spot_img
Tuesday, March 17, 2026
spot_img

ಕಾರ್ಯಾಂಗದ ಮೂಲಕ ಕೆಲಸ ಮಾಡಿಸಲು ಸಾಧ್ಯವಾಗದಿರುವುದು ಶಾಸಕರುಗಳ ನಿಷ್ಕ್ರಿಯತೆ : ವಿಕಾಸ್‌ ಹೆಗ್ಡೆ ಆಕ್ರೋಶ

ಜನಪ್ರತಿನಿಧಿ (ಉಡುಪಿ) : ಉಡುಪಿ ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ಸಮಸ್ಯೆಗಳಿಗೆ ಶಾಸಕರುಗಳ ನಿಷ್ಕ್ರೀಯತೆಯೇ  ಕಾರಣ. ಗಾಣಿಗಾರಿಕೆ, ಅಗತ್ಯ ವಸ್ತುಗಳ ಪೂರೈಕೆಗೆ ನೀತಿ, ನಿಯಮ, ಕಾನೂನುಗಳನ್ನು ರೂಪಿಸುವವರು ಶಾಸನ ಸಭೆಯ ಸದಸ್ಯರು, ಇವರು ರೂಪಿಸಿದ ನೀತಿ, ನಿಯಮ, ಕಾನೂನಿನ ಅಡಿ ಕೆಲಸ ಮಾಡುವವರು ಕಾರ್ಯಾoಗ. ಇವತ್ತು ಜಿಲ್ಲೆಯ ಶಾಸಕರುಗಳು ಕಾರ್ಯಾಂಗದ ಮೂಲಕ ಕೆಲಸ ಮಾಡಿಸಲು ಸಾಧ್ಯವಾಗದೆ ಇರುವುದು ಶಾಸಕರುಗಳ ನಿಷ್ಕ್ರೀಯತೆಯತೆ ಕಾರಣ. ಜಿಲ್ಲೆಯ ಶಾಸಕರು ಸಂಪೂರ್ಣ ನಿಷ್ಕ್ರಿಯರಾಗಿದ್ದರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ಹೊರ ಹಾಕಿದ್ದಾರೆ.

ಇವತ್ತು ಜನಸಾಮಾನ್ಯರ ಬೇಡಿಕೆ ಪೂರೈಸುವ ಹೊಣೆಗಾರರಾಗಿರುವ ಜನಪ್ರತಿನಿದಿನಗಳು ಅದನ್ನು ಬಿಟ್ಟು ಧರಣಿ ಕೂರುತ್ತೇವೆ ಎನ್ನುವುದು ಕೇವಲ ರಾಜಕಾರಣ ಬಿಟ್ಟರೆ ಬೇರೆ ಏನೂ ಅಲ್ಲ. ಸರ್ಕಾರದ ನೀತಿ, ನಿಯಮ, ಕಾನೂನು ಜನವಿರೋಧಿ ಇದೆ ಎಂದು ಕಂಡುಬಂದರೆ ಅದನ್ನು ಸಡಿಲೀಕರಣಗೊಳಿಸುವ ಇಲ್ಲಾ ಬದಲಾವಣೆ ಮಾಡುವ ಅಧಿಕಾರ ಇರುವ ಶಾಸನ ಸಭೆಯ ಸದಸ್ಯರು ತಮ್ಮ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಕಾರ್ಯಾಂಗವನ್ನು ಬೊಟ್ಟು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳೂ ಸಹ ಮನಬಂದಂತೆ ವರ್ತಿಸಲು ಅವರೇನು ಸರ್ವಧಿಕಾರಿಗಳು ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಬೇಡಿಕೆಗೆ ಅನುಗುಣವಾಗಿ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರ ಕೂಡ ಆದಷ್ಟು ಬೇಗ ಉಡುಪಿ ಜಿಲ್ಲೆಯಲ್ಲಿನ ನಿರ್ಮಾಣ ಕಾಮಗಾರಿಗಳ ಅಗತ್ಯ ವಸ್ತುಗಳ ಕಾನೂನು ಬದ್ಧ ಪೂರೈಕೆಗೆ ಕೂಡಲೇ ಕ್ರಮವಹಿಸಬೇಕು ಎಂದವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!