spot_img
Wednesday, April 1, 2026
spot_img

ವಿಜಯೇಂದ್ರನ ಅಂತ್ಯಕಾಲ ಬಂದಿದೆ, ಆ ಬಚ್ಚಾನಿಂದ ನಾವೇನೂ ಕಲಿಯಬೇಕಿಲ್ಲ : ಮತ್ತೆ ಸಿಡಿದ ಯತ್ನಾಳ್‌ | ರಾಜ್ಯ ಬಿಜೆಪಿ ಉಸ್ತುವಾರಿಗಳ ಮೇಲೂ ಯತ್ನಾಳ್‌ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಬಿಜೆಪಿ ಪಕ್ಷ ಯಡಿಯೂರಪ್ಪ ಒಬ್ಬರಿಂದ ಆದ ಪಕ್ಷವಲ್ಲ. ನಾವೂ ಪಕ್ಷಕ್ಕಾಗಿ ದುಡಿದಿದ್ದೇವೆ. ವಿಜಯೇಂದ್ರ ಬಚ್ಚಾ, ಈ ಬಚ್ಚಾನಿಂದ ನಾನೇನೂ ಕಲಿಯಬೇಕಾಗಿಲ್ಲ. ಅಪ್ಪ ಮಕ್ಕಳು ಬಿಜೆಪಿ ನಡೆಸುವವರಾ ? ಏನ್‌ ಮಾಡುತ್ತೀರಿ ? ನಮ್ಮನ್ನೆಲ್ಲಾ ಪಕ್ಷದಿಂದ ಹೊರ ಹಾಕುತ್ತೀರಾ ? ಎಂದು ಕೇಳಿದ್ದಲ್ಲದೇ, ಸತ್ಯದ ಪರವಾಗಿ ನಾವು ನಿಂತಿದ್ದೇವೆ. ಈ ಬಗ್ಗೆ ಹೈಕಮಾಂಡ್‌ ಕೂಡ ಮಾತನಾಡಬೇಕಿದೆ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.

ಇಲ್ಲಿ ಮಾಧ್ಯಮಗಳ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಯತ್ನಾಳ್‌, ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಬಗ್ಗೆಯೂ ಕಿಡಿ ಕಾರಿದರು. ಹಿಂದೊಬ್ಬ ಅರುಣ್‌ ಸಿಂಗ್‌ ಅಂತಿದ್ದ, ವಿಜಯೇಂದ್ರನಿಗೆ ಜನಪ್ರಿಯತೆ ಇದೆ ಎಂತೆಲ್ಲಾ ಕಥೆ ಹೊಡೆಯುತ್ತಿದ್ದ. ವಿಜಯೇಂದ್ರನನ್ನು ಹೊಗಳಿ ಹೊಗಳಿ ಅರುಣ್‌ ಸಿಂಗ್‌ ಅನುಕೂಲ ಮಾಡಿಕೊಂಡು ಹೋದ ಎಂದು ಏಕವಚನದಲ್ಲೇ ಹೇಳಿದ್ದಾರೆ.

ಚುನಾವಣೆಯ ಪ್ರಕ್ರಿಯೆಯ ಬಗ್ಗೆ ನಿಮಗೆ ನಂಬಿಕೆ ಇಲ್ಲವೇ ಎಂದು ವರದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್‌, ರಾಘವೇಂದ್ರ ಯಡಿಯೂರಪ್ಪ ಅವರನ್ನು ಬಿಟ್ಟರೆ ಈ ಚುನಾವಣೆಯ ಚಟುವಟಿಕೆಗಳ ಬಗ್ಗೆ ಯಾವ ಒಬ್ಬ ಶಾಸಕರಾಗಲಿ, ಸಂಸದರದ್ದಾಗಲಿ ಸಹಮತವಿಲ್ಲ. ಆಯಾಯಾ ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರು, ಎಂಎಲ್‌ಎ ಗಳು ಜನರಿಂದ ಗೆದ್ದು ಅಧಿಕಾರಕ್ಕೆ ಏರಿರುತ್ತಾರೆ. ಅವರಿಗೂ ಜಾತಿ ಸಮೀಕರಣ ಹೇಗೆ ಮಾಡಬೇಕು ಎಂಬೆಲ್ಲದರ ಬಗ್ಗೆ ಜವಾಬ್ದಾರಿಗಳಿರುತ್ತವೆ. ಎಲ್ಲವೂ ಇವರೇ ಅಪ್ಪ ಮಕ್ಕಳಿಂದ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿಜಯೇಂದ್ರ ಚಡ್ಡಿ ಹಾಕುವುದಕ್ಕಿಂತ ಮೊದಲೇ ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿದ್ದೆ. ಬಚ್ಚಾ ವಿಜಯೇಂದ್ರನಿಂದ ನಾವು ಕಲಿಯಬೇಕಿಲ್ಲ. ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಎಲ್ಲಾ ವ್ಯವಸ್ಥೆ ಮಾಡುವವರಿಗೆ, ಹೊಗಳುಭಟರಿಗೆ ಪಕ್ಷದಲ್ಲಿ ಮೊದಲ ಆಧ್ಯತೆ ನೀಡಲಾಗುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಕೂಡ ಪಕ್ಷಪಾತಿ ಧೋರಣೆ ಮಾಡುತ್ತಿದ್ದಾರೆ. ರಾಜಾಹುಲಿ, ಬೆಟ್ಟದಹುಲಿ ಅಂತ ಅವರವರೇ ಹೇಳಿಕೊಂಡರೇ ಏನು ಮಾಡುವುದಕ್ಕೆ ಇಲ್ಲ. ಇನ್ನು ಮೂರು ತಿಂಗಳಲ್ಲಿ ಎಲ್ಲಾ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಿಜಯೇಂದ್ರಗೆ ಅಂತ್ಯದ ಕಾಲ ಬಂದಿದೆ. ತಟಸ್ಥ ಗುಂಪು ಪರಿವರ್ತನೆಯಾಗಿ ನಿಷ್ಠಾವಂತ ಗುಂಪಿಗೆ ಸೇರ್ಪಡೆಯಾಗುತ್ತದೆ. ಪಕ್ಷದ ಉಳಿವಿಗಾಗಿ ನಾವು ಹೋರಾಡುತ್ತೇವೆ. ವಿಜಯೇಂದ್ರ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ವಿಜಯೇಂದ್ರ ಚೇಲಾಗಳಿಗಷ್ಟೇ ಸಮಾಧಾನವಿದೆ. ಯಾರು ಮುಂದಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಬೇಕೆಂದು ಯೋಚನೆ ಮಾಡಿಲ್ಲ. ಎಲ್ಲಾ ಒಂದು ಸಭೆ ಕರೆದು ಮುಂದೆ ನಿರ್ಣಯ ಮಾಡುತ್ತೇವೆ ಎಂದವರು ಹೇಳಿದರು.

ದುರಂಹಕಾರ, ಸರ್ವಾಧಿಕಾರ ಯಾವ ನಾಯಕನಿಗೆ ಬರುತ್ತದೋ ಆ ನಾಯಕನ ಕಾಲ ಅಂತ್ಯವಾಗುವುದು ಸಹಜ. ವಿಜಯೇಂದ್ರನ ಅಂತ್ಯದ ಕಾಲ ಬಂದಿದೆ. ವಿಜಯೇಂದ್ರ ಸೀನಿಯರ್‌ ಲೀಡರ್ಸ್‌ ಗೆ ಮರ್ಯಾದೆ ಕೊಡುವುದೆ ಇಲ್ಲ ಎಂದು ಮತ್ತೆ ಸಿಡಿದೆದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!