spot_img
Monday, March 16, 2026
spot_img

ಕೆಪಿಎಸ್‌ಸಿ : ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿ ಪರೀಕ್ಷೆ : 5 ಪ್ರಶ್ನೆಗಳಿಗೆ ಕೃಪಾಂಕ

ಜನಪ್ರತಿನಿಧಿ (ಬೆಂಗಳೂರು) : ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಡಿ. 29ರಂದು ನಡೆದಿದ್ದ ಪೂರ್ವಭಾವಿ ಮರು ಪರೀಕ್ಷೆಯ ಪರಿಷ್ಕೃತ ಸರಿ (ಕೀ) ಉತ್ತರಗಳನ್ನು ಕೆಪಿಎಸ್‌ಸಿ ಗುರುವಾರ ಪ್ರಕಟಿಸಿದ್ದು, ಒಟ್ಟು 5 ಪ್ರಶ್ನೆಗಳಿಗೆ ಕೃಪಾಂಕ (ಒಟ್ಟು 10 ಅಂಕ) ನೀಡಲು ನಿರ್ಧರಿಸಿದೆ. ಪ್ರಶ್ನೆಪತ್ರಿಕೆ 1 ಹಾಗೂ 2 ಸೇರಿ ಒಟ್ಟು 13 ಪ್ರಶ್ನೆಗಳ ಸರಿ ಉತ್ತರಗಳಲ್ಲಿ ಬದಲಾವಣೆ ಆಗಿದೆ.

ಪತ್ರಿಕೆ 1ರಲ್ಲಿ ಒಟ್ಟು ಏಳು ಪ್ರಶ್ನೆಗಳಿಗೆ ಸರಿ ಉತ್ತರ ಬದಲಾವಣೆಯಾಗಿದ್ದು, ಈ ಪೈಕಿ ನಾಲ್ಕು ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಮೂರು ಪ್ರಶ್ನೆಗಳಿಗೆ ನೀಡಿದ್ದ ನಾಲ್ಕೂ ಆಯ್ಕೆಗಳು ಸರಿ ಇಲ್ಲದೇ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ಕೆಪಿಎಸ್‌ಸಿ ನಿರ್ಧರ ಮಾಡಿದೆ.

ಇನ್ನು ಪತ್ರಿಕೆ 2ರಲ್ಲಿ ಆರು ಪ್ರಶ್ನೆಗಳ ಸರಿ ಉತ್ತರ ಬದಲಾಗಿದ್ದು, ಈ ಪೈಕಿ ನಾಲ್ಕು ಸರಿ ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಎರಡು ಪ್ರಶ್ನೆಗಳಿಗೆ ನೀಡಿದ್ದ ನಾಲ್ಕೂ ಆಯ್ಕೆಗಳು ಸರಿ ಇಲ್ಲದೇ ಇದ್ದ ಕಾರಣ ಆ ಪ್ರಶ್ನೆಗಳಿಗೆ ಕೃಪಾಂಕ ನೀಡಲು ತೀರ್ಮಾನ ಮಾಡಿದೆ.

ಪರಿಷ್ಕೃತ ಸರಿ ಉತ್ತರಗಳನ್ನು ಪ್ರಕಟಿಸಿದ ನಂತರ ಈ ಉತ್ತರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ತಿಳಿಸಿದ್ದಾರೆ.

ಈ ಹುದ್ದೆಗಳ ನೇಮಕಾತಿಗೆ ಆಗಸ್ಟ್ 27ರಂದು ನಡೆದಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ್ದ ಪ್ರಶ್ನೆ- ಉತ್ತರಗಳಲ್ಲಿ ಭಾಷಾಂತರ ದೋಷ ಕಂಡುಬಂದ ಕಾರಣ ಕೆಪಿಎಸ್‌ಸಿ ಡಿ. 29 ಪೂರ್ವಭಾವಿ ಮರು ಪರೀಕ್ಷೆ ನಡೆಸಿತ್ತು. ಜ. 15ರಂದು ಸರಿ ಉತ್ತರಗಳನ್ನು ಪ್ರಕಟಿಸಿ, 22ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!