spot_img
Thursday, April 2, 2026
spot_img

ಕೋಟದಲ್ಲಿ ಎರಡು ದಿನಗಳ ಕಲೋತ್ಸವ

ಕೋಟ : ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ-೬ರ ಕಲೋತ್ಸವ, ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ, ಹಂದೆ ಉಡುಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜನವರಿ 31 ರ ಶುಕ್ರವಾರ ಮತ್ತು ಫೆಬ್ರುವರಿ 1 ರ ಶನಿವಾರ ಎರಡೂ ದಿನಗಳು ಸಂಜೆ 4 ರಿಂದ ಕೋಟದ ಪಟೇಲರ ಮನೆಯಲ್ಲಿ ನಡೆಯಲಿದೆ.

ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿಯವರು ಮೊದಲ ದಿನದಂದು ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಮಯ್ಯಾಸ್ ಪ್ರವರ್ತಕರಾದ ಡಾ. ಪಿ ಸದಾನಂದ ಮಯ್ಯ, ಬೆಂಗಳೂರಿನ ಪದ್ಮ ಕಮಲ ಟ್ರಸ್ಟ್‌ನ ವೆಂಕಟರಮಣ ಸೋಮಯಾಜಿ, ಉದ್ಯಮಿಗಳಾದ ಬೆಳ್ವೆ ಗಣೇಶ್ ಕಿಣಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಹಂಗಾರಕಟ್ಟೆಯ ಸಾಮಾಜಿಕ ಶೈಕ್ಷಣಿಕ ಚಿಂತಕ ಇಬ್ರಾಹಿಂ ಸಾಹೇಬ್, ಕೋಟ ವಿದ್ಯಾ ಸಂಘದ ಕಾರ್ಯದರ್ಶಿ ಎಂ. ರಾಮದೇವ ಐತಾಳ, ಬುರಾಕೋ ಗ್ಯಾಸಸ್‌ನ ನಿವೃತ್ತ ಮ್ಯಾನೆಜರ್ ಬೆಂಗಳೂರಿನ ಶಂಕರನಾರಾಯಣ ಹೆಬ್ಬಾರ್ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಲ್ಲೋರ್ವರಾದ ಎಚ್. ಶ್ರೀಧರ ಹಂದೆಯವರ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಕಲೋತ್ಸವದ ಎರಡನೆಯ ದಿನ ಮೈಸೂರಿನ ಕೇಂದ್ರ ರೇಶ್ಮೆ ಮಂಡಳಿಯ ನಿವೃತ್ತ ಜಂಟಿ ನಿರ್ದೇಶಕ ಮೋಹನದಾಸ ಶ್ಯಾನುಭೋಗ್ ಮಕ್ಕಳ ಮೇಳದ ಸ್ಥಾಪಕರಾದ ಕಾರ್ಕಡ ಶ್ರೀನಿವಾಸ ಉಡುಪರ ಸಂಸ್ಮರಣೆ ಮಾಡಲಿದ್ದಾರೆ. ಉಡುಪಿ- ಚಿಕ್ಕ ಮಂಗಳೂರು ಲೋಕ ಸಭಾ ಕ್ಷೇತ್ರದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ವಿಧಾನ ಸಭಾ ಶಾಸಕರಾದ ಕಿರಣ ಕುಮಾರ ಕೊಡ್ಗಿ, ಕಲಾ ಪೋಷಕ, ಹೋಟೇಲ್ ಉದ್ಯಮಿ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜ, ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್, ಉಡುಪಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್, ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕರಾದ ಸುಮನಾ ಘಾಟೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ಮೊದಲಾದ ಗಣ್ಯರ ಸಮ್ಮುಖದಲ್ಲಿ ಉಡುಪ ಪ್ರಶಸ್ತಿಯನ್ನು ಖ್ಯಾತ ಭಾಗವತ ಹೆರೆಂಜಾಲು ಗೋಪಾಲ ಗಾಣಿಗರಿಗೆ ನೀಡಿ ಗೌರವಿಸಲಾಗುವುದು.

ಎರಡು ದಿನಗಳಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇಲ್ಲಿನ ಕಲಾವಿದರಿಂದ ಯಕ್ಷ ಗಾನ ವೈವಿಧ್ಯ, ಹಂದೆ ಕುಟುಂಬದ ಸದಸ್ಯರಿಂದ ಕಲಾ ಸಾಹಿತ್ಯ ಸಡಗರ, ವಿದ್ವಾನ್ ಶಂಭು ಭಟ್ ಮತ್ತು ಬಳಗದವರಿಂದ ಹಿಂದೂಸ್ಥಾನಿ ಗಾಯನ, ಅತಿಥಿ ಕಲಾವಿದರು ಮತ್ತು ಯಕ್ಷ ಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ ಕೋಟ ಇವರಿಂದ ದಕ್ಷ ಯಜ್ಞ ಮತ್ತು ಚಿತ್ರಸೇನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!