spot_img
Sunday, March 15, 2026
spot_img

ಮೊದಲ ವೃತ್ತಿಪರ ಭಾಗವತ ಮಹಿಳೆ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ

ಜನಪ್ರತಿನಿಧಿ ವಾರ್ತೆ| ಯಕ್ಷಗಾನದ ಮೊದಲ ಬಾರಿಗೆ ವೃತ್ತಿ ತಿರುಗಾಡ ಮಾಡಿದ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಇನ್ನೂ ನೆನಪು ಮಾತ್ರ. 78 ವರ್ಷ ಪ್ರಾಯದ ಲೀಲಾವತಿ ಬೈಪಾಡಿತ್ತಾಯ ವಯೋಸಹಜ ಕಾರಣದಿಂದ ಡಿ.14ರ ಸಂಜೆ ತಲಕಳದ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ತೆಂಕುತಿಟ್ಟು ಯಕ್ಷಗಾನದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ ಲೀಲಾವತಿ ಬೈಪಾಡಿತ್ತಾಯ ಸಾವಿರಾರು ಶಿಷ್ಯರನ್ನು ಸಿದ್ಧಪಡಿಸಿದ್ದರು. ಮಧೂರಿನಲ್ಲಿ ಜನಿಸಿದ ಇವರು ಶಾಲೆಗೆ ಹೋಗದಿದ್ದರೂ ಅಕ್ಷರಾಭ್ಯಾಸವನ್ನು ಸ್ವಸಾಮರ್ಥ್ಯದಿಂದ ಮಾಡಿದರು. ಯಕ್ಷಗುರುಗಳು, ಹಿಮ್ಮೇಳ ಕಲಾವಿದರು ಆದ ಹರಿನಾರಾಯಣ ಬೈಪಾಡಿತ್ತಾಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಪತಿಯ ಮೂಲಕವೇ ಭಾಗವತಿಕೆ ಅಭ್ಯಾಸ ಮಾಡಿ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡಲು ಕೂಡಾ ಅವಕಾಶವಿಲ್ಲದ ಕಾಲಘಟ್ಟದಲ್ಲಿ ಭಾಗವತರಾಗಿ ರಂಗಮಂಚ ಏರಿದ್ದು ಸುಲಭದ ಸಾಧನೆಯಲ್ಲ. ತೆಂಕು ತಿಟ್ಟಿನ ಅಗ್ರಮಾನ್ಯ ಕಲಾವಿದರನ್ನುರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದು.

ಪುತ್ತೂರು, ಕದ್ರಿ, ಕರ್ನಾಟಕ, ಇರಾ, ಕುಂಬಳೆ, ಬಪ್ಪನಾಡು, ತಲಕಳ,ಸುಬ್ರಹ್ಮಣ್ಯ ಮುಂತಾದ ಡೇರೆ ಮೇಳಗಳಲ್ಲಿ ೨೦ ವರ್ಷಗಳ ಕಾಲ ತಿರುಗಾಟ ಮಾಡಿದರು. ಬಳಿಕ ಅತಿಥಿ ಭಾಗವತರಾಗಿಯೂ ತಿರುಗಾಟ ಮಾಡಿದ್ದಾರೆ. ಆಟ, ಕೂಟ ಎರಡರಲ್ಲೂ ಭಾಗವತಿಕೆ ಮಾಡಿ ಅಪಾರ ಜನಮೆಚ್ಚುಗೆ ಗಳಿಸಿದ್ದರು. ಇವರಿಂದ ಸ್ಪೂರ್ತಿ ಪಡೆದು ಇವತ್ತು ಯಕ್ಷಗಾನದಲ್ಲಿ ಹಲವಾರು ಪ್ರತಿಭಾನ್ವಿತ ಭಾಗವತ ಮಹಿಳೆಯರು, ಹಿಮ್ಮೇಳ ವಾದಕರು, ಮುಮ್ಮೇಳ ಕಲಾವಿದರು ಬರುತ್ತಿರುವುದು ಕಾಣಬಹುದು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!