spot_img
Wednesday, April 1, 2026
spot_img

ಮಣಿಪ್ಪಾಡಿ ವರದಿ : ಖರ್ಗೆ, ಧರಂ ಸಿಂಗ್‌ ಅವರಿಂದ ವಕ್ಫ್‌ ಆಸ್ತಿ ಒತ್ತುವರಿ : ಯತ್ನಾಳ್‌ ಗಂಭೀರ ಆರೋಪ

ಜನಪ್ರತಿನಿಧಿ (ಕಲಬುರುಗಿ) : ಅನ್ವರ್‌ ಮಣಿಪ್ಪಾಡಿ ಅವರ ವರದಿಯಲ್ಲಿ ರಾಜ್ಯದಲ್ಲಿ ವಕ್ಫ್‌ ಮಂಡಳಿಗೆ ಸೇರಿದ ಸುಮಾರು ೨.೭೭ ಲಕ್ಷ ಕೋಟಿಯಷ್ಟು ಆಸ್ತಿ ಒತ್ತುವರಿಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜಿನ್‌ ಖರ್ಗೆ, ಮಾಜಿ ಸಿಎಂ ದಿ. ಧರಂ ಸಿಂಗ್‌, ಮಾಜಿ ಸಚಿವ ಖಮರುಲ್‌ ಇಸ್ಲಾಂ, ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರೂ ಕೂಡ ವಕ್ಫ್‌ ಆಸ್ತಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಅಂಶವಿದೆ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ.

ವಕ್ಫ ಭೂಕಬಳೀಕಗೆ ವಿರೋಧಿ ಜನಜಾಗೃತಿ ಹೋರಾಟದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ವಿರೋಧಿಸಿ ಸಿಎಂ ಇಬ್ರಾಹಿಂ ನನಗೆ ಮಾನಹಾನಿ ನೋಟೀಸ್‌ ನೀಡಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ವಕ್ಫ್‌ ಮಂಡಳಿಯ ಖಬರಸ್ಥಾನದಲ್ಲಿ ಕಾಂಪ್ಲೆಕ್ಸ್‌ ನಿರ್ಮಿಸಿದ ಬಗ್ಗೆ ವರದಿಯಲ್ಲಿನ ೬೦ನೇ ಪುಟ ಓದುವಂತೆ ಪ್ರತ್ಯುತ್ತರ ನೀಡಿದ್ದೇನೆ. ನಾನು ಯಾರಿಗೂ ಹೆದರುವ ಮಗನಲ್ಲ ಎಂದೂ ಹೇಳಿದ್ದಾರೆ.

ಮೆದುಳಿಲ್ಲದ ಗಿರಾಕಿ ಪ್ರಿಯಾಂಕ್‌ : ಯತ್ನಾಳ್‌ ವ್ಯಂಗ್ಯ

ರಜಾಕಾರರು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಅಜ್ಜಿ ಹಾಗೂ ಅತ್ತೆಯನ್ನು ಸುಟ್ಟು ಹಾಕಿದ್ದರು. ರಜಾಕಾರರು ಮುಸ್ಲೀಮರಲ್ಲ ಎಂದು ಹೇಳಿಕೆ ನೀಡಿದ ಪ್ರಿಯಾಂಕ್‌ ಅವರು ಮೆದುಳಿಲ್ಲದ ಗಿರಾಕಿ. ದೇಶದಲ್ಲಿ ಇಂತಹ ಗಿರಾಕಿ ರಾಹುಲ್‌ ಗಾಂಧಿ ಮಾತ್ರ ಎಂದುಕೊಂಡಿದ್ದೆ. ಅಂತಹ ಗಿರಾಕಿ ಕಲಬುರುಗಿಯಲ್ಲೂ  ಇದ್ದಾರೆ. ಮತಗಳ ಆಸೆಗಾಗಿ ಈ ಪ್ರಮಾಣದ ಓಲೈಕೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೇ, ಸಂವಿಧಾನ ಬದಲಾಯಿಸುತ್ತಾರೆ ಎಂದು ಹೇಳಿಕೊಂಡು ತಿರುಗುತ್ತಿರುವವರು ಸಂವಿಧಾನವೇ ಓದಿಲ್ಲ. ಡಾ. ಬಿ. ಆರ್.‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಲ್ಲಿ ವಕ್ಫ್‌ ಮಂಡಳಿ ಕಾಯ್ದೆಯೇ ಇಲ್ಲ. ಈ ಬಗ್ಗೆ ಅವರ್ಯಾರೈ ಮಾತನಾಡುವುದಿಲ್ಲ. ವಕ್ಪ್‌ ಹೆಸರಲ್ಲಿ ದಲಿತರ ಜಮೀನು ಕಿತ್ತುಕೊಂಡಿದ್ದರೂ ಕಾಂಗ್ರೆಸಿಗರು ತುಟಿ ಬಿಚ್ಚುವುದಿಲ್ಲ ಎಂದು ಹೇಳಿದ್ದಾರೆ.

ದಲಿತರು ಕಾಂಗ್ರೆಸ್‌ನಲ್ಲಿ ಇರಬಾರದು ಎನ್ನುವುದು ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಆಶಯವಾಗಿತ್ತು. ಆದರೇ, ಇಂದು ಅಂಬೇಡ್ಕರ್‌ ಆಶಯಕ್ಕೆ ವಿರುದ್ಧವಾಗಿ ಕೆಲವರು ಸ್ವಾರ್ಥ ಸಾಧಿಸಿದ್ದಾರೆ. ಅಂಬೇಡ್ಕರ್‌ಗೆ ಎರಡು ಬಾರಿ ಸೋಲಿಸಿದ್ದು ಇದೇ ಕಾಂಗ್ರೇಸಿಗರು. ಆದರೇ, ಶಾಮಾಪ್ರಸಾದ್‌ ಮುಖರ್ಜಿ ಅವರು ರಾಜ್ಯಸಭೆ ನಾಮಕರಣಕ್ಕೆ ಅಂಬೇಡ್ಕರ್ ಗೆ ಬೆಂಬಲಿಸಿದ್ದರು. ಬಿಜೆಪಿ ಅಂಬೇಡ್ಕರ್‌ ಅವರ ಆದರ್ಶಗಳನ್ನು ಪಾಲಿಸುವ ನಿಜವಾದ ಪಕ್ಷ ಎಂದು ಹೇಳಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!