spot_img
Thursday, April 2, 2026
spot_img

74ನೆ ಉಳ್ಳೂರು ದಲಿತ ಕಾಲೋನಿಗೆ ಉದ್ಯಮಿ ಎಚ್.ಎಸ್.ಶೆಟ್ಟಿ ಭೇಟಿ

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ ದಲಿತರಿಗೆ ಮನೆ ನಿರ್ಮಿಸಿ ಕೊಡುವ ಭರವಸೆ

ಜನಪ್ರತಿನಿಧಿ ವಾರ್ತೆ (ಕುಂದಾಪುರ): ಬೆಂಗಳೂರಿನ ಉದ್ಯಮಿ ಎಚ್.ಎಸ್ ಶೆಟ್ಟಿಯವರು 74ನೆ ಉಳ್ಳೂರು ಗ್ರಾಮಸ್ಥರು ಹಾಗು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಇವರ ಕೋರಿಕೆ ಮೇರೆಗೆ ಗ್ರಾಮದ ಗಾಣದಜಡ್ಡು ಎಂಬಲ್ಲಿಯ ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಕೊರಗ ಸಮುದಾಯದ ಕಾಲೋನಿಗೆ ಜ.೧೯ರಂದು ಭೇಟಿ ನೀಡಿ ದಲಿತರ ಸುಮಾರು ಹನ್ನೆರಡು ಮನೆಗಳನ್ನು ವೀಕ್ಷಿಸಿ ತನ್ನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ, ಈಗಾಗಲೇ ಜನ್ನಾಡಿಯಲ್ಲಿ ನಿರ್ಮಾಣ ಮಾಡಿದ ಮನೆಗಳಂತೆ ಅತ್ಯಂತ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.

ಕೊರಗರ ಕಾಲೋನಿಯ ಅತ್ಯಂತ ಹಿರಿಯ ವ್ಯಕ್ತಿ 94 ವರುಷದ ಬಸವ ಕೊರಗ ಮತ್ತು ತಂಡ ತಮ್ಮ ಸಂಪ್ರದಾಯದಂತೆ ಡೋಲು ,ಚಂಡೆ, ಕೊಳಲು ವಾದನದ ಮುಖಾಂತರ ಅತಿಥಿಗಳನ್ನು ಕಾಲೋನಿಗೆ ಬರ ಮಾಡಿಕೊಂಡರು.

ಎಚ್.ಎಸ್.ಶೆಟ್ಟರ ಜೊತೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕನ್ನೇರಿ ಮಠದ ಅವಧೂತರು, ಕಾರವಾರದ ನಾಗರಾಜ ನಾಯಕ್ ಉಪಸ್ಥಿತರಿದ್ದರು.

ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಾಜಿ ಜಿಪಂ ಸದಸ್ಯ ರೋಹಿತ್, ಗೋವಿಂದ ಶೆಟ್ಟಿ, ಶೆಟ್ಟಿ, ರಾಜೇಶ್ ಹೆಬ್ಬಾರ್, ರತ್ನಾಕರ ನಾಯ್ಕ, ಶ್ರವಣ್ ಶೆಟ್ಟಿ, ಅಂಬರೀಷ್, ರವಿ ನಾಯ್ಕ, ದಿನೇಶ್ ಪೂಜಾರಿ ಉಪಸ್ಥಿತರಿದ್ದರು.

ಚಿಟ್ಟೆ ರಾಜಗೋಪಾಲ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಎಚ್.ಎಸ್. ಶೆಟ್ಟರ ಪರಿಚಯಿಸಿ, ಇವರು ಪ್ರತಿ ವರ್ಷ ಉಡುಪಿ ಜಿಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಕೋಟ್ಯಾಂತರ ರೂಪಾಯಿ ಸಮವಸ್ತ್ರ, ಪುಸ್ತಕಗಳನ್ನು ನೀಡುವುದನ್ನು ಸ್ಮರಿಸಿಕೊಂಡರು. ಉಳ್ಳೂರು-೭೪ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನಬೈಲು ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!