spot_img
Wednesday, April 1, 2026
spot_img

ಎಸ್‌ಎಂಕೆ ನಿಧನ : ಕರ್ನಾಟಕದ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದರು : ಪ್ರಧಾನಿ ನರೇಂದ್ರ ಮೋದಿ

ಜನಪ್ರತಿನಿಧಿ (ನವ ದೆಹಲಿ) : ಎಂದಿಗೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೇ ಶ್ರಮಿಸಿದ್ದ ನಾಯಕ ಎಸ್.ಎಂ.ಕೃಷ್ಣರ ನಿಧನ ಅತೀವ ದುಃಖ ತಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅಸ್ತಂಗತರಾಗಿರುವ  ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಕೃಷ್ಣ ಅವರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು, ಸಂತಾಪ ಸೂಚಿಸಿದ್ದಾರೆ.

ಎಸ್ಎಂ ಕೃಷ್ಣ ನಿಧನ ಅತೀವ ದುಃಖ ತಂದಿದೆ. ಕಳೆದ ಕೆಲ ವರ್ಷಗಳಲ್ಲಿ ಎಸ್ಎಂ ಕೃಷ್ಣ ಅವರ ಜೊತೆ ಮಾತನಾಡುವ, ಭೇಟಿ ಮಾಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿತ್ತು. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ಬಳಗಕ್ಕೆ ಸಂತಾಪ ಸೂಚಿಸುತ್ತೇನೆ.

ಎಸ್ಎಂ ಕೃಷ್ಣ ಅಪ್ರತಿಮ ನಾಯಕನಾಗಿದ್ದರು. ಸಮಾಜ ಎಲ್ಲಾ ವರ್ಗದ ಜನರಿಂದ ಮೆಚ್ಚುಗೆಗೆ ಹಾಗೂ ಗೌರವಕ್ಕೆ ಪಾತ್ರರಾಗಿದ್ದ ನಾಯಕ. ಸಮಾಜ ಪ್ರತಿಯೊಬ್ಬರ ಜೀವನ ಸುಧಾರಣೆಗೆ ದಣಿವರಿಯದೇ ಶ್ರಮಿಸಿದ ನಾಯಕ ಎಸ್ಎಂ ಕೃಷ್ಣ. ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ಮೂಲಭೂತ ಸೌಕರ್ಯದಲ್ಲಿ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ್ದರು. ವಿಶೇಷ ಅಂದರೆ ಎಸ್ಎಂ ಕೃಷ್ಣ ಓದುಗ ಹಾಗೂ ಚಿಂತರಾಗಿದ್ದರು ಎಂದು ಹೇಳಿದ್ದಾರೆ.

Shri SM Krishna Ji was a remarkable leader : Narendra Modi

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!