spot_img
Monday, February 16, 2026
spot_img

ಕಸ್ತೂರಿ ರಂಗನ್ ವರದಿ: ಕಾನೂನು ಹೋರಾಟ ಸದ್ಯ ನಮಗಿರುವ ದಾರಿ-ಶಾಸಕ ಗುರುರಾಜ ಗಂಟಿಹೊಳೆ

ಅಂಪಾರು: ಕಸ್ತೂರಿ ರಂಗನ್ ವರದಿ ಜ್ಯಾರಿಯಾಗುವ ಹಂತದಲ್ಲಿದೆ. ಈಗಾಗಲೇ ಅದರ ಬೇರುಗಳು ತುಂಬಾ ಆಳಕ್ಕೆ ಹೋಗಿ ಆಗಿದೆ. ಈಗ ಕಾನೂನು ಹೋರಾಟ ಒಂದೇ ನಮಗಿರುವ ದಾರಿ. ಆ ನಿಟ್ಟಿನಲ್ಲಿ ಸಮೃದ್ದ ಬೈಂದೂರು ಫೌಂಡೇಶನ್ ಕಾನೂನು ತಜ್ಞರ ಮೂಲಕ ಮಾಹಿತಿ ಸಂಗ್ರಹ ಮಾಡುತ್ತಿದೆ. ಕಾನೂನು ಹೋರಾಟ ಒಂದು ದಿಕ್ಕಿನಲ್ಲಿ ಸಾಗಿದರೆ ಸರ್ಕಾರವನ್ನು ಭೌತಿಕ ಸರ್ವೇಗೆ ಒತ್ತಾಯಿಸುವ ಹಿನ್ನೆಯಲ್ಲಿ ಇನ್ನೊಂದು ರೀತಿಯಲ್ಲೂ ಒತ್ತಡ ತರುವ ಕೆಲಸಗಳು ಆಗಬೇಕು, ವರದಿಯಲ್ಲಿ ಆಗಿರುವ ವೈಫಲ್ಯಗಳನ್ನು ಸಾಕ್ಷ್ಯಧಾರಗಳೊಂದಿಗೆ ಸಂಬಂಧಪಟ್ಟವರಿಗೆ ಮುಟ್ಟಿಸುವ ಕೆಲಸ ಆಗಬೇಕು. ಆ ಹಿನ್ನೆಲೆಯಲ್ಲಿ ಒಂದು ಗ್ರಾಮವನ್ನು ಮಾದರಿಯಾಗಿ ತಗೆದುಕೊಂಡು ಸಂಪೂರ್ಣ ಸರ್ವೇ ಮಾಡಿದರೆ ಸತ್ಯಾಂಸ ತಿಳಿಯುತ್ತದೆ. ಕಸ್ತೂರಿ ರಂಗನ್ ವರದಿಯಲ್ಲಿ ಸೇರಿದೆ ಎನ್ನಲಾದ ಒಂದು ಗ್ರಾಮವನ್ನು ಪ್ರಾರಂಭದಲ್ಲಿ ಸರ್ವೇ ಮಾಡಿದರೆ ಕಾನೂನು ಹೋರಾಟಕ್ಕೂ ಅನುಕೂಲವಾಗುತ್ತದೆ ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಹೇಳಿದರು.

ಅವರು ಡಿಸೆಂಬರ್ 6 ಶುಕ್ರವಾರ ಅಂಪಾರು ಮಹಿಷಾಮರ್ದಿನಿ ಸಭಾಂಗಣದಲ್ಲಿ ನಡೆದ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಉಡುಪಿ ಹಾಗೂ ಬೈಂದೂರು ಫೌಂಡೇಶನ್ ವತಿಯಿಂದ ಬೈಂದೂರು ಕುಂದಾಪುರ, ಕಾರ್ಕಳ, ಕಾಪು, ಹೆಬ್ರಿ, ಬ್ರಹ್ಮಾವರ ತಾಲೂಕಿನ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಬಾಧಿತ ಗ್ರಾಮಗಳ ಪ್ರಮುಖರ ವಿಚಾರ ವಿನಿಮಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯ ನ್ಯಾಯವಾದಿ ಟಿ.ಬಿ ಶೆಟ್ಟಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಪ್ರಾರಂಭದಲ್ಲೇ ಅವೈಜ್ಞಾನಿಕವಾಗಿದೆ. ಉಪಗ್ರಹದ ಮೂಲಕ ಕಾಣುವುದೆಲ್ಲವನ್ನು ಅರಣ್ಯವೆಂದು ಪರಿಗಣಿಸುವುದು ತಪ್ಪು. ಮಾಹಿತಿ ಕ್ರೋಢೀಕರಣ ಮಾಡದೇ ತಪ್ಪು ಮಾಹಿತಿಯನ್ನೇ ನೀಡಿದರು. ಅದು ಇವತ್ತು ಮಾರಕವಾಗುತ್ತಿದೆ. ಒಂದು ಗ್ರಾಮದ ಭೌತಿಕ ಸರ್ವೇ ಆದರೆ ಇದರ ಅವೈಜ್ಞಾನಿಕತೆ ಗೊತ್ತಾಗುತ್ತದೆ. ಇದೇ ವಿಷಯಕ್ಕೆ ಕೇರಳ ಸರ್ಕಾರ ಅಲ್ಲಿ ತಜ್ಞರ ಸಮಿತಿ ಮಾಡಿತು. ನಿರಂತರ ಪ್ರಯತ್ನಗಳ ಮೂಲಕ ಅವರು ಅದರಲ್ಲಿ ಯಶಸ್ಸು ಸಾಧಿಸಿದರು. ಅದೇ ರೀತಿ ಕರ್ನಾಟಕದಲ್ಲಿಯೂ ಆದರೆ ಅನುಕೂಲವಾಗುತ್ತದೆ. ನಾವು ಇನ್ನೂ ನಿದ್ರಾವಸ್ಥೆಯಲ್ಲೇ ಇರಬಾರದು. ಕಾರ್ಯಪ್ರವೃತ್ತವಾಗಲೇಬೇಕು. ಸಮಗ್ರ ಮಾಹಿತಿ ಕಲೆಹಾಕಿ ಹಸಿರು ಪೀಠದ ಮುಂದೆ ಹೋಗಲು ಕೂಡಾ ಸಿದ್ಧರಾಗಬೇಕು ಎಂದರು.

ನ್ಯಾಯವಾದಿ ಸತ್ಯನಾರಾಯಣ ಉಡುಪ ಮಾತನಾಡಿ ಭೌತಿಕ ಸರ್ವೇ ಆದರೆ ಉಡುಪಿ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳು ಬಿಟ್ಟು ಹೋಗಬಹುದು. ರಾಜ್ಯ ಸರ್ಕಾರ ವರದಿ ತಿರಸ್ಕಾರ ಮಾಡಿದೆ ಎನ್ನುತ್ತಿದೆ ಇದು ಅರ್ಥವಿಲ್ಲ, ಈಗ ಸರ್ಕಾರವೇ ಗ್ರಾಮಗಳ ಭೌತಿಕ ಸರ್ವೇಗೆ ಆದೇಶ ಮಾಡಬೇಕು. ಪ್ರತಿಗ್ರಾಮಗಳಲ್ಲಿ ಗ್ರಾಮ ಮಟ್ಟದಲ್ಲಿ ಸಮಿತಿ ಮಾಡಿಕೊಂಡರೆ ಪರಿಣಾಮಕಾರಿಯಾಗಬಲ್ಲದು. ಒಟ್ಟಾರೆ ಈಗ ನಮ್ಮ ಜನ ಜೀವನಕ್ಕೆ ತೊಂದರೆ ಆಗದ ರೀತಿ ಅನುಷ್ಟಾನ ಆಗಬೇಕು ಅಷ್ಟು ಮಾತ್ರ ಉಳಿದಿದೆ ಎಂದರು.

ಹಿತರಕ್ಷಣಾ ವೇದಿಕೆ ದಕ್ಷಿಣ ಕನ್ನಡದ ಅಧ್ಯಕ್ಷ ಕಿಶೋರ್ ಕಿರಾಡಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿ ಎಲ್ಲಾ ಗ್ರಾಮ ಪಂಚಾಯತ್‌ಗಳು ನಿರ್ಣಯ ಮಾಡಿವೆ. ಈ ನಿರ್ಣಯಗಳು ನಮ್ಮ ಹೋರಾಟಕ್ಕೆ ಅಗತ್ಯವಾಗುತ್ತದೆ. ರಾಜ್ಯ ಸರ್ಕಾರ ಜಂಟಿ ಸರ್ವೇಗೆ ಆದೇಶ ಮಾಡಿ, ಗಡಿ ಗುರುತು ಮಾಡುವ ಕೆಲಸ ಆಗಬೇಕು ಎಂದರು.

ಮಲೆನಾಡು ಜನ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ.ಅತುಲ್ ಕುಮಾರ್ ಶೆಟ್ಟಿ ಮಾತನಾಡಿ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯದ ಬಾಧಿತ ಗ್ರಾಮಗಳಲ್ಲಿ ಮುಂದೆ ಏನಾಗುತ್ತದೋ ಆತಂಕವಿದೆ. ಈ ವರದಿ ಪ್ರಾರಂಭದಿಂದಲೇ ಅವೈಜ್ಞಾನಿವಾಗಿದೆ. ಪ್ರಾರಂಭದಿಂದ ಇಂದಿನ ತನಕವೂ ಸರಿಯಾದ ಮಾಹಿತಿ ಕೊಡಲಿಲ್ಲ. ಗ್ರಾಮ ಪಂಚಾಯತ್‌ಗಳ ಗಮನಕ್ಕೆ ತರಲಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಅಧಿಸೂಚನೆ ಹೊರಡಿಸುತ್ತಾ ಹೋದರು. ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾದ ಹೆಜ್ಜೆ ಇಡಬೇಕಾಗುತ್ತದೆ. ಎಲ್ಲರೂ ಜೊತೆಯಾಗಿ ಸಂಘಟಿತವಾದ ನಿರ್ಧಾರ ತಗೆದುಕೊಳ್ಳೋಣ ಎಂದರು.

ಸಭೆಯಲ್ಲಿ ಸಮೃದ್ಧ ಬೈಂದೂರು ಫೌಂಡೆಶನ್‌ನ ವಿಶ್ವನಾಥ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!