spot_img
Thursday, April 2, 2026
spot_img

ಗುಂಡ್ಮಿಯಲ್ಲಿ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ ಪ್ರದಾನ

ಸಾಲಿಗ್ರಾಮ: ಕಲೆ ಮತ್ತು ಸಾಹತ್ಯ ಲೋಕದ ಬೆಳವಣಿಗೆಗೆ ನಮ್ಮ ಹಿರಿಯರ ದೇಣಿಗೆ ಮರೆಯಲಾರದ್ದು. ಅವರ ಶ್ರಮದಿಂದಾಗಿ ಇಂದು ಅದನ್ನು ಆಸ್ವಾದಿಸಲು ಸಾಧ್ಯವಾಗಿದೆ. ಗೋಪಾಲಕೃಷ್ಣ ನಾಯರಿಯವರು ಒಬ್ಬ ಶ್ರೇಷ್ಟ ರಂಗಭೂಮಿ ಕಲಾವಿದ. ನಿರ್ದೇಶಕ ಮಾತ್ರವಲ್ಲಾ ನಮ್ಮ ಕರಾವಳಿ ವಲಯದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಎನ್.ಎಸ್ ಡಿಯ ನಿರ್ದೇಶಕರಾಗಿ ಅವರ ಕಾರ್ಯ ಮರೆಯಲಾರದ್ದು. ಈ ನಿಟ್ಟಿನಲ್ಲಿ ಅವರ ಸ್ಮರಣೆ ಮತ್ತು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಮಹತ್ವದ್ದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರು ಅಬಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ಸಮಸ್ತರು, ರಂಗ ಅಧ್ಯಯನ ಕೇಂದ್ರ ಬೆಂಗಳೂರು ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯವರ ಸಹಕಾರದಲ್ಲಿ ಏರ್ಪಡಿಸಿದ್ದ ದೇಶೀ ಪದ್ದತಿಯ ರಂಗಭೂಮಿ ನಿರ್ದೇಶಕ ದಿವಂಗತ ಗೋಪಾಲಕೃಷ್ಣ ನಾಯರಿಯವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು “ಗೋಪಾಲಕೃಷ್ಣ ನಾಯರಿ” ರಂಗ ಪ್ರಶಸ್ತಿ 2025 ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಗುಂಡ್ಮಿ ವೈಕುಂಠ ಹೇಳೆ೯ಯವರು ಸಂಸ್ಮರಣಾ ಮಾತುಗಳನ್ನಾಡಿದರು. ಹೊನ್ನಾವರದ ಕೆಕ್ಕಾರಿನ ರಂಗಭೂಮಿ ನಿರ್ದೇಶಕ, ಕಲಾವಿದ ಗೋಪಾಲಕೃಷ್ಣ ದೇವರು ಭಟ್ಟರಿಗೆ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೇಲು ಮಣ್ಣಿಗೆಯ ಸಂತೋಷ ಯಾಜಿಯವರು ಅಭಿನಂದನಾ ಮಾತುಗಳನ್ನಾಡಿದರು. ಮಂಗಳೂರಿನ ವಿಶೇಷ ಸರಕಾರಿ ವಕೀಲರಾದ ಬದರಿನಾಥ ನಾಯರಿ, ರಾಧಾಕೃಷ್ಣ ನಾಯರಿ, ಶಿವಕುಮಾರ್ ನಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಪತಿ ನಾಯರಿಯವರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ರಾದ ರಾಮಚಂದ್ರ ಐತಾಳ ಪ್ರಶಸ್ತಿ ಪತ್ರ ವಾಚಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ನಾಯರಿಯವರು ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ನಾಯರಿಯವರು ವಂದನಾರ್ಪಣೆಗೈದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!