spot_img
Saturday, February 14, 2026
spot_img

ಉಕ್ಕು ಉದ್ಯಮಕ್ಕೆ ಉತ್ತೇಜನ : 2ನೇ ಹಂತದ ಉತ್ಪಾದನೆ ಆಧಾರಿತ PLI 1.1 ಯೋಜನೆಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

ಜನಪ್ರತಿನಿಧಿ (ನವದೆಹಲಿ) : 2030ರ ವೇಳೆಗೆ ಭಾರತ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿ ಮಾಡಿರುವ ಗುರಿ ಮುಟ್ಟುವ ದೃಷ್ಟಿಯಿಂದ ಮತ್ತೊಂದು ಸುತ್ತಿನ ‘ಉತ್ಪಾದನೆ ಆಧಾರಿತ ಉತ್ತೇಜನ ಸೌಲಭ್ಯ (PLI – Production linked initiative) ಯೋಜನೆಗೆ ಕೇಂದ್ರ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದರು.

ರಾಜಧಾನಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಈ ಸೌಲಭ್ಯಕ್ಕೆ ಉಕ್ಕು ಉತ್ಪಾದಕರು ನೋಂದಾಯಿಸಿಕೊಳ್ಳುವ ಪೋರ್ಟಲ್ ಗೆ ಅವರು ಚಾಲನೆ ನೀಡಿದರು.

ಉಕ್ಕು ಆಮದು ಪ್ರಮಾಣಕ್ಕೆ ಅಂಕೆ ಹಾಕುವ, ದೇಶೀಯವಾಗಿ ಹೆಚ್ಚು ಪ್ರಮಾಣದಲ್ಲಿ ಉಕ್ಕು ಉತ್ಪಾದಿಸುವ ಗುರಿಯೊಂದಿಗೆ ಈ ಸೌಲಭ್ಯ ನೀಡಲಾಗುತ್ತಿದೆ ಇಂದು ಕುಮಾರಸ್ವಾಮಿ ಅವರು ಹೇಳಿದರು.

ಭಾರತೀಯ ಉಕ್ಕು ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು ಆಗಿದ್ದು, ದೇಶೀಯ ಉದ್ಯಮಕ್ಕೆ ಶಕ್ತಿ ತುಂಬುವುದೇ ಉದ್ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಉಕ್ಕು ಉದ್ಯಮ ಸ್ಥಿರವಾಗಿ ನಿಲ್ಲುವ ದಿಸೆಯಲ್ಲಿ ಈ ಸೌಲಭ್ಯ ಹೆಚ್ಚು ಪರಿಣಾಮಕಾರಿ ಎಂದು ಸಚಿವರು ಹೇಳಿದರು.

ಪಿಎಲ್ ಐ 1.1 ಪೋರ್ಟಲ್ ಈಗಿನಿಂದಲೇ ನೋಂದಾವಣೆಗೆ ತೆರೆದುಕೊಂಡಿದೆ. ಈ ತಿಂಗಳ ಕೊನೆ, ಎಂದರೆ ಜನವರಿ 31ರವರೆಗೂ ಉಕ್ಕು ಉದ್ಯಮಿಗಳು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದರು.

ಉಕ್ಕು ಉದ್ಯಾನದಲ್ಲಿ ಈ ಸೌಲಭ್ಯ  ಪರಿವರ್ತನಾತ್ಮಕ ಹೆಜ್ಜೆ ಎಂದು ಬಣ್ಣಿಸಿದ ಸಚಿವರು; ಉಕ್ಕು ಭಾರತದ ಪ್ರಗತಿಯ ಬೆನ್ನೆಲುಬಾಗಿದ್ದು, ಅದನ್ನು ಬಲಪಡಿಸುವ ಹಾಗೂ ಭವಿಷ್ಯದಲ್ಲಿ ಸುಸ್ಥಿರ ಅಭಿವೃದ್ಧಿಗೆ ಖಾತರಿ ನೀಡುವ ಬದ್ಧತೆಯನ್ನು ಹೊಂದಿದೆ ಎಂದು ಹೇಳಿದರು.

PLI ಯೋಜನೆಯ ಮೊದಲ ಹಂತದಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ₹27,106 ಕೋಟಿ ಹೂಡಿಕೆಯ ಜತೆಗೆ 14,760 ನೇರ ಉದ್ಯೋಗ ಅವಕಾಶ ಹಾಗೂ 7.90 ದಶಲಕ್ಷ ಟನ್‌ಗಳಷ್ಟು ಹೆಚ್ಚುವರಿ ವಿಶೇಷ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ತೋರಿಸಿದೆ. ಕಳೆದ 2024ರ ಅಕ್ಟೋಬರ್ ಹೊತ್ತಿಗೆ ₹17,581 ಕೋಟಿಗಳಷ್ಟು ಹೂಡಿಕೆ ಆಗಿದೆ. ಪರಿಣಾಮವಾಗಿ 8,660 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ನಿಜಕ್ಕೂ ಪಿ ಎಲ್ ಐ 1.0 ಯಶಸ್ಸು ಸ್ಪೂರ್ತಿದಾಯಕವಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಉಕ್ಕು ಉದ್ಯಮವನ್ನು ಮುನ್ನಡೆಸುವ ನಮ್ಮ ಸಂಕಲ್ಪಕ್ಕೆ ದೊಡ್ಡ ಶಕ್ತಿ ತುಂಬಿದೆ ಎಂದು ಅವರು ಹೇಳಿದರು.

ಜಗತ್ತಿನ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಗ್ರಾಹಕ ದೇಶವಾಗಿರುವ ಭಾರತವು 2022ರಿಂದ ದೇಶೀಯ ಉಕ್ಕಿನ ಬಳಕೆಯಲ್ಲಿ 12% ಕ್ಕಿಂತ ಹೆಚ್ಚು ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ, ಇದು ಬಲವಾದ ಆರ್ಥಿಕ ಮೂಲಭೂತ ಮತ್ತು ಮೂಲಸೌಕರ್ಯ ಮೇಲಿನ ಹೂಡಿಕೆಗಳಿಂದ ಸಾಧ್ಯವಾಗಿದೆ. 2030ರ ವೇಳೆಗೆ ವಾರ್ಷಿಕವಾಗಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆಯನ್ನು ಸಾಧಿಸುವ ಗುರಿ ಭಾರತದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ನಾವು ಯಶಸ್ವಿಯಾಗಿ ಮುಟ್ಟುತ್ತೇವೆ. ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ಜಾಗತಿಕ ಉಕ್ಕಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪಾಂಡ್ರಿಕ್, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್, ಭಾರತೀಯ ಖನಿಜ ಅಭಿವೃದ್ಧಿ ನಿಗಮದ  ಅಧ್ಯಕ್ಷ ಅಮಿತವ್ ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!