spot_img
Tuesday, March 31, 2026
spot_img

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ : 2024ನೆಯ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಅನುವಾದಿತ ಪುಸ್ತಕಗಳ ಆಹ್ವಾನ

ಜನಪ್ರತಿನಿಧಿ (ಬೆಂಗಳೂರು) : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಿಕೆಗೆ ಸಂಬಂಧಿಸಿದಂತೆ 2024ನೇ ಸಾಲಿನಲ್ಲಿ ಅಂದರೆ ದಿನಾಂಕ:01.01.2024 ರಿಂದ 31.12.2024ರವರೆಗಿನ ಅವಧಿಯಲ್ಲಿ ಪ್ರಥಾಮಾವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗೂ ಅನುವಾದ ಅಧ್ಯಯನವನ್ನು ಕುರಿತ ಪುಸ್ತಕಗಳನ್ನು 2024ನೆಯ ಸಾಲಿನ ಪುಸ್ತಕ ಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು/ಪ್ರಕಾಶಕರಿಂದ ಆಹ್ವಾನಿಸಲಾಗಿದೆ.

ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪ್ರಥಮಾವೃತ್ತಿಯಲ್ಲಿ ಪ್ರಕಟಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. 2024ರ ಸಾಲಿನಲ್ಲಿ ಅನುವಾದ ಸಾಹಿತ್ಯವನ್ನು ಕುರಿತ ‘ಅಧ್ಯಯನ ಪುಸ್ತಕ’ಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ.

ಪ್ರಥಮಾವೃತ್ತಿಯಲ್ಲಿ 2024ರ ಸಾಲಿನಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳ ಬಗ್ಗೆ ಮಾಹಿತಿ ಇರುವವರು ಸಹ ಪುಸ್ತಕಗಳನ್ನು ಕಚೇರಿಗೆ ಕಳುಹಿಸಿಕೊಡಬಹುದಾಗಿದೆ. ಬಹುಮಾನಿತ ಕೃತಿಗಳಿಗೆ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ.

ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ಅನುವಾದಿತ ಪ್ರಕಟಣೆಗಳ ಪ್ರತಿ ಪುಸ್ತಕದ ನಾಲ್ಕು ಪ್ರತಿಗಳನ್ನು ಉಚಿತವಾಗಿ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056 ದೂ:23183311/12 ಕಚೇರಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ದಿನಾಂಕ: 31.03.2025ರೊಳಗಾಗಿ ತಲುಪಿಸಬೇಕೆಂದು ಈ ಮೂಲಕ ಕೋರಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!