾಂಧಿ ವೈರುದ್ಯತೆಗಳ ನಡುವೆ ಜೋಡಿಸುವ ಕೆಲಸ ಮಾಡಿ ಅದರಲ್ಲಿ ಗೆದ್ದವರು. ಸತತ ಸಂವಾದಗಳ ಮೂಲಕ ಮನಸುಗಳನ್ನು ಜೋಡಿಸಿದರು. ಇಂದು ಎಲ್ಲರನ್ನು ರಾಜಕೀಯೇತರವಾಗಿ ಒಟ್ಟುಗೂಡಿಸುವ ವ್ಯಕ್ತಿ ಬೇಕು. ಬಹುತ್ವದ ಭಾರತದಲ್ಲಿ ರಾಜಕೀಯೇತರವಾಗಿ ಗಾಂಧಿ ಮಾರ್ಗದಲ್ಲಿ ಮುನ್ನಡೆಸುವ ನಾಯಕ ಬೇಕು ಎಂದು ಉಡುಪಿಯ ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಮದಾಸ ಪ್ರಭು ಹೇಳಿದರು.

ಅವರು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಮಹಾತ್ಮ ಸಾಮರಸ್ಯ ಸಭೆಯಲ್ಲಿ ಮಾತನಾಡಿದರು.

ಬಹುಸಂಖ್ಯಾತರು ಯಾವತ್ತೂ ಮಧ್ಯಮ ಮಾರ್ಗದಲ್ಲಿರುತ್ತಾರೆ. ಅಲ್ಲಿ ಆಗುವ ಬದಲಾವಣೆಗಳು ತಾತ್ಕಲಿಕ. ಮಧ್ಯಮ ವರ್ಗದ ಹೋರಾಟ ಇವತ್ತಿಗೂ ಪ್ರಸ್ತುತ. ಇವತ್ತಿಗೂ ಕೂಡಾ ಗಾಂಧಿ ಮಾರ್ಗವೇ ಮುಖ್ಯವಾದುದು ಎಂದು ಹೇಳಿದ ಅವರು, ಇವತ್ತಿನ ವಾದ-ಸಂವಾದಗಳು ವೈಯಕ್ತಿಕ ಪ್ರತಿಷ್ಠೆಯನ್ನು ಪ್ರತಿಬಿಂಬಿಸುತ್ತವೆ. ಮಾತು ಗೆಲ್ಲುವುದು ಮುಖ್ಯವಲ್ಲ, ಮನಸು ಗೆಲ್ಲುವುದು ಮುಖ್ಯವಾಗಬೇಕು. ಚಿಂತನೆಗಳನ್ನು ಚುರುಕುಗೊಳಿಸುವ ಸಂವಾದಗಳು ಆಗಬೇಕು ಎಂದರು.

ಕಟ್ಟುವ ಪ್ರಕ್ರಿಯೆ ನಿರಂತರ. ಗಾಂಧಿ ಮಾರ್ಗದಲ್ಲಿ ಕಟ್ಟುವ ಕಾರ್ಯ ನಡೆಯಬೇಕು. 75-80 ವರ್ಷಗಳ ಹಿಂದೆ ಗಾಂಧಿ ಯಾವುದೇ ಸಂಪರ್ಕ ಮಾಧ್ಯಮಗಳ ಸಹಕಾರವಿಲ್ಲದೆ ಕಟ್ಟುವ ಪ್ರಯತ್ನ ಮಾಡಿದ್ದರು. ಅಂತಹ ಮಾರ್ಗ ಪ್ರಸ್ತುತ ಅಗತ್ಯ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ದಿನೇಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಂದಾಪುರ ವಲಯ ಧರ್ಮಗುರು ಡಾ.ಫೌಲ್ ರೇಗೋ, ಜಿಲ್ಲಾ ಮುಸ್ಲಿಂ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೌಲನಾ ಜಮೀರ ಅಹಮದ್ ರಶೀದ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ರಾಜು ಬೆಟ್ಟಿನಮನೆ ಉಪಸ್ಥಿತರಿದ್ದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯ ಉದಯ ಗಾಂವಕರ್ ಸ್ವಾಗತಿಸಿದರು. ಸೌಹಾರ್ದ ಕರ್ನಾಟಕದ ಸಂಚಾಲಕ ಚಂದ್ರಶೇಖರ ವಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!