spot_img
Monday, February 16, 2026
spot_img

ಸಿತಾರ್-ಝಿತಾರ್: ಕುಮಾರ್ ಬೆರಳ ಮಾಂತ್ರಿಕತೆಗೆ ಕಿವಿಯಾದ ಶ್ರೋತೃಗಳು | ವಿರಾಸತ್‌ನಲ್ಲಿ ನೀಲಾದ್ರಿ ತರಂಗ, ಸಂಗೀತದ ಅಲೆಗಳ ಅನುರಣನ

ಜನಪ್ರತಿನಿಧಿ (ವಿದ್ಯಾಗಿರಿ / ಮೂಡುಬಿದಿರೆ): ವೈಭವದಿಂದ ಅಲಂಕೃತಗೊAಡ ಆಳ್ವಾಸ್ ವಿರಾಸತ್ ಸಭಾಂಗಣದ ಮೇಲೆ ಪಶ್ಚಿಮದಿಂದ ಸೂರ್ಯ ಹೊಂಗಿರಣ ಬೀರಿದರೆ, ಇತ್ತ ಪೂರ್ವದ ಕೋಲ್ಕತ್ತಾದಿಂದ ಬಂದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ತರಂಗಗಳ ಕಂಪನದ ಅಲೆ ಸೃಷ್ಟಿಸಿದರು. ದೃಶ್ಯ-ಶ್ರವ್ಯಕ್ಕೆ ಬೆರಗಾದ ಜನತೆ ತಲೆದೂಗಿದರು. ನೀಲಾದ್ರಿಯ ಬೆರಳುಗಳ ಸಂಚಲನದ ಕಂಪನ- ತರಾಂಗAತರAಗಕ್ಕೆ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರವೇ ನಿನಾದಲ್ಲಿ ತುಂಬಿತ್ತು.

ತಾವೇ ಅಭಿವೃದ್ಧಿ  ಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ವರ್ಣದ ‘ಝಿತಾರ್’ ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ ಸಂಯೋಜನೆಯ ‘ಸಮ್ಮಿಲನ’ (ಫ್ಯೂಜನ್) ಮೂಲಕ ಕಛೇರಿಗೆ ನಾಂದಿ ಹಾಡಿದರು.

ಇದು ‘ಸೌಂಡ್ ಚೆಕ್’ ಎಂದು ಹಾಸ್ಯವಾಡಿದ ನೀಲಾದ್ರಿ, ‘ರಾಗಗಳು ಇನ್ನಷ್ಟೇ ಶುರುವಾಗ ಬೇಕು’ ಎಂದು ಪ್ರೇಕ್ಷಕರಿಗೆ ಪಂಚ್ ನೀಡಿದರು.

‘ಗ್ರೇಟ್ ಗ್ಯಾಂಬ್ಲರ್’ ಸಿನಿಮಾದ ‘ದೋ ಲಬ್ಜೋ ಕೀ ಹೇ’ ನಾದದ ಮೂಲಕ ಮತ್ತೆ ಚಾಲನೆ ನೀಡಿದ ಅವರು, ಬಳಿಕ ‘ಕರ್ಜ್’ ಸಿನಿಮಾದ ‘ ಏಕ್ ದಿವಾನಾ ಥಾ..’ ಸ್ವರ ನುಡಿಸಿದರು.

ಮಹಾತ್ಮ ಗಾಂಧೀಜಿಯ ನೆಚ್ಚಿನ ‘ವೈಷ್ಣವ ಜನತೋ..’ ನುಡಿಸಿದರು. ಇದರ ಕನ್ನಡ ಅವತರಣಿಕೆ, ‘ ಪರಹಿತ ಬಯಸೋ’ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಮೆಚ್ಚಿನ ಹಾಡಾಗಿದ್ದು, ಆಳ್ವಾಸ್ ಧ್ಯೇಯ ಗೀತೆಯಂತಿದೆ. ಹೀಗಾಗಿ ನೆರೆದಿದ್ದ ಮಕ್ಕಳು ತಕ್ಷಣವೇ ಗುರುತಿಸಿದರು.

ಇಡೀ ವೇದಿಕೆಯಲ್ಲಿ ‘ ವೈಷ್ಣವ ಜನತೋ’ ಅನುರಣಿಸಿತು. ‘ರಘುಪತಿ ರಾಘವ ರಾಜಾ ರಾಂ’ ಎನ್ನುತ್ತಲೇ ಗಾಂಧಿ ‘ಸತ್ಯ- ಅಹಿಂಸೆ’ ತತ್ವಗಳ ಜೈನಕಾಶಿ ಜನತೆ ಭಜಿಸಿದರು. ಆಳ್ವಾಸ್ ನೆಲದಲ್ಲಿ ಸಾಬರಮತಿ ಆಶ್ರಮದ ಸ್ಮರಣೆಯ ಮಾಡಿದರು.

‘ಸವಾಲ್ ಜವಾಬ್’ ಮಾದರಿಯಲ್ಲಿ ತಬಲಾ ವಾದಕ ಅಮಿತ್ ಕವ್ಟೇಕರ್ ಜೊತೆ ಕಿರು ಜುಗಲ್ ಬಂಧಿ ನಡೆಸಿದರು. ಶಿಖರ್ ನಾದ್ ಖುರೇಷಿ ಅವರು ತಬಲಾ ನಾದ ಮಿಶ್ರಿತ ಆಫ್ರಿಕನ್ ಜಂಬೆಯಲ್ಲಿ ಜೊತೆಯಾದರು. ತಕ್ಷಣವೇ ವಯೋಲಿನ್ ನಲ್ಲಿದ್ದ ಯಾದ್ನೇಶ್ ರಾಯ್ಕರ್ ‘ಸವಾಲ್’ ಸ್ವೀಕರಿಸಿದರು. ಶಿಖರ್ ನಾದ್ ಖುರೇಷಿ ಜಂಬೆಯಲ್ಲಿ ‘ಜವಾಬ್’ ನೀಡಿದರು. ಪ್ರೇಕ್ಷಕರು ಕರತಾಡನ ಮೂಲಕ ತಾಳ ಹಾಕಿದರು.

ನೀಲಾದ್ರಿ ಬೆರಳ ಸ್ಪರ್ಶವು ಶ್ರೋತೃಗಳ ಕರ್ಣದಲ್ಲಿ ಅನುರಣಿಸುತ್ತಿತು. ಮುಂಗುರುಳ ಸರಿಸಿದ ತರುಣಿಯರು, ಚುಮುಚುಮು ಚಳಿಗೆ ಕೆನ್ನೆಗೆ ಕೈ ಇಟ್ಟ ಮಕ್ಕಳು, ತಲೆಗೆ ಕೈ ಇಟ್ಟು ಕುಳಿತ ಹಿರಿಯರು.. ಎಲ್ಲರೂ ಮಂತ್ರ ಮುಗ್ಧ ಗೊಂಡು ನಿನಾದಕ್ಕೆ ಕಿವಿಯಾದರು.

೩೦ನೇ ವರ್ಷದ ಆಳ್ವಾಸ್ ವಿರಾಸತ್‌ನಲ್ಲಿ ಬುಧವಾರ ಉತ್ತರದ ಹಿಂದೂಸ್ತಾನಿ ಗಾನ ಹೊಮ್ಮಿದರೆ, ಗುರುವಾರ ಪಶ್ಚಿಮದ ಗುಜರಾತಿನ ಗಜಲ್-ಭಜನ್ ನಿನಾದ. ಶುಕ್ರವಾರದ ಮುಸ್ಸಂಜೆಯಲ್ಲಿ ಪೂರ್ವದ ಕೋಲ್ಕತ್ತಾದ ನೀಲಾದ್ರಿ ಕುಮಾರ್ ಅವರ ಸಿತಾರ್ ತರಂಗಗಳ ಕಂಪನ.

ಭಾರತೀಯ ಶಾಸ್ತ್ರೀಯ ಸಂಗೀತದ ಸ್ವತಂತ್ರ ಚಿಂತಕ, ಉತ್ಸಾಹದ ಚಿಲುಮೆ, ಪ್ರಯೋಗಮತಿ ಎಂಬ ಖ್ಯಾತಿಯ ನೀಲಾದ್ರಿ ಕುಮಾರ್,  ರಾಗ ತಾಳ ಮಾತ್ರವಲ್ಲ ಪ್ರೇಕ್ಷಕರ ಜೊತೆಯೂ ಚಪ್ಪಾಳೆ ಮೂಲಕ ತಾಳ ಪ್ರಯೋಗ ನಡೆಸಿದರು.

ಐದನೇ ತಲೆಮಾರಿನ ಸಿತಾರ್ ವಾದಕರಾದ ನೀಲಾದ್ರಿ  ಮಿಶ್ರ ಗರಾ ರಾಗದಲ್ಲಿ ನಂತರ ಸಿತಾರ್ ನುಡಿಸಿದರು. ಕೇವಲ ಪ್ರಯೋಗಶೀಲ ಮಾತ್ರವಲ್ಲ, ಸಾಂಸ್ಕೃತಿಕ- ಸಾಂಪ್ರದಾಯಿಕ ಪಟ್ಟುಗಳನ್ನು ಲೀಲಾಜಾಲವಾಗಿ ಪ್ರಯೋಗಿಸಬಲ್ಲ ಅವರು ಮಿಶ್ರ ಗರಾ ರಾಗವನ್ನು ವಿಸ್ತರಿಸುತ್ತಾ ಹೋದರು. ಮಿಶ್ರ ಗರಾ ರಾಗವು ತುಳಸೀ ದಾಸರ ಮೆಚ್ಚಿನ ರಾಗ ವಾಗಿದ್ದು, ಕೋಲ್ಕತ್ತಾದಲ್ಲಿ ಭಜನೆಯಲ್ಲಿ ಹೆಚ್ಚಾಗಿ ನುಡಿಸುತ್ತಾರೆ. ಇದರ ಮೂಲ ರಾಗ ‘ಗರಾ’ ಮೂಲಕ ‘ರಘುಪತಿ ರಾಘವ ರಾಜಾರಾಂ’ ಧುನ್ ಭಜನ್ ನುಡಿಸಿದ್ದರು. ಸಿತಾರ್ ನ ‘ಜಾಲಾ’ ಮೂಲಕ ಪ್ರೇಕ್ಷಕರ ಮನ ಸೆಳೆದರು.

ನಂತರ ‘ವೈಷ್ಣವ ಜನತೋ… ಖಮಾಜ್’ ರಾಗದಲ್ಲಿ ನೀಲಾದ್ರಿ ಹಾಗೂ ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಜುಗಲ್ ಬಂಧಿ ನಡೆಸಿದರು. ನೀಲಾದ್ರಿ  ಕೇವಲ ಎಡ ಕೈಯಲ್ಲಿ ಮಾತ್ರ ಝಿತಾರ್ ನುಡಿಸಿ, ಚಕಿತಗೊಳಿಸಿದರು.

ಅನಂತರ, ತಮಿಳಿನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಜಾನಕಿ ಹಾಡಿದ ಯುಗಳ ‘ಮಲರೇ ಮೌನಮೇ’ ನುಡಿಸಿದರು.

ಬಳಿಕ ಹಂಸಧ್ವನಿ ರಾಗದ ‘ವಾತಾಪಿ ಗಣಪತಿಂ ಭಜೇ…’ ಗೆ ಹೊರಳಿದರು.

ಬಳಿಕ ‘ಚಾರುಕೇಶಿ’ ರಾಗದ ಮೂಲಕ ಶುರು ಮಾಡಿ ಭೈರವಿ ರಾಗಮಾಲಿಕೆ ಪ್ರಸ್ತುತ ಪಡಿಸಿದರು. ಶುದ್ಧ ಸಾಣಿಕೆ ನುಡಿಸಾಣಿಲೆ ಮೂಲಕ ಎರಡು ಗಂಟೆಗಳ ಕಛೇರಿ ಮುಕ್ತಾಯಗೊಳಿಸಿದರು.

ನೀಲಾದ್ರಿ ಸಿತಾರ್ ತರಂಗಗಳನ್ನು ಸೃಷ್ಟಿಸಿದರೆ, ಝಿತಾರ್ ಅಲೆಗಳನ್ನೇ ಸೃಷ್ಟಿಸಿ ಹೊನಲಾಗಿಸಿತು. ಆ ಮೂಲಕ ಯುವಜನತೆಯನ್ನು ಶಾಸ್ತ್ರೀಯ ಸಂಗೀತದೆಡೆಗೆ ಸೆಳೆದರು.

ತಬಲಾದಲ್ಲಿ ಅಮಿತ್ ಕವ್ಟೇಕರ್, ಕೀ ಪ್ಯಾಡ್ ನಲ್ಲಿ ಆ್ಯಂಜಲೋ ಫೆರ್ನಾಂಡಿಸ್, ಡ್ರಮ್ಸ್ ಮತ್ತು ಸ್ವರಮೇಳದಲ್ಲಿ  ಉಸ್ತಾದ್ ಅಲ್ಲಾ ರಖಾ ಖಾನ್ ಪರಂಪರೆ ಹಾಗೂ ಝಾಕೀರ್ ಹುಸೇನ್ ಸಂಬAಧಿ ಶಿಖರ್ ನಾದ್ ಖುರೇಷಿ, ವಯೋಲಿನ್ ನಲ್ಲಿ ಯಾದ್ನೇಶ್ ರಾಯ್ಕರ್ ಸಾಥ್ ನೀಡಿದರು.

ಪಶ್ಚಿಮ ಬಂಗಾಳದ ಕೋಲ್ಕತ್ತಾದ ನೀಲಾದ್ರಿ, ಅವರ ತಂದೆ ಪಂಡಿತ ಕಾರ್ತಿಕ್ ಕುಮಾರ್ ಮೂಲಕ ಸಿತಾರ್ ಕಲಿತರು. ತಂದೆ ಕಾರ್ತಿಕ್ ಕುಮಾರ್ ಪಂಡಿತ ರವಿಶಂಕರ್ ಅವರ ಶಿಷ್ಯರಾಗಿದ್ದರು.

೬ ವರ್ಷ ಇದ್ದಾಗಲೇ ಸಂಗೀತ ಕಛೇರಿ ನೀಡಿದ್ದ ಕುಮಾರ್, ೧೫ ವರ್ಷದಲ್ಲೇ ತನ್ನ ಆಲ್ಪಂ ಮಾಡಿದ್ದರು.

ಎ.ಆರ್. ರೆಹಮಾನ್, ಸೆಲ್ವಗಣೇಶ್ ಮತ್ತಿತರ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಝಾಕೀರ್ ಹುಸೇನ್ ಅವರ ಜೊತೆ ತಾಳವಾದ್ಯ ನುಡಿಸಿದ್ದಾರೆ.

ಪ್ಲಕ್‌ಡ್ (೨೦೧೪), ಸುರ್ ಯಜ್ಞ (೨೦೧೩), ಟುಗೆದರ್ (೨೦೧೧), ಔರ್ (೨೦೧೦), ಪ್ರಿಯಾರಿಟಿ (೨೦೦೮), ಝಿತಾರ್ (೨೦೦೭), ಸಿತಾರ್ ಗೇಜ್ (೨೦೦೪), ಸಂಜಾ ಸುರ್ (೨೦೦೩), ಐಎಫ್ (೨೦೦೨), ಧಾರೋಹರ್ (೨೦೦೦), ರೆವೆಲೇಷನ್ (೧೯೯೮), ಟುಗೆದರ್ (೧೯೯೫) ಹಾಗೂ ಟಚ್ ಈಸ್ ಆಲ್ ಟೇಕ್, ಹೆಡ್ ಟು ಹಾರ್ಟ್ ನೀಲಾದ್ರಿ ಅವರ ಪ್ರಮುಖ ಆಲ್ಬಂಗಳಾಗಿವೆ.

ಅವರು  ಮನೋಹರಿ (ಬಾಹುಬಲಿ), ಚುಪ್ ಚುಪ್ ಕೇ (ಬಂಟಿ ಔರ್ ಬಬ್ಲಿ),. ಮೇಕ್ ಸಮ್ ನಾಯಿಸ್ (ದೇಸಿ ಬಾಯಿಸ್), ನಾ ಜಾನೇ ಕೋಯಿ (ಗ್ಯಾಂಗ್‌ಸ್ಟರ್), ಅಲ್‌ವಿದಾ, ಇನ್ ದಿನೋ, ಕಾರ್ ಸಲಾಮ್ (ಲೈಫ್ ಇನ್ ಮೆಟ್ರೋ) ಬಾಲಿವುಡ್ ಹಾಡುಗಳಿಗೆ ಝಿತಾರ್ ನುಡಿಸಿದ್ದಾರೆ.

ಸುನ್‌ರಹಾಹೇನಾ ತೂ (ಆಶಿಕಿ-೨, ಅಂಕಿತ್ ತಿವಾರಿ ಹಾಡಿದ), ಕ್ರೇಜಿ ಕಿಯಾ ರೇ (ಧೂಮ್-೨, ಅಭಿಷೇಕ್ ಬಚ್ಚನ್, ಹೃತಿಕ್ ರೋಷನ್, ಬಿಪಾಷಾ ಬಸು), ಜಾಗವೇ ಸಾರಿ ರೆಯ್ನಾ (ದೇದೇ ಇಷ್ಕ್ಕಿಯಾ), ದೀರೇ ಜಲ್ನಾ (ಪಹೇಲಿ- ಶಾರೂಕ್ ಖಾನ್, ರಾಣಿ ಮುಖರ್ಜಿ), ಎಕ್ ಓ ದಿನ್ (ಚಾಚಿ ೪೨೦), ದೋಲ್ನಾ (ದಿಲ್ ತೋ ಪಾಗಲ್ ಹೇ), ಬಾದಲ್ ಉಟಿಯಾ (ಮಾತ್ರು ಕೀ ಬಿಜಿಲೀ ಕಾ ಮಂಡೋಲಾ), ನೈನಾ (ಓಂಕಾರ್), ಆವಾರಾ (ಸಾತ್ ಕೂನ್ ಮಾಫ್), ಪಿಯಾ ಬಸಂತೀ ರೇ (ಉಸ್ತಾದ್ ಸುಲ್ತಾನ್ ಖಾನ್), ಶಾಯದ್ ಏ ತೋ ಪ್ಯಾರ್ ಹೇ (ಲಕ್ಕಿ ನೋ ಟೈಮ್ ಫಾರ್ ಲವ್) ಸಿತಾರ್ ನುಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!