spot_img
Sunday, February 15, 2026
spot_img

ರಾಜಧಾನಿಯಲ್ಲಿ ಕರಾವಳಿಯ ಸೊಗಡನ್ನು ಮೆರೆಸುತ್ತಿರುವುದು ಶ್ಲಾಘನೀಯ-ಗೋಪಾಡಿ ಶ್ರೀನಿವಾಸ ರಾವ್

ತೆಕ್ಕಟ್ಟೆ: ಕರಾವಳಿಯ ಸಾಂಪ್ರಾಯಿಕ ಕಲೆ ಹೂವಿನಕೋಲನ್ನು ಬೆಂಗಳೂರಲ್ಲಿ ಬಿತ್ತಿರಿಸುವುದು ಸುಲಭದ ಮಾತಲ್ಲ. 25 ವರ್ಷಗಳಿಂದ ನಿರಂತರವಾಗಿ ಚಟುವಟಿಕೆಯಿಂದ ಮನೆಮಾತಾಗಿ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ರಾಜಧಾನಿಯಲ್ಲಿ ಕರಾವಳಿಯ ಸೊಗಡನ್ನು ಮೆರೆಸುತ್ತಿರುವುದು ಬೆಂಗಳೂರಿನ ಉದ್ಯಮಿಗಳಿಗೆ ಅತ್ಯಂತ ಸಂತಸ ತಂದಿದೆ. ಕಲೆಯನ್ನು ಉಸಿರಾಗಿಸಿಕೊಂಡ ಸಂಸ್ಥೆಯ ಸಾಧನೆ ನಿಜಕ್ಕೂ ಶ್ಲಾಘನೀಯ ಎಂದು ರಾಜಧಾನಿಯ ಆಹಾರೋದ್ಯಮದ ದಿಗ್ಗಜ ಗೋಪಾಡಿ ಶ್ರೀನಿವಾಸ ರಾವ್ ತಂಡವನ್ನು ಗೌರವಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನವರಿ 22, 23ರಂದು ಬೆಂಗಳೂರಿನ ಆಯ್ದ ಉದ್ಯಮ ಹಾಗೂ ಮನೆಗಳಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಹೂವಿನಕೋಲು ತಂಡ ಬೆಳ್ಳಿ ಹಬ್ಬದ ಸಂಭ್ರಮದ ನಿಮಿತ್ತ ಕಾರ್ಯಕ್ರಮ ನೀಡುವುದಕ್ಕಾಗಿ ತೆರಳಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀನಿವಾಸ್ ರಾವ್ ಮಾತನ್ನಾಡಿದರು.

ಜನ ನಿಬಿಡದಿಂದೊಡಗೂಡಿದ ಬೆಂಗಳೂರಿನಲ್ಲಿ ಮನೆ ಮನೆಗಳಿಗೆ ಹೋಗಿ ಮಾತೃ ಸ್ಥಳವಾದ ಕರಾವಳಿಯ ಸೊಗಡನ್ನು ಕಾರ್ಯಕ್ರಮ ನೀಡುವುದೆಂದರೆ ದುಸ್ಸಾಹಸವೇ ಸರಿ. ಇಂತಹ ಸಂಸ್ಥೆಗಳಿದ್ದರೆ ಸಮಾಜದ ಏಳ್ಗೆ ಖಂಡಿತಾ ಸಾಧ್ಯ ಎಂದು ಪ್ರಸಿದ್ಧ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅಭಿಪ್ರಾಯ ಪಟ್ಟರು.

ರಾಮ ಲಕ್ಷ್ಮಣ ಕ್ಯಾಟರರ್‍ಸ್‌ನ ಮಾಲಕರಾದ ಲಕ್ಷ್ಮಣರಲ್ಲಿ, ಮಂಜುನಾಥ ಹೆಬ್ಬಾರ್, ಚಂದ್ರಶೇಖರ ಹತ್ವಾರ್, ರಾಘವೇಂದ್ರ ಹತ್ವಾರ್, ಹೀಗೆ ಅನೇಕರಲ್ಲಿ ತೆರಳಿ ಹೂವಿನಕೋಲು ಕಾರ್ಯಕ್ರಮ ನೀಡಿ ಸಂಸ್ಥೆ ಹಿಂತೆರಳಿದೆ. ತಂಡದಲ್ಲಿ ಗಣಪತಿ ಭಟ್, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!