spot_img
Wednesday, April 1, 2026
spot_img

ಲೇಖಕ, ತಾಳಮದ್ದಲೆ ಅರ್ಥಧಾರಿ ಮುಷ್ತಾಕ್ ಹೆನ್ನಾಬೈಲ್‌ ಅವರಿಗೆ ಜಿಲ್ಲಾ ರಾಜ್ಯೋತ್ಸವ ‌ಪ್ರಶಸ್ತಿ

ಜನಪ್ರತಿನಿಧಿ (ಕುಂದಾಪುರ/ ಉಡುಪಿ) : ಲೇಖಕ, ವಾಗ್ಮಿ, ಯಕ್ಷಗಾನ ತಾಳ ಮದ್ದಲೆ ಅರ್ಥಧಾರಿ ಮುಷ್ತಾಕ್ ಹೆನ್ನಾಬೈಲ್‌ ಅವರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ‌ಪ್ರಶಸ್ತಿ ಲಭಿಸಿದೆ.

ಸಾಹಿತ್ಯ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಅದರಲ್ಲಿಯೂ ಯಕ್ಷಗಾನ ಅರ್ಥಗಾರಿಕೆಯಲ್ಲಿ ಧರ್ಮವನ್ನು ಮೀರಿ ಒಬ್ಬ ವಾಗ್ಬಟ್ಟುವಾಗಿ ಮೆರೆದ ಪ್ರತಿಭೆ ಮುಷ್ತಾಕ್‌ ಹೆನ್ನಾಬೈಲ್. ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಹೆನ್ನಾಬೈಲಿನ ರಹಿಮುನ್ನಿಸಾ ಹಾಗೂ ಅಬ್ದುಲ್ ಹಮೀದ್ ಇವರ ಮಗನಾಗಿ ೨೬.೧೦.೧೯೭೮ ರಂದು ಮುಷ್ತಾಕ್ ಹೆನ್ನಾಬೈಲ್ ಅವರ ಪುತ್ರ. ಅವರು ಯಕ್ಷಗಾನ ಹವ್ಯಾಸಿ ತಾಳಮದ್ದಳೆಯ ಅರ್ಥಧಾರಿ, ವೇಷಧಾರಿಯೂ ಹೌದು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕಲೆ, ಸಾಹಿತ್ಯ, ಸಂಸ್ಕೃತಿಯ ಕ್ಷೇತ್ರದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಗುರುತಿಸಿಕೊಂಡು, ಸಮಾಜದ ಎಲ್ಲರಿಂದಲೂ ಗೌರವಿಸಲ್ಪಡುವ ಅಪರೂಪದ ವ್ಯಕ್ತಿ, ಎಲ್ಲಾ ಧರ್ಮಗಳ ಸಾರವನ್ನು ಅರಿತು ಸದಾ ಸಮಾನತೆ ಮತ್ತು ಸೌಹಾರ್ದ ಸಾರುವ ಆಕರ್ಷಕ ವ್ಯಕ್ತಿತ್ವ ಹೊಂದಿರುವ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮನಲೋಕ ಎನ್ನುವ ಪುಸ್ತಕವನ್ನು ಅವರು ರಚಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!