spot_img
Wednesday, November 19, 2025
spot_img

ದಬ್ಬೆಕಟ್ಟೆ ಯಕ್ಷಗಾನ: ಸಮಾಜಸೇವಕ ಬೆಂಕಿಮಣಿ ಸಂತು ಹಾಗೂ ವಿಜಯಲಕ್ಷ್ಮೀ ಅವರಿಗೆ ಸನ್ಮಾನ

ಕುಂದಾಪುರ: ಯಕ್ಷಗಾನ ಕಲಾವಿದ ಶರತ್ ಶೆಟ್ಟಿ ತೀರ್ಥಹಳ್ಳಿ ಅವರ ಗೃಹ ನಿರ್ಮಾಣ ಸಹಯಾರ್ಥವಾಗಿ ಕುಂದಾಪುರ ತಾಲೂಕು ದಬ್ಬೆಕಟ್ಟೆಯಲ್ಲಿ ಆಯೋಜಿಸಲಾದ ಅತಿಥಿ ಕಲಾವಿದರ ಕೂಡುವಿಕೆಯ ಯಕ್ಷಗಾನ ಪ್ರದರ್ಶನದ ರಂಗ ವೇದಿಕೆಯಲ್ಲಿ ಸಮಾಜ ಸೇವಕ, ಅನಾರೋಗ್ಯದಿಂದ ಬಳಲುತ್ತಿರುವರ ವೈದ್ಯಕೀಯ ಚಿಕಿತ್ಸೆಗೆ ವಿವಿಧ ವೇಷಗಳನ್ನು ಧರಿಸಿ ದೇಣಿಗೆ ಸಂಗ್ರಹಿಸಿ ನೊಂದ ಕುಟುಂಬಗಳಿಗೆ ನೀಡುವ ಬೆಂಕಿಮಣಿ ಸಂತು ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ತನ್ನದೆಯಾದ ಕಾರ್ಯವೈಖರಿಯ ಮೂಲಕ ಎಸ್.ಎಲ್.ಆರ್.ಎಂ ಯೋಜನೆಯಲ್ಲಿ ಮಹತ್ತರ ಸಾಧನೆ ಮಾಡಿದ ವಿಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ವಾಸ್ತುತಜ್ಞ, ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್ ಶುಭಶಂಸನೆಗೈದರು. ಈ ಸಂದರ್ಭದಲ್ಲಿ ಶಿಕ್ಷಕರಾದ ದಿನಕರ ಶೆಟ್ಟಿ ದಬ್ಬೆಕಟ್ಟೆ, ಉದಯಕುಮಾರ್ ಶೆಟ್ಟಿ ಕಾಳಾವರ, ಭಾಗವತ ರಾಘವೇಂದ್ರ ಮಯ್ಯ, ಚಂದ್ರಶೇಖರ ಭಟ್ ಕೊಯಮುತ್ತೂರು, ಪ್ರಕಾಶ್ ಶೆಟ್ಟಿ, ನಾರಾಯಣ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.

ಶರತ್ ಶೆಟ್ಟ ತೀರ್ಥಹಳ್ಳಿ ಸ್ವಾಗತಿಸಿ, ಪ್ರೇಕ್ಷಕರು ಯಕ್ಷಗಾನ ಕಲಾವಿದರ ಪರವಾಗಿ ಇದ್ದಾರೆ ಎನ್ನುವುದಕ್ಕೆ ನನ್ನ ಈ ಕಾರ್ಯಕ್ರಮ ಕಲಾಭಿಮಾನಿಗಳು ನೀಡಿದ ಪ್ರೋತ್ಸಾಹವೇ ಕಾರಣ. ಈ ಕಾರ್ಯಕ್ರಮವನ್ನು ತಮ್ಮದೆ ಕಾರ್ಯಕ್ರಮದ ರೀತಿ ಆಸಕ್ತಿಯಿಂದ ಕಾರ್ಯನಿರ್ವಹಿಸಿ ಯಶಸ್ಸುಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬಳಿಕ ತೆಂಕು ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸಾಯಕ ಸಂಪ್ರಾಪ್ತಿ, ಸಂವರ್ತನಾಸ್ತ್ರ, ಶಕ್ರಾರಿ ಸಂಹಾರ ಎನ್ನುವ ಯಕ್ಷಗಾನ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!