spot_img
Sunday, May 17, 2026
spot_img

ಮಲ್ಯಾಡಿಯಲ್ಲಿ ಹಿರಿಯ ಕಲಾವಿದ ವಸಂತ ಗೌಡ ಕಾಯತ್ತಡ್ಕ ಅವರಿಗೆ ಸನ್ಮಾನ

ಕುಂದಾಪುರ: ಸತತ ಮೂವತ್ತು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನವನ್ನು ನಡೆಸುತ್ತಾ ಬಂದಿರುವುದಲ್ಲದೇ ಸಾರ್ವಜನಿಕರಿಗೆ ಅನ್ನದಾನವನ್ನು ಪೂರೈಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಮ್ಯತೆಯನ್ನು ಸಾಧಿಸಿದವರು ಮಲ್ಯಾಡಿ ಶಿವರಾಮ ಶೆಟ್ಟಿ ಸಹೋದರರು. ಅತ್ಯಂತ ನಿಷ್ಠೆಯಿಂದ ಕ್ಷೇತ್ರದ ನಿಕಟ ಸಂಪರ್ಕದಿಂದಲಾಗಿ ತನ್ನೆಲ್ಲಾ ಅಭೀಷ್ಟೆಯನ್ನು ಪೂರೈಸಿಕೊಂಡಿದ್ದೇವೆ ಎನ್ನುವ ಶಿವರಾಮ ಶೆಟ್ಟಿಯವರ ಮನೋಭಿಲಾಷೆ ನಿಜಕ್ಕೂ ಮೆಚ್ಚುವಂತಹದ್ದು. ಎಂದು ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಧರ್ಮಸ್ಥಳ ಹೇಳಿದರು.

ಅವರು ಮಲ್ಯಾಡಿ ಮಹಾದೇವಿ ದೇವಸ್ಥಾನದಲ್ಲಿ ಶಿವರಾಮ ಶೆಟ್ಟಿ ಸಹೋದರರ ಸೇವೆಯಾಗಿ ಧರ್ಮಸ್ಥಳ ಮೇಳದ 31ನೇ ವರ್ಷದ ಯಕ್ಷಗಾನ ಸೇವಯಾಟ ಯಕ್ಷಗಾನದ ರಂಗದಲ್ಲಿ ಹಿರಿಯ ಕಲಾವಿದ ವಸಂತ ಗೌಡ ಕಾಯತ್ತಡ್ಕ ಅವರ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸರಳ ಕಾರ್ಯಕ್ರಮದಲ್ಲಿ ತಲ್ಲೂರು ನಾರಾಯಣ ಶೆಟ್ಟಿ, ಮೇಳದ ಮ್ಯಾನೇಜರ್ ಪುಷ್ಪರಾಜ್, ಆಡಳಿತ ಮಂಡಳಿ ಮುಖ್ಯಸ್ಥರಾದ ರಘುರಾಮ ಶೆಟ್ಟಿ, ಸದಾರಾಮ ಶೆಟ್ಟಿ, ಅರ್ಚಕ ಗಣಪತಿ ಅಡಿಗ ಉಪಸ್ಥಿತರಿದ್ದರು.

ಮಲ್ಯಾಡಿ ಸೀತಾರಾಮ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧರ್ಮಸ್ಥಳ ಮೇಳದವರಿಂದ ಪೌರಾಣಿಕ ಆಖ್ಯಾನ ರಂಗದಲ್ಲಿ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!