spot_img
Wednesday, April 1, 2026
spot_img

ಕಸ್ತೂರಿ ರಂಗನ್‌ ಆತಂಕ : ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಗಂಟಿಹೊಳೆ

ಜಿಲ್ಲೆಯನ್ನು ವರದಿಯನ್ವಯ ಪರಿಸರ ಸೂಕ್ಷ್ಮ  ಪ್ರದೇಶಗಳೆಂದು ಕರಡು ಅಧಿಸೂಚನೆ : ಈಶ್ವರ್‌ ಖಂಡ್ರೆ

ಜನಪ್ರತಿನಿಧಿ (ಬೆಳಗಾವಿ/ಬೈಂದೂರು) : ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ನಡೆಸಲಾದ ದೋಷ ಪೂರಿತ ಸರ್ವೇ ಹಾಗೂ ಸ್ಥಳೀಯ ಗ್ರಾಮ ಸಭೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ವಿಚಾರ ಸರಕಾರದ ಗಮನದಲ್ಲಿ ಇಲ್ಲ ಎಂದು ಅರಣ್ಯ ಇಲಾಖೆಯ ಸಚಿವ ಈಶ್ವರ್‌ ಖಂಡ್ರೆ ಉತ್ತರಿಸಿದರು.

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಶೆಟ್ಟಿ ಗಂಟಿಹೊಳೆ ಕೇಳಿರುವ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಸದರಿ ವರದಿಯಿಂದ ಭಾದಿತ ಆಗಬಹುದಾದ ಪ್ರದೇಶಗಳ ಜನರಿಗೆ ಆಗಬಹುದಾದ ನಷ್ಟಗಳ ಬಗ್ಗೆ ಹಾಗೂ ನೀಡಬಹುದಾದ ಪರಿಹಾರ ಮತ್ತು ರಕ್ಷಣೆಗಳ ಬಗ್ಗೆ ಸರಕಾರದಿಂದ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿ ದಾಖಲಿಸುವ ಕಾರ್ಯ ಮಾಡಲಾಗಿದೆಯೇ ಎಂಬ ಶಾಸಕರ ಮರು ಪ್ರಶ್ನೆಗೆ ಸಚಿವರು ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟಾರೆಯಾಗಿ 19252.16 ಚದರ ಕಿಲೋ ಮೀಟರ್  ನಷ್ಟು ಪ್ರದೇಶ, ಉಡುಪಿ ಜಿಲ್ಲೆಯನ್ನು ಡಾ. ಕೆ ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ  ಪ್ರದೇಶಗಳೆಂದು ಕರಡು ಅಧಿಸೂಚನೆ ಆಗಿರುತ್ತದೆ ಎಂದು ಸಚಿವರು ಇದೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!