spot_img
Wednesday, April 1, 2026
spot_img

ನಕಲಿ ದಾಖಲೆ ಸೃಷ್ಟಿ: ಸಹಕಾರಿ ಸಂಸ್ಥೆಯಿಂದ ಹಣ ಪಡೆದು ವಂಚನೆ: ದೂರು ದಾಖಲು

ಕುಂದಾಪುರ: ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಕೋಟೇಶ್ವರ ಗ್ರಾಮದ ದಿನೇಶ, ಹರೀಶ್ 10 ಲಕ್ಷ ರೂಪಾಯಿ ಸಾಲ ಪಡೆದಿದ್ದು ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ಸೊಸೈಟಿಗೆ ವಂಚನೆ ಮಾಡಿರುವುದಾಗಿ ರೋಜನರಿ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೋಟೇಶ್ವರ ಗ್ರಾಮದ ದಿನೇಶ್ ಹಾಗೂ ಹರೀಶ ರವರು ಜಂಟಿಯಾಗಿ ರೂಪಾಯಿ ಹತ್ತು ಲಕ್ಷ ಹಣವನ್ನು ಸಾಲವಾಗಿ ಪಡೆದಿದ್ದು ಸಾಲಕ್ಕೆ ಗೋಪಾಡಿ ಗ್ರಾಮದ ಸರ್ವೆ ನಂಬ್ರ: 96/7 ರಲ್ಲಿ 0.05 ಎಕ್ರೆ ಆಸ್ತಿಯನ್ನು ಅಡಮಾನ ಇರಿಸಿದ್ದು ಸ್ಥಿರಾಸ್ತಿಯನ್ನು ಕೃಷಿಯೇತರ ವಾಸ್ತವ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿದ್ದು  ಗೋಪಾಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಣೇಶ ಮತ್ತು ಕಾರ್ಯದರ್ಶಿ ಹರಿಶ್ಚಂದ್ರ ರವರು ಈ ಸ್ವತ್ತು ಸಂಖ್ಯೆ ನೀಡಿ ಖಾತೆಯನ್ನು ನೀಡಿದ್ದರು.  ದಿನೇಶ ಮತ್ತು ಹರೀಶ ರವರು ಸಾಲವನ್ನು ಮರುಪಾವತಿಸದೇ ಇದ್ದು, ಗಣೇಶ ಮತ್ತು ಹರಿಶ್ಚಂದ್ರ ರವರು ದಿನೇಶ ಮತ್ತು ಹರೀಶ ಅವರೊಂದಿಗೆ ಸೇರಿ ಆಸ್ತಿಗೆ ನೀಡಿದ ಈಸ್ವತ್ತು ಸಂಖ್ಯೆಯನ್ನು ಮರೆಮಾಚಿ ಪುನಃ ಎರಡು ನಕಲಿ ಈ ಸ್ವತ್ತು ಸಂಖ್ಯೆಯನ್ನು ಸೃಷ್ಟಿಸಿ, ಸಂಸ್ಥೆಗೆ ಮೋಸ ಮಾಡುವ ಉದ್ದೇಶದಿಂದ ಮಂಜುನಾಥ ಮತ್ತು ಪ್ರಭಾವತಿರವರೊಂದಿಗೆ ಸೇರಿ ತಲಾ 0.02 ಎಕ್ರೆಯಂತೆ ಒಟ್ಟು 0.04 ಎಕ್ರೆ ಆಸ್ತಿಯನ್ನು ಕ್ರಯ ಮೌಲ್ಯ ಪಡೆಯದೇ ಬೇನಾಮಿ ಕ್ರಯ ಪತ್ರ ಮಾಡಿದ್ದರು. ಆಪಾದಿತರೆಲ್ಲರೂ ಸೇರಿ ಸಮಾನ ಉದ್ದೇಶದಿಂದ ಸ್ಥಿರಾಸ್ತಿಯ ಈ ಸ್ವತ್ತು ಖಾತೆಯನ್ನು ದಿನಾಂಕ 27/04/2021 ರಂದು ನಕಲಿಯಾಗಿ ಸೃಷ್ಟಿಸಿ ರೋಜರಿ ಕ್ರೆಡಿಟ್ ಕೋ ಅಪರೇಟಿವ್ ಸಂಸ್ಥೆಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 119/2024 ಕಲಂ: 465, 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!