spot_img
Wednesday, April 1, 2026
spot_img

ಕುಂದಾಪುರದಲ್ಲಿ ಡಿ.22ರಿಂದ 26ರ ತನಕ ಸುವರ್ಣ ಜೇಸಿಸ್ ನಾಟಕೋತ್ಸವ

ಕುಂದಾಪುರ, ಡಿ.18: ಜೇಸಿಐ ಕುಂದಾಪುರ ಇದರ ಐವತ್ತರ ಸಂಭ್ರಮದ ಪ್ರಯುಕ್ತ ‘ಸುವರ್ಣ ಜೇಸಿಸ್ ನಾಟಕೋತ್ಸವ’ ಡಿಸೆಂಬರ್ 22ರಿಂದ ಡಿಸೆಂಬರ್ 26ರ ತನಕ ಪ್ರತಿದಿನ ಸಂಜೆ 7.30ಕ್ಕೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಸುವರ್ಣ ಜೇಸಿಸ್ ಅಧ್ಯಕ್ಷರಾದ ಸದಾನಂದ ನಾವುಡ ತಿಳಿಸಿದರು.

ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಡಿ.22 ಸಂಜೆ 6.30ಕ್ಕೆ ಸುವರ್ಣ ನಾಟಕೋತ್ಸವ ಉದ್ಘಾಟನೆ ನಡೆಯಲಿದೆ. ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ನಾಟಕೋತ್ಸವ ಉದ್ಘಾಟಿಸಲಿದ್ದಾರೆ. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆ ದಿನ 7.30ಕ್ಕೆ ರಂಗ ಸಂಗಾತಿ ಪ್ರಸ್ತುತಿಯಲ್ಲಿ ಶಶಿರಾಜ್ ಕಾವೂರು ರಚಿಸಿ, ನಿರ್ದೇಶಿಸಿರುವ ‘ದಟ್ಸ್ ಆಲ್ ಯುವರ್ ಆನರ್’ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.23 ಸೋಮವಾರ ಸಂಜೆ 7.30ಕ್ಕೆ ಭೂಮಿಕಾ ಹಾರಾಡಿ ಸಾಲಿಕೇರಿ ಪ್ರಸ್ತುತಿಯಲ್ಲಿ ಶಶಿರಾಜ್ ಕಾವೂರು ರಚನೆ, ಬಿ.ಎಸ್.ರಾಮ್ ಶೆಟ್ಟಿ ಹಾರಾಡಿ ನಿರ್ದೇಶನದ ಬರ್ಬರಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.24 ಮಂಗಳವಾರ ಸಂಜೆ 7.30ಕ್ಕೆ ನೀನಾಸಂ, ಹೆಗ್ಗೋಡು ಇವರ ಪ್ರಸ್ತುತಿಯಲ್ಲಿ ಭವಭೂತಿ ರಚನೆಯ, ಅಕ್ಷರ ಕೆ.ವಿ ರೂಪಾಂತರಿಸಿ, ನಿರ್ದೇಶಿಸಿರುವ ಮಾಲತೀ ಮಾಧವ ನಾಟಕ ಪ್ರದರ್ಶನಗೊಳ್ಳಲಿದೆ.

ಡಿ.25 ಬುಧವಾರ ಸಂಜೆ 7.30ಕ್ಕೆ ನೀನಾಸಂ, ಹೆಗ್ಗೋಡು ಇವರ ಪ್ರಸ್ತುತಿಯಲ್ಲಿ ಅಭಿರಾಮ್ ಭಡ್ಕಂಕರ್ (ಮರಾಠಿ ಮೂಲ), ಜಯಂತ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿ, ವಿದ್ಯಾನಿಧಿ ವನಾರಸೆ ನಿರ್ದೇಶನದ ಅಂಕದ ಪರದೆ ನಾಟಕ ಪ್ರದರ್ಶನ ನಡೆಯಲಿದೆ.

ಡಿ.26 ಗುರುವಾರ ಸಂಜೆ 7.30ಕ್ಕೆ ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಿಂದ ಆಯ್ದ ರಂಗ ಪ್ರಯೋಗ, ಭಳಿರೇ ವಿಚಿತ್ರಂ ಮಂಗಳೂರ ತಂಡದ ಪ್ರಸ್ತುತಿಯಲ್ಲಿ, ಮಂಜು ಕೊಡಗು ವಿನ್ಯಾಸ, ನಿರ್ದೇಶನದಲ್ಲಿ ದಶಾನನ ಸ್ವಪ್ನ ಸಿದ್ಧಿ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಜೇಸಿಐ ಕುಂದಾಪುರದ ಅಧ್ಯಕ್ಷರಾದ ಚಂದನ್ ಗೌಡ ಮಾತನಾಡಿ ಜೇಸಿಐ ಕುಂದಾಪುರದ 50ನೇ ವರ್ಷಾಚರಣೆಯ ಪ್ರಯುಕ್ತ ಈ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಕುಂದಾಪುರದ ಕಲಾಸಕ್ತರಿಗೆ ಅಪರೂಪದ, ಅದ್ಬುತವಾಗಿರುವ ರಂಗಭೂಮಿ ನಾಟಕಗಳನ್ನು ನೋಡುವ ಅವಕಾಶ ಕಲ್ಪಿಸಲಾಗುತ್ತಿದೆ. ಕ್ಲಪ್ತ ಸಮಯಕ್ಕೆ ನಾಟಕಗಳು ಆರಂಭವಾಗುತ್ತದೆ. ನಾಟಕದ ಅಭಿಮಾನಿಗಳು ಐದೂ ನಾಟಕಗಳನ್ನು ನೋಡಬೇಕು ಎಂದರು.

ಜೇಸಿಐ ಕುಂದಾಪುರ ಪೂರ್ವಾಧ್ಯಕ್ಷರಾದ ನವೀನ್ ಶೇಟ್ ಮಾತನಾಡಿ, ನಾಟಕವನ್ನು ಕೊನೆಯ ತನಕ ನೋಡಿದವರಿಗೆ ಅದೃಷ್ಟ ಚೀಟಿಯ ಮೂಲಕ ಬೆಳ್ಳಿ ನಾಣ್ಯಗಳ ಬಹುಮಾನ ನೀಡಲಾಗುವುದು. ಇದು ಐದು ನಾಟಕಗಳಿಗೂ ಅನ್ವಯಿಸುತ್ತದೆ ಎಂದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!