spot_img
Thursday, April 2, 2026
spot_img

ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ-ಸಾಲಿಗ್ರಾಮ ಶಾಖೆ ವಾರ್ಷಿಕೋತ್ಸವ

ಸಾಲಿಗ್ರಾಮ: ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ-ಸಾಲಿಗ್ರಾಮ ಶಾಖೆಯ 53ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕಿನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ. ಎಸ್ ಕಾರಂತರು ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ಎಜಿ‌ಎಂ ವಾದಿರಾಜ್ ಕೆ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಷ್ಣುಮೂರ್ತಿ ಉಪಾಧ್ಯರು ಉಪಸ್ಥಿತರಿದ್ದರು. ಚಂದ್ರಶೇಖರ ಕಾರಂತರು,  ಚಂದ್ರಶೇಖರ ಸೋಮಯಾಜಿ, ನಿವೃತ್ತ ಡಿಜಿ‌ಎಂ ಆನಂದರಾಮ ಅಡಿಗ, ಬೈಕಾಡಿ ಸೂರ್ಯನಾರಾಯಣ ರಾವ್, ಇವರುಗಳು ಬ್ಯಾಂಕಿನ ಬೆಳವಣಿಗೆ, ಇತ್ಯಾದಿ ವಿಷಯ ಮಾತಾಡಿದರು.

ಇದೇ ಸಮಾರಂಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ತಾರಾನಾಥ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ಬ್ಯಾಂಕಿನ ವ್ಯವಸ್ಥಾಪಕರಾದ ಅವಿನಾಶ್ ಸ್ವಾಗತಿಸಿದರು. ರಶ್ಮಿ ವಂದಿಸಿದರು. ವಿನಯ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!