spot_img
Monday, March 16, 2026
spot_img

ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ 90ನೇ ವರ್ಷದ ಸಂಭ್ರಮಾಚರಣೆ

ಕುಂದಾಪುರ: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದ ವಾರ್ಷಿಕ ಮಹೋತ್ಸವ ಹಾಗೂ ೯೦ನೇ ವರ್ಷದ ಸಂಭ್ರಮಾಚರಾಣೆ ಡಿಸೆಂಬರ್ 11 ರಂದು ಬಹಳ ಅದ್ದೂರಿಯಾಗಿ ನಡೆಯಿತು. ದೇವಾಲಯವು ೯೦ ವರ್ಷ ಪೂರೈಸಿದ ಸಂದರ್ಭದಲ್ಲಿ, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತೀ ವಂದನೀಯ ಡಾ.ಎಲೋಶಿಯಸ್ ಪೌಲ್ ಡಿಸೋಜಾ ಪ್ರಧಾನ ಗುರುಗಳಾಗಿ ಆಗಮಿಸಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು.

ದೇವಾಲಯವು 90ನೇ ವರ್ಷದ ಸಂಭ್ರಮಾಚಾರಣೆ ಮಾಡುವ ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಆಶೀರ್ವಾದಗೈದು, ಮಕ್ಕಳನ್ನು ದೇವರ ಸೇವೆಗೆ ನಿಯೋಜಿಸಲು ಪೋಷಕರು ತಮ್ಮ ಮಕ್ಕಳನ್ನು ಉತ್ತೇಜಿಸಬೇಕು, ದೇವರ ಸೇವೆಗೆ. ಕರೆ ಬಂದಾಗ ಅವರನ್ನು ಕೈ ಹಿಡಿದು ಪ್ರೊತ್ಸಾ ಹಿಸಬೇಕು. ಯಾರು ದೇವರಲ್ಲಿ ಉದಾರಿಗಳಾಗುತ್ತಾರೋ, ಅವರು ಸಂಪೂರ್ಣವಾದ ಉದಾರಾತೆಯನ್ನು ಹೊಂದುತ್ತಾರೆ ಎನ್ನುವುದನ್ನು ಮರೆಯಬಾರದು. ದೇವರು ಇದುವರೆಗೆ ನಿಮ್ಮ ದೇವಾಲಯವನ್ನು. ಕಾಪಾಡಿದ್ದಾನೆ, ನಡೆಸಿದ್ದಾನೆ ಹಾಗೂ ಆಶೀರ್ಪದಿಸಿದ್ದಾನೆ. ಮುಂದೆಯೂ ಅವನು ಕಾಪಾಡಬೇಕು. ಪ್ರೀತಿಯ, ಒಗ್ಗಟ್ಟಿನ, ಒಬ್ಬರಿಗೊಬ್ಬರು ಆದರಿಸಿ, ಸುಧಾರಿಸಿ, ಸಹಾಯ ಮಾಡುವಂತಹ ದೇವಾಲಯ ಕಟ್ಟಲು ನಾವು ಮುನ್ನುಗ್ಗೋಣ. ಪ್ರತಿ ಭಾನುವಾರ. ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡು, ಆಶಕ್ತರಾಗಿರುವ, ಅವಶ್ಯಕತೆ ಇರುವ ನಿಮ್ಮ ನೆರೆ ಹೊರೆಯವರನ್ನು ನಿಮ್ಮ ತಮ್ಮ, ತಂಗಿ ಎಂದು ಭಾವಿಸಿ ನಿಮ್ಮ ಕೈಯೆಲ್ಲಾದಷ್ಟು ಸಹಾಯವನ್ನು ಮಾಡಲು ಪ್ರಯತ್ನಿಸಿ ಎಂದರು. “

ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಫಾ. ಪೌಲ್ ರೇಗೋ ಬಲಿಪೂಜೆಯೆಲ್ಲಿ ಭಾಗವಹಿಸಿ. ಶುಭ ಕೋರಿದರು. ವಲಯದ ಧರ್ಮಗುರುಗಳು, ಧರ್ಮಭಗಿನಿಯರು ಪೂಜೆಯೆಲ್ಲಿ ಪಾಲ್ಗೊಂಡರು.

ತಲ್ಲೂರು ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾ. ಎಡ್ವಿನ್ ಡಿಸೋಜಾ ಬಿಷಪ್ ರವರಿಗೆ ಸನ್ಮಾನಿಸಿದರು ಹಾಗೂ ಸಹಕರಿಸಿದ ಸರ್ವರಿಗೂ ವಂದಿಸಿದರು. ಈ ಸಂದರ್ಭದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಕ್ಯಾಲ್ವಿನ್ ಮೆಂಡೋನ್ಸ, ಕಾರ್ಯದರ್ಶಿ ರೀನಾ ಮೆಂಡೋನ್ಸ, ಆಯೋಗದ ಸಂಚಾಲಕರಾದ ಶ್ರೀಮತಿ ನೀತಾ ಮೆಂಡೋನ್ಸ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!