spot_img
Tuesday, March 17, 2026
spot_img

ಮಂಗಳೂರು : ಪೆಟ್ರೋಲ್‌ ಬಂಕ್ QR ಕೋಡ್ ಬದಲಿಗೆ ವೈಯಕ್ತಿಕ ಬ್ಯಾಂಕ್‌ ಖಾತೆಯ QR ಕೋಡ್ ಅಂಟಿಸಿ 58ಲಕ್ಷ ರೂ. ವಂಚಿಸಿದ ಸಿಬ್ಬಂದಿ !

ಜನಪ್ರತಿನಿಧಿ (ಮಂಗಳೂರು) : ಪೆಟ್ರೋಲ್ ಬಂಕ್‌ನ ಸಿಬ್ಬಂದಿಯೀರ್ವನೇ ಸಂಸ್ಥೆಯ QR ಕೋಡ್ ಬದಲಿಗೆ ತನ್ನ ವೈಯಕ್ತಿಕ ಬ್ಯಾಂಕ್‌ ಖಾತೆಯ QR ಕೋಡ್ ಅಂಟಿಸಿ  ಮಾಲೀಕನಿಗೆ 58ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನ ಬಂಗ್ರಕೂಳೂರಿನ ರಿಲಯನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಬಂಗ್ರಕೂಳೂರಿನಲ್ಲಿರುವ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ 15 ವರ್ಷಗಳಿಂದ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನದಾಸ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಈತ ಬಂಕ್‌ನ ಹಣಕಾಸು ವ್ಯವಹಾರ ನಿರ್ವಹಣೆ ಮಾಡಿಕೊಳ್ಳುತ್ತಿದ್ದ. ಆರೋಪಿ 2023 ಮಾರ್ಚ್ 1 ರಿಂದ 2023 ಜುಲೈ 31ರವರೆಗೆ ರಿಯಲನ್ಸ್ ಔಟ್ ಲೆಟ್ ಪೆಟ್ರೋಲ್ ಬಂಕ್‌ನಲ್ಲಿ QR ಕೋಡ್ ತೆಗೆದು ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯ QR ಕೋಡ್ ಹಾಕಿ ಲಕ್ಷಾಂತರ ರೂ. ವಂಚಿಸಿರುವುದಾಗಿ ತಿಳಿದು ಬಂದಿದೆ.

ಗ್ರಾಹಕರು ಬಂಕ್‌ ಕ್ಯೂಆರ್ ಕೋಡ್ ಎಂದು ನಂಬಿ “Mohandas Kulur Retail Outlet” ಲಿಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೊಟ್ಟಾರ ಶಾಖೆಗೆ ಹಣ ಜಮೆ ಮಾಡುತ್ತಿದ್ದರು. ಹೀಗೆ ಖಾತೆಗೆ ಒಟ್ಟು 58,85,333ರೂ. ಹಣವನ್ನು ವರ್ಗಾಯಣೆ ಆಗಿದೆ.

ಈ ರೀತಿ QR ಕೋಡ್ ಅಕ್ರಮವಾಗಿ ಬಳಸಿಕೊಂಡು ತನ್ನ ಖಾತೆಗೆ ಜಮೆ ಮಾಡಿಕೊಂಡು ದ್ರೋಹ ಎಸಗಿದ್ದಾನೆ ಎಂದು ಇದೀಗ ಮಂಗಳೂರು ಸೆನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿ ವಿರುದ್ಧ ರಿಲಯನ್ಸ್​​ ಕಂಪನಿ ಮ್ಯಾನೇಜರ್​ ಸಂತೋಷ್​​ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್​ ಕ್ರೈಂ ಮತ್ತು ಎಕನಾಮಿಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!