spot_img
Wednesday, April 1, 2026
spot_img

ಕುಂದಾಪುರ ತಾಲೂಕು ಆಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಜಯಂತಿ

ಜನಪ್ರತಿನಿಧಿ (ಕುಂದಾಪುರ) : ತಾಲೂಕು ಕಚೇರಿಯಲ್ಲಿ ಇಂದು(ಬುಧವಾರ) ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲಾಯಿತು.

ಅಮರಶಿಲ್ಪಿ ಜಕಣಾಚಾರಿ ಅವರ ಬಾವಚಿತ್ತಕ್ಕೆ ಹಾರ ಹಾಕಿ ಗೌರವ ಸಲ್ಲಿಸಲಾಯಿತು. ಉಪತಹಶೀಲ್ದಾರ ವಿನಯ್ ಮತ್ತು ಕುಂದಾಪುರ ವಿಶ್ವಬ್ರಾಹ್ಮಣ ಸಂಘದ ಅದ್ಯಕ್ಷರಾದ ವಡೇರಹೋಬಳಿ ಶ್ರೀದರ ಆಚಾರ್ಯ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಡೇರಹೋಬಳಿ ಶ್ರೀಧರ ಆಚಾರ್ಯ, ಜಕಣಾಚಾರಿಯವರು ಇಡಿ ವಿಶ್ವದ ಒಂದು ಶ್ರೀಮಂತ ಕಲೆಯಾದ ಶಿಲ್ಪಕಲೆಯ ಮೂಲಕ ಜಗತ್ಪ್ರಸಿದ್ಧರು. ನಾವು ಅವರ ಜಯಂತಿಯನ್ನು ಆಚರಿಸಿ ಗೌರವ ಕೊಡುವುದು ಪುಣ್ಯದ ಕೆಲಸ ಎಂದರು.

ಇನ್ನು, ವಿಶ್ವಕರ್ಮ ಸಮುದಾಯದ ಪಂಚ ಕಸುಬು ಮಾಡುವ ಕುಶಲಕರ್ಮಿಗಳಿಗೆ ಸರಕಾರದ ವತಿಯಿಂದ ಪಿಂಚಣಿ ಸೌಲಭ್ಯ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು.

ಕುಂದಾಪುರ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾದ ಕೋಣಿ ನಾರಾಯಣ ಆಚಾರ್ಯ, ಸಂಘದ ಉಪಾದ್ಯಕ್ಷ ರಮಾನಂದ ಆಚಾರ್ಯ, ವೆಂಕಟೇಶ ಆಚಾರ್ಯ, ಅಶೋಕ ಆಚಾರ್ಯ, ಹಾಗೂ ತಾಲೂಕು ಆಡಳಿತದ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಉಪತಹಶೀಲ್ದಾರ ಚಂದ್ರಶೇಖರ್‌ ಧನ್ಯವಾದ ಸಮರ್ಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!