spot_img
Thursday, April 2, 2026
spot_img

ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ :ವಿದ್ಯಾರ್ಥಿನಿಲಯ, ಸಮುದಾಯ ಭವನ ನಿರ್ಮಾಣದ ವಿಜ್ಞಾಪನಾ ಪತ್ರ ಬಿಡುಗಡೆ

ಕುಂದಾಪುರ: 38 ಸಂವತ್ಸರ ಕಳೆದ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ (ರಿ.) ಇದರ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣದ ವಿಜ್ಞಾನಪನ ಪತ್ರವನ್ನು ಇತ್ತೀಚೆಗೆ ಕೋಟೇಶ್ವರ ಮಂಜುನಾಥ ಶೆಟ್ಟಿಗಾರರ ಸದನದಲ್ಲಿ ನಡೆದ ಸಭೆಯಲ್ಲಿ ಹಿರಿಯ ಧಾರ್ಮಿಕ ಮುಂದಾಳು ನಿವೃತ್ತ ಪಿ‌ಎಸ್‌ಐ ಗಣಪಯ್ಯ ಶೆಟ್ಟಿಗಾರ್‌ರವರು ಬಿಡುಗಡೆಗೊಳಿಸಿದರು.

ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಕಟ್ಟಡದ ಕಾಮಗಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹನಿಗೂಡಿ ಹಳ್ಳ ತೆನೆಗೂಡಿ ಬಳ್ಳ ಎಂಬಂತೆ ಸಹಕಾರ ನೀಡಬೇಕೆಂದು ಬಂಧು ಮಿತ್ರರಲ್ಲಿ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಡಾ. ಬಸವರಾಜ್ ಶೆಟ್ಟಿಗಾರ್‌ರವರು ವಿನಂತಿಸಿಕೊಂಡರು. ಸಂಘದ ಅಧ್ಯಕ್ಷರಾದ ಡಾ. ಚಂದ್ರಶೇಖರ್ ವಿ.ಎಸ್., ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿಗಾರ್, ಪ್ರಮೋದ್ ಶೆಟ್ಟಿಗಾರ್, ಕೃಷ್ಣಮೂರ್ತಿ ಶೆಟ್ಟಿಗಾರ್, ನಿವೃತ್ತ ಪಶುವೈಧ್ಯಕೀಯ ಇನ್ಸ್‌ಪೆಕ್ಟರ್ ಮಂಜುನಾಥ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಪ್ರೇಮಾ ಮಂಜುನಾಥ ಶೆಟ್ಟಿಗಾರ್‌ರವರು ಒಂದು ಲಕ್ಷದ ಐವತ್ತು ಸಾವಿರ ಧನಸಹಾಯವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

ನಿವೃತ್ತ ಶಿಕ್ಷಕಿ ಶ್ರೀಮತಿ ಇಂದಿರಾ ಜಿ. ಸ್ವಾಗತಿಸಿದರೆ, ಶ್ರೀಮತಿ ಉಷಾ ರವೀಂದ್ರ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರೆ, ಜೊತೆ ಕಾರ್ಯದರ್ಶಿ ವೆಂಕಟೇಶ ಶೆಟ್ಟಿಗಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!