spot_img
Tuesday, May 12, 2026
spot_img

ಪಂಚಗಂಗಾ ರೈತರ ಸೇವಾ ಸಹಕಾರ ಸಂಘ ಚುನಾವಣೆ: ಎಲ್ಲಾ ಸ್ಥಾನಗಳು ಕಾಂಗ್ರೆಸ್‌ ತೆಕ್ಕೆಗೆ 

ಜನಪ್ರತಿನಿಧಿ(ಹೆಮ್ಮಾಡಿ) : ಪಂಚಗಂಗಾ ರೈತರ ಸೇವಾ ಸಹಕಾರ ಸಂಘ ಹೆಮ್ಮಾಡಿ ಇದರ ಆಡಳಿತ ಮಂಡಳಿಗೆ ಇಂದು(ಆದಿತ್ಯವಾರ) ನೆಡೆದ ಚುನಾವಣೆಯಲ್ಲಿ ಎಲ್ಲಾ 13ಕ್ಕೆ 13 ಸ್ಥಾನಗಳಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ.

ಕಾಂಗ್ರೆಸ್ ನೇತೃತ್ವದ ಪಂಚಗಂಗಾ ಸಹಕಾರಿ ಬಳಗದ ಹಿಂದುಳಿದ ಬಿ ವರ್ಗದಿಂದ ಹಾಲಿ ಅಧ್ಯಕ್ಷ ಹಕ್ಲಾಡಿ ಸಂತೋಷಕುಮಾರ  ಶೆಟ್ಟಿ, ಹಿಂದುಳಿದ ಎ ವರ್ಗದಿಂದ ರಾಘವೇಂದ್ರ ಪೂಜಾರಿ, ಸಾಮಾನ್ಯ ಕ್ಷೇತ್ರದಲ್ಲಿ ಶರತ್ ಕುಮಾರ್ ಶೆಟ್ಟಿ, ಆನಂದ ಬಿಲ್ಲವ ಉಪ್ಪಿನಕುದ್ರು, ಚಂದ್ರ ಪೂಜಾರಿ, ಚಂದ್ರ ಎಸ್. ನಾಯ್ಕ, ತಮ್ಮಯ್ಯ ದೇವಾಡಿಗ, ಸಂತೋಷ ಕುಮಾರ ಶೆಟ್ಟಿ ತೋಟಬೈಲು, ಸುಧಾಕರ ಎನ್. ದೇವಾಡಿಗ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಚಂದ್ರಮತಿ ಹೆಗಡೆ, ಸುನಿತ ಪೂಜಾರಿ, ಪ. ಜಾತಿ ಮೀಸಲು ಕ್ಷೇತ್ರದಿಂದ ಸಂಜೀವ ಹಕ್ಲಾಡಿ, ಪ ಪಂಗಡ ಕ್ಷೇತ್ರದಿಂದ ಶಾರದ ಚುನಾವಣೆಯಲ್ಲಿ ಜಯ ಸಾಧಿಸಿದರು.

ಚುನಾವಣೆಯಲ್ಲಿ ಗೆಲುವಿಗೆ ಸಹಕರಿಸಿದ ಎಲ್ಲರಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮತ್ತು ಹಾಲಿ ಅಧ್ಯಕ್ಷ ಸಂತೋಷ ಕುಮಾರ ಶೆಟ್ಟಿ ಹಕ್ಲಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ಸುಮಿತ್ರಾ ಕುಮಾರಿ ಚುನಾವಣೆ ನಡೆಸಿಕೊಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುರೇಶ ಪೂಜಾರಿ, ಲೇಖಪಾಲ ಭಾಸ್ಕರ ಪೂಜಾರಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!