spot_img
Thursday, April 2, 2026
spot_img

ಹಿಂದೆ ರಾಜಾಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಇಂದು ಪ್ರಾಯೋಜಕರೇ ರಾಜರು: ಎ.ಎಸ್.ಎನ್ ಹೆಬ್ಬಾರ್

ಕುಂದಾಪುರ: ಸಾಂಸ್ಕೃತಿಕ ಕಾರ್ಯಕ್ರಮಗಳು ಗತಕಾಲದಲ್ಲಿ ರಾಜಾಶ್ರಯದಲ್ಲಿ ನೆರವೇರುತ್ತಿತ್ತು. ಹಿಂದೆ ರಾಜರು ನೆರವೇರಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಪ್ರಾಯೋಜಕರು ನೆರವೇರಿಸುತ್ತಿದ್ದಾರೆ. ಇಂದು ಪ್ರಾಯೋಜಕರೇ ರಾಜರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಯಶಸ್ವಿ ಕಲಾವೃಂದದ ಮಕ್ಕಳ ಕಾರ್ಯಕ್ರಮವನ್ನು ದತ್ತಾನಂದ ಗಂಗೊಳ್ಳಿ ಪ್ರಯೋಜನೆ ನೀಡಿ ಅವಕಾಶ ಕೊಟ್ಟು ನಿಜಾರ್ಥದಲ್ಲಿ ರಾಜರಾದರು. ಎಂದು ಖ್ಯಾತ ವಕೀಲರಾದ ಎ.ಎಸ್.ಎನ್ ಹೆಬ್ಬಾರ್ ದತ್ತಾನಂದ ಗಂಗೊಳ್ಳಿಯವರನ್ನು ಅಭಿನಂದಿಸಿ ಮಾತನ್ನಾಡಿದರು.

ಸಿನ್ಸ್ ೧೯೯೯ ಶ್ವೇತಯಾನ-೮೦ ಕಾರ್ಯಕ್ರಮದಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಾಳಮದ್ದಳೆಯು ಕುಂದಾಪುರ ಕೋಡಿಯ ಚಕ್ರಮ್ಮ ದೇಗುಲದಲ್ಲಿ ನವೆಂಬರ್ ೨೪ರಂದು ನೆರವೇರಿತು. ಪ್ರಾಯೋಜಕರಾದ ಕೊಡುಗೈ ದಾನಿ ಬಾಂಬೆ ಸೇಫ್ ಕಂಪೆನಿಯ ಮುಖ್ಯಸ್ಥರಾದ ದತ್ತಾನಂದ ಗಂಗೊಳ್ಳಿಯವರನ್ನು ಅಭಿನಂದಿಸಲಾಯಿತು.

ಕಲಾ ಚಟುವಟಿಕೆಗಳು ನಿರಂತರವಾಗಿ ಸಾಗಿ ಬಂದಾಗ ಒಂದಷ್ಟು ಕಲಾವಿದರುಗಳಿಗೆ ಅವಕಾಶ ಕಲ್ಪಿತವಾಗುತ್ತದೆ. ಪ್ರಾಯೋಜಕರ ನೆರವಿನಿಂದ ಸಾಧ್ಯವಾಗುವ ಅವಕಾಶವನ್ನು ಸಂಸ್ಥೆ ಸದಾ ಸ್ಮರಿಸುತ್ತದೆ ಎಂದು ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನ್ನಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಗೋಪಾಲ ಪೂಜಾರಿ, ಸಭಾಭವನದ ಅಧ್ಯಕ್ಷ ಶಂಕರ ಪೂಜಾರಿ ಕೋಡಿ, ದೇಗುಲದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಉಪಸ್ಥಿತರಿದ್ದರು. ಬಳಿಕ ಚಿಣ್ಣರ ತಾಳಮದ್ದಳೆ ಲಂಕಾದಹನ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!