spot_img
Wednesday, April 1, 2026
spot_img

ಪವಿತ್ರಾ ಮುಗ್ದೆ, ಆಕೆ ತಪ್ಪು ಮಾಡಿಲ್ಲ : ಪತ್ನಿಗಾಗಿ ಹರಕೆ ಹೊತ್ತ ಮಾಜಿ ಪತಿ ಸಂಜಯ್‌ ಸಿಂಗ್‌

ಜನಪ್ರತಿನಿಧಿ (ಬೆಂಗಳೂರು) : ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಪವಿತ್ರಾ ಗೌಡ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಈ ಬೆನ್ನಿಗೆ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ಪವಿತ್ರಾಗೆ ಜಾಮೀನು ದೊರಕಿರುವುದು ಖುಷಿ ಆಗುತ್ತಿದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ, ಮಾಜಿ ಪತ್ನಿ ಸಲುವಾಗಿ ತಾವು ಹರಕೆ ಹೊತ್ತಿರುವುದಾಗಿ ತಿಳಿಸಿದ್ದಾರೆ.

ಪವಿತ್ರಾಗೆ ಜಾಮೀನು ಸಿಕ್ಕಿರುವುದು ಖುಷಿ ಆಗುತ್ತಿದೆ. ಆ ದೇವರು ನನ್ನ ಮಾತು ಕೇಳಿದರು. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲಿಂದಲೂ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಮುಗ್ದೆ ಆಕೆ ತಪ್ಪು ಮಾಡಿಲ್ಲ. ಆಕೆ ಬಹಳ ಮಹತ್ವಾಕಾಂಕ್ಷೆ ಇರುವವಳು ಎಂದಿದ್ದಾರೆ. ಪವಿತ್ರಾಗೆ ಜಾಮೀನು ಸಿಕ್ಕಿರುವುದು ಮೊದಲು ಗೊತ್ತಿರಲಿಲ್ಲ. ಈಗ ನಾನು ಬೆಂಗಳೂರಿಗೆ ಟ್ರಿಪ್‌ಗೆ ಬಂದಿದ್ದೆ, ನನ್ನ ವೈಯಕ್ತಿಕ ಕೆಲಸ ಇತ್ತು ಹಾಗಾಗಿ ಬಂದಿದ್ದೇನೆ. ಅವರಿಗೆ ಜಾಮೀನು ಸಿಕ್ಕ ವಿಚಾರ ನನ್ನ ಸ್ನೇಹಿತರೊಬ್ಬರು ತಿಳಿಸಿದರು. ಈ 6 ತಿಂಗಳ ಹಿಂದೆ ಒಮ್ಮೆ ನಮ್ಮ ಮಾವನಿಗೆ ಫೋನ್ ಮಾಡಿದ್ದೆ, ಪವಿತ್ರಾ ಬಗ್ಗೆ ವಿಚಾರಿಸಿದೆ. ಈಗಲೂ ಪವಿತ್ರಾಗಾಗಿ ಕಾಯುತ್ತಿದ್ದೇನೆ. ಮುಂದೆಯೂ ಕಾಯುತ್ತೇನೆ ಎಂದು ಮಾಜಿ ಪತಿ ಸಂಜಯ್ ಸಿಂಗ್ ಮಾತನಾಡಿದ್ದಾರೆ.

ಮಾಜಿ ಪತಿ ಎಂಬ ಶಬ್ದ ಬಿಡಿ. ಪತಿ ಅಲ್ವಾ.. ಹಾಗಾಗಿ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದ್ದಕ್ಕೆ ಸಂತೋಷ ಆಗುತ್ತದೆ. ಹೇಗಾದರೂ ಅವರು ಹೊರಗೆ ಬರಲಿ ಅಂತ ನಾನು ಪ್ರತಿ ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಪವಿತ್ರಾ ಗೌಡ ಈ ಕೇಸ್​ನಿಂದ ಶಾಶ್ವತವಾಗಿ ಹೊರಗೆ ಬರಲಿ ಅಂತ ಹರಕೆ ಹೊತ್ತುಕೊಂಡಿದ್ದೇನೆ’ ಎಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!