Thursday, November 21, 2024

ಜೆಪಿಸಿ ಬಂದು ವಕ್ಫ್‌ ಕರ್ಮಕಾಂಡವನ್ನು ವರದಿ ಮಾಡಬಾರದು ಎಂದರೆ ಇದ್ಯಾವ ತುಘಲಕ್‌ ಸಂಸ್ಕೃತಿ ಜಮೀರ್‌ ಸಾಬ್‌ ? : ಬಿಜೆಪಿ

ಜನಪ್ರತಿನಿಧಿ (ಬೆಂಗಳೂರು) : ವಕ್ಫ್‌ ಅನಧಿಕೃತವಾಗಿ ಬೇಕಾಬಿಟ್ಟಿ ರಾಜ್ಯದ ರೈತರು, ಬಡವರು, ಶೋಷಿತರು, ಮಠಗಳು, ಮಂದಿರಗಳ ಆಸ್ತಿಯನ್ನು ಕಬ್ಜ ಮಾಡಬಹುದು. ಆದರೆ, ಕೇಂದ್ರ ಸರ್ಕಾರ ಅಧಿಕೃತ ರಚನೆ ಮಾಡಿರುವ ಸಂಸತ್ತಿನ ಜಂಟಿ ಸಂಸದೀಯ ಸಮಿತಿ ರಾಜ್ಯಕ್ಕೆ ಬಂದು ವಕ್ಫ್‌ ಕರ್ಮಕಾಂಡವನ್ನು ವರದಿ ಮಾಡಬಾರದು ಎಂದರೆ ಇದ್ಯಾವ ತುಘಲಕ್‌ ಸಂಸ್ಕೃತಿ ಮಿಸ್ಟರ್‌ ಜಮೀರ್‌ ಅಹ್ಮದ್‌ ಸಾಬ್? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಸಂಸತ್ತಿನ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಯಾಗಿರುವುದು ವಕ್ಫ್‌ ತಿದ್ದುಪರಿ ಮಸೂದೆ ಕರಿತು. ಆದರೇ ಸಮಿತಿ ವಿಜಯಪುರಕ್ಕೆ ಭೇಟಿ ನೀಡುತ್ತಿರುವುದನ್ನು ಅನಧಿಕೃತ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌  ಹೇಳಿರುವುದನ್ನು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.

A1 ಭ್ರಷ್ಟ ಸಿದ್ದರಾಮಯ್ಯ ಅವರಂತೂ ನಿಮ್ಮ ಸಮುದಾಯದ ಓಲೈಕೆ ಒಂದೇ ಮುಖ್ಯ ಅಜೆಂಡಾ ಮಾಡಿಕೊಂಡು ನಾಡಿನ ರೈತರನ್ನು ದಲಿತರನ್ನು ತುಳಿಯುತ್ತಿದ್ದಾರೆ. ಮತಾಂಧರ ತಾಳಕ್ಕೆ ಕುಣಿದು ಕಾಂಗ್ರೆಸ್ ಕರುನಾಡನ್ನು ಖಬರಸ್ಥಾನ್‌ ಮಾಡುತ್ತಿದ್ದರೆ ನೋಡಿಕೊಂಡು ಸುಮ್ಮನೆ ಕೂರಬೇಕೇ?‌ ಎಂದು ಪ್ರಶ್ನೆ ಮಾಡಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!