spot_img
Sunday, February 15, 2026
spot_img

ಸಿ.ಟಿ ರವಿ ಅವಾಚ್ಯ ಶಬ್ದ ಬಳಸಿರುವ ವಿಡಿಯೋ ರಿಲೀಸ್‌ ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್‌ ಗರಂ !

ಜನಪ್ರತಿನಿಧಿ (ಬೆಳಗಾವಿ) : ಸಚಿವೆ ಲಕ್ಷ್ಮಿ ಹೆಬ್ಬಾಳಕರ್) ಅವರಿಗೆ ಸಿಟಿ ರವಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದ ವಿಚಾರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ.

ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ತಾವು ಹಾಗೆ ಹೇಳಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ 2 ವಿಡಿಯೋ ರಿಲೀಸ್ ಮಾಡಿ ಬಿಜೆಪಿಗೆ ಕೌಂಟರ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುವಾಗ ಸಿಟಿ ರವಿ ಮಾತನಾಡಿರುವ ವಿಡಿಯೋ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಎರಡು ವಿಡಿಯೋ ರಿಲೀಸ್ ಮಾಡಿ ಬಿಜೆಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌ ಟಾಂಗ್‌ ಕೊಟ್ಟಿದ್ದಾರೆ.

2 ವಿಡಿಯೋ ರಿಲೀಸ್ ಮಾಡಿ ಶಾಕ್‌ ನೀಡಿದ ಹೆಬ್ಬಾಳ್ಕರ್ !

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಆಡಿದ ಮಾತಿರುವ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿಟಿ ರವಿ ಆಕ್ಷೇಪಾರ್ಹ ಹೇಳಿಕೆ ಇರುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಸಿ.ಟಿ ರವಿ ಬಳಸಿದ ಪದ ಬಳಕೆಯ ವಿಡಿಯೋ ರೀಲಿಸ್ ಮಾಡಿ ಬಿಜೆಪಿಗೆ ಕೌಂಟರ್ ಕೊಟ್ಟಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್‌. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ‌ವಿಡಿಯೋ ರಿಲೀಸ್ ಮಾಡಿ ಠಕ್ಕರ್‌ ಕೊಟ್ಟಿದ್ದಾರೆ. ಎರಡು ಪ್ರತ್ಯೇಕ ‌ವಿಡಿಯೋ ರಿಲೀಸ್ ಮಾಡಿ ಬಿಜೆಪಿ ನಾಯಕರಿಗೆ ಕೌಂಟರ್ ಕೊಟ್ಟಿದ್ದಾರೆ.

ಸಿಟಿ ರವಿ ವಿರುದ್ಧ ‘ಲಕ್ಷ್ಮೀ’ ಆಕ್ರೋಶ :

ಒಂದು ವಿಡಿಯೋದಲ್ಲಿ ಸಿಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದು, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಟ್ಕಡ್ ಅಂದಿದ್ದ ವಿಡಿಯೋ ರಿಲೀಸ್ ಮಾಡಿದ್ದಾರೆ. ಎರಡು ದಿನ ನಾನು ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ಧೇನೆ. ನಾನು ರೆಡ್‌ ಕಾರ್ಪೆಟ್‌ ಮೇಲೆ ನಡೆದು ಬಂದಿಲ್ಲ. ಅವರು ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಮತ್ತೆ ಸಭಾಪತಿಗೆ ದೂರು ನೀಡುತ್ತೇನೆ !

ಎರಡು ದಿನ ಬಹಳಷ್ಟು ಆಘಾತವಾಗಿತ್ತು. ನಾನು ಮತ್ತೆ ಸಭಾಪತಿಗೆ ದೂರು ನೀಡುತ್ತೇನೆ. ನಾನು ಸಿ ಟಿ ರವಿ ವಿರುದ್ಧ ಹೋರಾಟ ಮಾಡುತ್ತೇನೆ. ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ ಎಸ್ ಎಲ್ ವರದಿ ಬೇಗ ಬಹಿರಂಗವಾಗಬೇಕು. ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.

ಎನ್‌ಕೌಂಟರ್‌ ಅನ್ನುತ್ತಿರುವುದಕ್ಕೆ ನಾಚಿಕೆ ಆಗಲ್ವಾ?’

ಏನಾಗಿದೆ ಗಾಯ, ಎಷ್ಟಾಗಿದೆ ಗಾಯ. ಸಿಟಿ ರವಿ ಅವರೇ ನೀವು ನನಗೆ ಆ ಪದ ಬಳಿಕೆ ಮಾಡಿದ್ದೀರಾ. ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇನೆ‌. ಎನ್ ಕೌಂಟರ್ ಅನ್ನುತ್ತಿರುವುದಕ್ಕೆ ನಾಚಿಕೆ ಆಗಲ್ವಾ? ಇಡೀ ಕರ್ನಾಟಕ ರಾಜ್ಯದ ಜನ ಛೀಮಾರಿ ಹಾಕುದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನ್ ಮಾಡಬೇಕು ಮಾಡಿದ್ದಾರೆ. ಮೂಲ ಕಾರಣ ಬಿಟ್ಟು ಉಳಿದಿದ್ದು ಹೇಳಿತ್ತಿದ್ದಾರೆ. ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಸಿಟ್ಟಾಗಿದ್ದಾರೆ.

ಎಲ್ಲಾ ನ್ಯಾಯಾಲಯವಾದ ಮೇಲೆ ದೇವನೊಬ್ಬನು ಇದ್ದಾನೆ. ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರುಯುತ್ತೇನೆ. ಸಾಧ್ಯವಾದರೆ ಭೇಟಿಯಾಗುತ್ತೇನೆ. ಮಾನ, ಮಾರ್ಯಾದೆ ಇಲ್ಲದವರು ಈ ರೀತಿಯ ಯತ್ನ ಮಾಡುತ್ತಾರೆಂದು ಸಿಟಿ ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ ಗರಂ ಆಗಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!