spot_img
Thursday, April 2, 2026
spot_img

ಓಂ ಗಣೇಶ್ ಉಪ್ಪುಂದ ಅವರಿಗೆ ‘ಕೊಗ್ಗ ದೇವಣ ಕಾಮತ್ ಪ್ರಶಸ್ತಿ’

ಕುಂದಾಪುರ: ತಾಲೂಕಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಿಂದ ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ ಕೊಗ್ಗ ದೇವಣ್ಣ ಕಾಮತ್ ಸ್ಮರಣಾರ್ಥ ನೀಡಲಾಗುತ್ತಿರುವ 2024-25ನೇ ಸಾಲಿನ ‘ಕೊಗ್ಗ ದೇವಣ ಕಾಮತ್ ಪ್ರಶಸ್ತಿ’ಗೆ ಖ್ಯಾತ ಜಾದೂ ಕಲಾವಿದ, ಲೇಖಕ, ನಟ ಓಂ ಗಣೇಶ್ ಉಪ್ಪುಂದ ಅವರನ್ನು ಸಮಿತಿ ಆಯ್ಕೆ ಮಾಡಿದೆ.

ಉಪ್ಪುಂದ ದಿ. ನಾರಾಯಣ ಕಾಮತ್ ಹಾಗೂ ದಿ.ಮನೋರಮಾ ಕಾಮತ್ ಅವರ ಪುತ್ರರಾದ ಓಂ ಗಣೇಶ್ ಕಾಮತ್ ಅವರು ಉಪ್ಪುಂದ ಅವರು ಬಹುಮುಖ ಪ್ರತಿಭೆ. ನಾಟಕದಲ್ಲಿ ಅಭಿನಯ, ಆರ್ಕೆಸ್ಟ್ರಾ ತಂಡಕಟ್ಟಿ ಹಿನ್ನೆಲೆ ಸಂಗೀತ ನುಡಿಸುವುದರಿಂದ ಆರಂಭಿಸಿ ವಿಶ್ವದಾದ್ಯಂತ ಜಾದೂ ಪ್ರದರ್ಶನ ನೀಡಿ ಜಾದೂ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದರು. ಜಾದೂ ಪ್ರದರ್ಶನದೊಂದಿಗೆ ಬೆರಳ ನೆರಳಿನಾಟ ಪ್ರದರ್ಶನ ನೀಡಿದವರು. ಜಾದೂವಿನೊಂದಿಗೆ ಅವರ ಬೆರಳ ನೆರಳಿನಾಟ ಪ್ರದರ್ಶನವೂ ಖ್ಯಾತಿ ಗಳಿಸಿತ್ತು. ಈ ಮಧ್ಯೆ ಹಲವಾರು ಸಿನೆಮಾಗಳಲ್ಲಿ ನಟನೆ, ಪತ್ರಕರ್ತರಾಗಿ ಸೇವೆ, ಉತ್ತಮ ವಾಗ್ಮಿಯಾಗಿ ನೂರಾರು ಕಾರ್ಯಕ್ರಮಗಳಲ್ಲಿ ಪ್ರೇರಣಾದಾಯಕ ಮಾತು, ಲೇಖಕರಾಗಿ ಹಲವು ಪುಸ್ತಕಗಳ ಪ್ರಕಟಣೆ. ಹೀಗೆ ವಿವಿಧ ರಂಗದಲಿ ಓಂ ಗಣೇಶ್ ಅವರು ತೊಡಗಿಕೊಂಡವರು.

ಓಂಗಣೇಶ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಡಾ.ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಕಡಲೋತ್ಸವ ಪುರಸ್ಕಾರ, ಸಾಂಸ್ಕೃತಿP ಕಂಠೀರವ ಪುರಸ್ಕಾರಗಳು ದೊರೆತಿದೆ.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ 2025ರ ಜನವರಿ 19ರಂದು ಅದ್ದೂರಿಯಾಗಿ ನಡೆಯುವ ಹತ್ತನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Sourceom ganesh

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!