spot_img
Thursday, June 18, 2026
spot_img

ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ ಆರಂಭ : ಅರ್ಜಿ ಆಹ್ವಾನ !

ಜನಪ್ರತಿನಿಧಿ (ಮಾಹಿತಿ) : ರೈಲ್ವೆ ನೇಮಕಾತಿ ಮಂಡಳಿ ಭಾರತೀಯ ರೈಲ್ವೆಯಲ್ಲಿ ಖಾಲಿ ಇರುವ ಗ್ರೂಪ್ ಡಿ ಲೆವೆಲ್ -1 ವರ್ಗದ 32,438 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.

10ನೇ ತರಗತಿಯ ನಂತರ ಐಟಿಐ ಮಾಡುವ ಯುವಕ/ಯುವತಿಯರಿಗೆ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶ ಆಗಿದೆ. ಎಂಜಿನಿಯರಿಂಗ್ ಸ್ಟೋರ್ಸ್, ಸಿಗ್ನಲ್, ಟ್ರಾಫಿಕ್ ಮತ್ತು ಮೆಡಿಕಲ್ ವಿಭಾಗಗಳಲ್ಲಿ ನೇಮಕಾತಿಗಾಗಿ ಆರ್‌ಆರ್‌ಬಿ ಗ್ರೂಪ್ ಡಿ ನೇಮಕಾತಿ ಪರೀಕ್ಷೆಯನ್ನು ನಡೆಸಲಿದೆ. 

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ ?

ರೈಲ್ವೆ ಗ್ರೂಪ್‌ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ, ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಈ ಹುದ್ದೆಗಳ ಪೈಕಿ ಹಲವು ಪದನಾಮದ ಹುದ್ದೆಗಳಿದ್ದು, ಕೆಲವು ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಇರಬಹುದು. ಆದರೆ ಬಹುಸಂಖ್ಯಾತ ಪದನಾಮದ ಹುದ್ದೆಗಳಿಗೆ ಒಂದೇ ರೀತಿಯ ಆಯ್ಕೆ ಪ್ರಕ್ರಿಯೆಗಳು ಇರಲಿವೆ.

ಪರೀಕ್ಷೆ ಮಾದರಿ ಹೇಗಿರಲಿದೆ ?

ಸಾಮಾನ್ಯ ವಿಜ್ಞಾನ – 25 ಪ್ರಶ್ನೆಗಳು
ಗಣಿತ – 25 ಪ್ರಶ್ನೆಗಳು
ಮೆಂಟಲ್ ಎಬಿಲಿಟಿ ಮತ್ತು ರೀಸನಿಂಗ್ – 30 ಪ್ರಶ್ನೆಗಳು
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು : 20 ಪ್ರಶ್ನೆಗಳು
ಒಟ್ಟು 100 ಅಂಕಗಳಿಗೆ 100 ಪ್ರಶ್ನೆಗಳು ಇರುತ್ತವೆ.

ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇಕಡ.40 ಅಂಕ ಗಳಿಸಬೇಕು.
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೊಳಪಡುವ ಅಭ್ಯರ್ಥಿಗಳು ಕನಿಷ್ಠ ಶೇಕಡ.40 ಅಂಕ ಗಳಿಸಬೇಕು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಕನಿಷ್ಠ ಶೇಕಡ.30 ಅಂಕ ಗಳಿಸಬೇಕು.
ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಶೇಕಡ.30 ಅಂಕ ಗಳಿಸಬೇಕು.
ಪರಿಶಿಷ್ಟ ಪಂಗಡ ಅಭ್ಯರ್ಥಿಗಳು -ಶೇಕಡ.25 ಅಂಕ ಗಳಿಸಬೇಕು.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶೇಕಡ.2 ಅಂಕಗಳ ವಿನಾಯಿತಿ ಇರುತ್ತದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ

  • ಪುರುಷ ಅಭ್ಯರ್ಥಿಗಳು 2 ನಿಮಿಷದಲ್ಲಿ 35 ಕೆಜಿ ಭಾರವನ್ನು 100 ಮೀಟರ್ ವರೆಗೆ ಒತ್ತೊಯ್ಯಬೇಕು.
  • ಪುರುಷ ಅಭ್ಯರ್ಥಿಗಳು 4-15 ನಿಮಿಷದಲ್ಲಿ 1000 ಮೀಟರ್ ಓಡಬೇಕು.
  • ಮಹಿಳಾ ಅಭ್ಯರ್ಥಿಗಳು 2 ನಿಮಿಷದಲ್ಲಿ 20 ಕೆಜಿ ಭಾರವನ್ನು 100 ಮೀಟರ್ ವರೆಗೆ ಒತ್ತೊಯ್ಯಬೇಕು.
  • ಮಹಿಳಾ ಅಭ್ಯರ್ಥಿಗಳು 5-40 ನಿಮಿಷದಲ್ಲಿ 1000 ಮೀಟರ್ ಓಡಬೇಕು.

ಕಂಪ್ಯೂಟರ್‌ ಆಧಾರಿತ ಪರೀಕ್ಷೆ :

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪೈಕಿ ಮೆರಿಟ್‌ ಆಧಾರದಲ್ಲಿ ಹುದ್ದೆಗಳಿಗೆ ಅನುಗುಣವಾಗಿ 1:2 ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಎಲ್ಲ ಅಗತ್ಯ ದಾಖಲೆಗಳನ್ನು ಸರಿಯಾಗಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಹುದ್ದೆ ಖಚಿತವಾಗಲಿದೆ.

ಹುದ್ದೆಗ ವಿವರ

ಟ್ರ್ಯಾಕ್ ಮೇಂಟೆನರ್ ಗ್ರೇಡ್‌ IV
ಟ್ರ್ಯಾಕ್‌ ಮನ್
ಅಸಿಸ್ಟಂಟ್ ಬ್ರಿಡ್ಜ್‌
ತಾಂತ್ರಿಕ ವಿಭಾಗದ ಸಹಾಯಕ
ಅಸಿಸ್ಟಂಟ್‌ ಪಾಯಿಂಟ್ಸ್‌ಮನ್

ಇತರೆ ಹಲವು ವಿಭಾಗಗಳ ಲೆವೆಲ್‌ 1 ಪೋಸ್ಟ್‌ಗಳು

ವೇತನದ ಮಾಹಿತಿ

ರೈಲ್ವೆ ಗ್ರೂಪ್‌ ಡಿ ಹುದ್ದೆಗೆ – 18000 ರೂಪಾಯಿ
ಮನೆ ಬಾಡಿಗೆ ಭತ್ಯೆ – 1800, 3600, 5400 ರೂಪಾಯಿ

ಪ್ರವಾಸ ಭತ್ಯೆ (TA) – 1059 ರೂಪಾಯಿ
ತುಟ್ಟಿ ಭತ್ಯೆ ಮಾಸಿಕ (DA) – 3060 ರೂಪಾಯಿ
ಟ್ರ್ಯಾಕ್‌ಮನ್‌ ಹುದ್ದೆಗೆ ರಿಸ್ಕ್‌ ಅಲೋವೆನ್ಸ್‌ – 2700 ರೂಪಾಯಿ
ಒಟ್ಟಾರೆ ರೈಲ್ವೆ ಗ್ರೂಪ್‌ ಡಿ ಹುದ್ದೆಯಲ್ಲಿರುವ ಉದ್ಯೋಗಿಗೆ (ಟ್ರ್ಯಾಕ್‌ಮನ್‌) – 26300 ರೂಪಾಯಿ ದೊರೆಯಲಿದೆ.

ರೈಲ್ವೆ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಥವಾ ಸಿಬಿಎಸ್‌ಇ ಬೋರ್ಡ್‌ ಹತ್ತನೇ ತರಗತಿ, ಐಸಿಎಸ್‌ಸಿ ಬೋರ್ಡ್‌ನ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಹಾಗೂ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಲೇಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

https://www.rrbapply.gov.in/#/auth/landing

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!