spot_img
Thursday, December 12, 2024
spot_img

ನಕ್ಸಲ್‌ ಎನ್‌ಕೌಂಟರ್‌ : ಸಂಶಯವಿದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ : ಹೆಬ್ಬಾಳ್ಕರ್‌

ಜನಪ್ರತಿನಿಧಿ (ಉಡುಪಿ) : ಹೆಬ್ರಿ ತಾಲೂಕಿನ ಪೀತುಬೈಲ್‌ನಲ್ಲಿ ನಡೆದ ನಕ್ಸಲ್‌ ನಾಯಕ ವಿಕ್ರಂ ಗೌಡನ ಎನ್‌ಕೌಂಟರ್‌ ವಿಚಾರದಲ್ಲಿ ಪೊಲೀಸರು ಕಾನೂನು ಚೌಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ವರದಿಗಾರರೊಂದಿಗೆ ಇಂದು(ಶನಿವಾರ) ಇಲ್ಲಿ ಮಾತನಾಡಿದರ ಹೆಬ್ಬಾಳ್ಕರ್‌, ನಕ್ಸಲರನ್ನು ಕಟ್ಟಿ ಹಾಕಬೇಕು ಎನ್ನುವುದು ಸರ್ಕಾರದ ನಿರ್ಧಾರ ಎಂದರು.

ಕೂಂಬಿಂಗ್‌ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡನ ಬಳಿ ಕೂಡ ಶಶ್ತ್ರಾಸ್ತ್ರಗಳು ಇತ್ತು. ಆತ ಒಂದು ಬಾರಿ ಫೈರಿಂಗ್‌ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಪ್ರತಿ ದಾಳಿ ಮಾಡದಿದ್ದರೇ ಪೊಲೀಸರ ಜೀವ ಹಾನಿ ಆಗುತ್ತಿತ್ತು ಎಂದು ಹೇಳಿದರು.

ನಕ್ಸಲರನ್ನು ಬೇರು ಸಮೇತ ಕಿತ್ತು ಹಾಕಬೇಕು ಎನ್ನುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿಲುವು. ಪರ ವಿರೋಧ ರ್ಚೆ ಎಲ್ಲಾ ಸಂದರ್ಭಗಳಲ್ಲೂ ಇರುತ್ತವೇ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು. ಮಾತ್ರವಲ್ಲದೇ, ಸಂಶಯವಿದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದೂ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!