spot_img
Friday, December 13, 2024
spot_img

ಕೊಡಿ ಹಬ್ಬದ ಕಟ್ಟೆ ಪೂಜೆ : ಭಂಡಾರ್ಕಾರ್ಸ್‌ ಕಾಲೇಜಿನಲ್ಲಿ ಯಕ್ಷೋನ್ನತಿ ಕಲಾ ತಂಡದವರಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ

ಜನಪ್ರತಿನಿಧಿ (ಕುಂದಾಪುರ) : ಭಂಡಾರ್‌ಕಾರ್ಸ್‌ ಕಾಲೇಜು ಕುಂದಾಪುರದಲ್ಲಿ ಶುಕ್ರವಾರ (13/12/2024) ಸಂಜೆ 7 ಗಂಟೆಗೆ ಕೊಡಿ ಹಬ್ಬದ ಕಟ್ಟೆ ಪೂಜೆಯ ಪ್ರಯುಕ್ತ ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ಶಶಾಂಕ್‌ ಪಟೇಲ್‌ ಕೆಳಮನೆ ನೇತೃತ್ವದ ಯಕ್ಷೋನ್ನತಿ ಕಲಾ ತಂಡ, ಬ್ರಹ್ಮಾವರ ಇವರಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಸೌಧದ ಎದುರು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮುಮ್ಮೇಳದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಭಾಗವತ ಲಂಬೋದರ ಹೆಗಡೆ ಹಾಗೂ ಬಳಗದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!