spot_img
Sunday, February 15, 2026
spot_img

ಬಗ್ವಾಡಿಯಲ್ಲಿ ಹಾಲು ಕರೆಯುವ ಸ್ಪರ್ಧೆ ಉದ್ಘಾಟನೆ| ಹೈನುಗಾರಿಕೆಯನ್ನು ಬದುಕಿನ ಒಂದು ಭಾಗವಾಗಿ ಸ್ವೀಕರಿಸಿ-ಶಾಸಕ ಗಂಟಿಹೊಳೆ

ಜನಪ್ರತಿನಿಧಿ ವಾರ್ತೆ| (ಕುಂದಾಪುರ) ಹೈನುಗಾರಿಕೆಯನ್ನು ಬದುಕಿನ ಒಂದು ಭಾಗವಾಗಿ ಸ್ವೀಕರಿಸಿ ಶ್ರದ್ದೆಯಿಂದ ಹೈನುಗಾರಿಕೆ ನಡೆಸಿದರೆ ಖಂಡಿತವಾಗಿ ಅನುಕೂಲವಾಗುತ್ತದೆ. ಇವತ್ತು ಸಹಕಾರ ವ್ಯವಸ್ಥೆ ಸಕ್ರಿಯವಾದ ಕಾರಣ ಹೈನುಗಾರರು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಿದೆ. ಹೈನುಗಾರಿಕೆಗೆ ಪೂರಕವಾಗಿ ಸರ್ಕಾರ ಮಟ್ಟದಿಂದ ಪಶುವೈದ್ಯರ ಹುದ್ದೆ ಭರ್ತಿ ಸೇರಿದಂತೆ ಇನ್ನೀತರ ಸೌಕರ್ಯಗಳು ಸಿಗುವಂತಾಗಬೇಕು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದರು.
ಅವರು ಜ.13ರಂದು ಬಗ್ವಾಡಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಪಶು ಸಂಗೋಪನಾ ಇಲಾಖೆ, ಕುಂದಾಪುರ, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಹಕ್ಲಾಡಿ ಹಾಗೂ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಮತ್ತು ಬಗ್ವಾಡಿ, ಕಟ್ ಬೇಲ್ತೂರು ನೂಜಾಡಿ ಮತ್ತು ಕುಂದಬಾರಂದಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಆಯೋಜಿಸಲಾದ ತಾಲ್ಲೂಕು ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಹಾಲು ಕರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವುದರಿಂದ ಯಶಸ್ಸನ್ನು ಗಳಿಸಲು ಸಾಧ್ಯವಿದೆ. ಪಶುಪಾಲನಾ ಇಲಾಖೆಯಲ್ಲಿ ಪಶುವೈದ್ಯರ ಕೊರತೆಯಿದ್ದು ಪ್ರತೀ ೪೦೦೦ ಜಾನುವಾರುಗಳಿಗೆ ಓರ್ವ ಪಶುವೈದ್ಯರನ್ನು ನೇಮಿಸುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸದನದಲ್ಲಿ ಗಮನ ಸಳೆದಿದ್ದೇನೆ. ಇವತ್ತು ಪಶುಸಖಿಯರ ಸೇವೆಯಿಂದ ಹೈನುಗಾರರಿಗೆ ಪ್ರಯೋಜನವಾಗಿದ್ದು ಅವರಿಗೆ ಇನ್ನೂ ಹೆಚ್ಚಿನ ತರಭೇತಿಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಪ್ರಕಾಶ್ಚಚಂದ್ರ ಶೆಟ್ಟಿ ಮಾತನಾಡಿ, ಹೈನೋದ್ಯಮದಲ್ಲಿ ಇವತ್ತು ನಿರಾಸದಾಯಕ ವಾತಾವರಣ ಸೃಷ್ಟಿಯಾಗುತ್ತಿದೆ. ಹೈನುಗಾರಿಕೆಯಲ್ಲಿ ಲಾಭವನ್ನು ಪ್ರತಿಯೊಬ್ಬರು ಗಳಿಸುತ್ತಿದ್ದರೂ ಕೂಡಾ ಹೈನುಗಾರಿಕೆ ನಷ್ಟ ಎನ್ನುವ ಲೋಕರೂಢಿ ಮಾತು ಹೆಚ್ಚು ಕೇಳಿಬರುತ್ತಿದೆ. ಕ್ರಮಬದ್ಧವಾಗಿ ಹೈನುಗಾರಿಕೆ ಮಾಡಿದರೆ ಖಂಡಿತಾ ಲಾಭವಿದೆ. ಹೆಚ್ಚು ಹೆಚ್ಚು ಮಂದಿ ಹೈನೋದ್ಯಮಕ್ಕೆ ಬರಬೇಕು. ಈ ಕ್ಷೇತ್ರ ಇನ್ನೂ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂದಾಪುರ ತಾಲ್ಲೂಕು ಕೆ.ಡಿ.ಪಿ ಸಮಿತಿಯ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಇವರು ಹೈನುಗಾರರು ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಹೈನುಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕರೆ ನೀಡಿದರು.
ಹಾಲು ಉತ್ಪಾದಕರ ಒಕ್ಕೂಟ, ಕುಂದಾಪುರ ವಿಭಾಗದ ಉಪವ್ಯವಸ್ಥಾಪಕರಾದ ಶಂಕರ ನಾಯ್ಕ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ: ಎಂ.ಸಿ.ರೆಡ್ಡಪ್ಪ ಇವರು ಇಲಾಖೆಯ ವಿವಿಧ ಕಾರ್ಯಚಟುವಟಿಕೆಗಳ ಕುರಿತಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ಪಶು ಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಬಾಬಣ್ಣ ಪೂಜಾರಿ ಅವರು, ಹಾಲು ಕರೆಯುವ ಸ್ಪರ್ಧೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹೆಮ್ಮಾಡಿ ಪಶುಚಿಕಿತ್ಸಾಲಯದ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ: ಅರುಣ್. ಕೆ.ಪಿ ಸ್ವಾಗತಿಸಿದರು. ಈ ಸ್ಪರ್ಧೆಯಲ್ಲಿ ಹೆಚ್. ಎಫ್. ಜೆರ್ಸಿ ಮುಂತಾದ ತಳಿಯ ವರ್ಗದಲ್ಲಿ ವಿಜೇತರಾದ ಹಸುಗಳ ಮಾಲೀಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಗ್ವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಗುಲಾಬಿ ಪೂಜಾರಿ, ಕುಂದಬಾರಂದಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಣ್ಣಯ್ಯ ಗಾಣಿಗ, ನೂಜಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಭವಾನಿ, ಕಟ್‌ಬೇಲ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಕುಂದಾಪುರ ವಿಭಾಗದ ವಿಸ್ತರಣಾಧಿಕಾರಿಗಳಾದ ವಾಸು ಪುರಾಣಿಕ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮಕ್ಕೆ ಮೊದಲು ಬಗ್ವಾಡಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ ಭಟ್ ಗೋಪೂಜೆ ನೆರವೇರಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಅವರು ಹಾಲು ಕರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹುಣ್ಸೆಮಕ್ಕಿ ಪಶುಚಿಕಿತ್ಸಾಲಯದ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ.ಜಯಣ್ಣ, ಇಲಾಖೆಯ ಸಿಬ್ಬಂದಿ ವರ್ಗದವರು, ಹೊರಗುತ್ತಿಗೆ ಸಿಬ್ಬಂದಿ ವರ್ಗದವರು, ಪಶು ಸಖಿಯರು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!