spot_img
Wednesday, March 25, 2026
spot_img

ಕುಂದಾಪುರ ಬಿಲ್ಲವ ಸಂಘದ ನೇತೃತ್ವದಲ್ಲಿ ಐ‌ಎ‌ಎಸ್, ಕೆ‌ಎ‌ಎಸ್ ಹಾಗು ತತ್ಸಮಾನ ಪರೀಕ್ಷೆಯ ಕಾರ್ಯಾಗಾರ

ಕುಂದಾಪುರ, ನ,23: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಮತ್ತು ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕೃತಿಕ ಟ್ರಸ್ಟ್ ಕುಂದಾಪುರ ಇವರ ನೇತೃತ್ವದಲ್ಲಿ ಐ‌ಎ‌ಎಸ್ ಮತ್ತು ಕೆ‌ಎ‌ಎಸ್ ಹಾಗೂ ತತ್ಸಮಾನ ಪರೀಕ್ಷೆಯ ಒಂದು ದಿನದ ಕಾರ್ಯಾಗಾರ ಕುಂದಾಪುರದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನವೆಂಬರ್ 23ರಂದು ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕೆ ಇಂತಹ ತರಬೇತಿಗಳು ದಾರಿಯಾಗುತ್ತದೆ. ಐ‌ಎ‌ಎಸ್ ಮತ್ತು ಕೆ‌ಎ‌ಎಸ್ ಅಂಥಹ ಪರೀಕ್ಷೆಯನ್ನು ನಮ್ಮ ಅವಿಭಜಿತ ದ.ಕ ಜಿಲ್ಲೆಯವರು ಬರೆಯುವುದು ತುಂಬಾ ಕಡಿಮೆ. ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಭಾಗದವರೇ ಹೆಚ್ಚಾಗಿ ಇಂಥಹ ಆಡಳಿತಾತ್ಮಕ ಪರೀಕ್ಷೆ ಬರೆದು ಹುದ್ದೆಗಳನ್ನು ಪಡೆಯುತ್ತಾರೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಐ‌ಎ‌ಎಸ್, ಕೆ‌ಎ‌ಎಸ್ ಪರೀಕ್ಷೆ ಬರೆಯುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕು. ವಿದ್ಯಾರ್ಥಿಗಳಿಗೆ ಆ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ರೂವಾರಿ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ಮಾತನಾಡಿ,ಐ‌ಎ‌ಎಸ್ ಮತ್ತು ಕೆ‌ಎ‌ಎಸ್ ಹಾಗೂ ತತ್ಸಮಾನ ಪರೀಕ್ಷೆಯನ್ನು ನಮ್ಮ ಈ ಭಾಗದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಬೇಕು ಎನ್ನುವ ಚಿಂತನೆಯಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ, ಆಡಳಿತ ಸೇವೆಯ ವಿಶೇಷತೆಯನ್ನು ಪೋಷಕರು ಮನವರಿಕೆ ಮಾಡಬೇಕು. ಸರಕಾರಿ ನೌಕರಿ ಪಡೆದು ದೇಶ, ರಾಜ್ಯ ಕಟ್ಟುವ ಮಹತ್ತರವಾದ ಕೆಲಸ ಮಾಡಬೇಕು. ಇಂಥಹ ಪರೀಕ್ಷೆಗಳು ಕಬ್ಬಿಣದ ಕಡಲೆಯಲ್ಲ ಎನ್ನುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿದುಕೊಳ್ಳಬೇಕು. ಈ ಭಾಗದಿಂದಲೂ ಉನ್ನತ ಸರಕಾರಿ ಅಧಿಕಾರಿಗಳು ಬರುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಮ ಪೂಜಾರಿ, ಶಿವರಾಮ ಪೂಜಾರಿ, ನಾರಾಯಣ ಗುರು ಯುವಕ ಮಂಡಲದ ಪ್ರಕಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಐ‌ಎ‌ಎಸ್ ದರ್ಶನ ಸಂಸ್ಥೆಯ ಮುಖ್ಯಸ್ಥರಾದ ದರ್ಶನ್ ಗರ್ತಿಕೆರೆ ಐ‌ಎ‌ಎಸ್, ಕೆ‌ಎ‌ಎಸ್ ಹಾಗು ತತ್ಸಮಾನ ಪರೀಕ್ಷೆಯ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.

ನಾರಾಯಣ ಗುರು ಯುವಕ ಮಂಡಲದ ಕಾರ್ಯದರ್ಶಿ ಯೋಗಿಶ್ ಪೂಜಾರಿ ಸ್ವಾಗತಿಸಿದರು. ರಾಜೇಶ್ ಕಡ್ಗಿಮನೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!