Sunday, November 3, 2024

ಸಿರಿಬಾಗಿಲು ಪ್ರತಿಷ್ಠಾನ : ದೇಶಮಂಗಲ ದಿ.ಕೃಷ್ಣ ಕಾರಂತರ ಜನ್ಮ ದಿನಾಚರಣೆ -ಸಂಸ್ಮರಣೆ

ಕಾಸರಗೋಡು: ಕಾಸರಗೋಡಿನ ಹಿರಿಯ ವಿದ್ವಾಂಸ ಯಕ್ಷಗಾನ ಅರ್ಥದಾರಿ ದೇಶಮಂಗಲ ದಿ|ಕೃಷ್ಣ ಕಾರಂತರ ಜನ್ಮದಿನಾಚರಣೆ – ಸಂಸ್ಮರಣಾ ಕಾರ್ಯಕ್ರಮ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಬೆಳಿಗ್ಗೆ 10:00 ಕ್ಕೆ ಹರಿದಾಸ ಶೇಣಿ ಪರಂಪರೆಯನ್ನು ಮುಂದುವರಿಸುತ್ತಿರುವ  ಶೇಣಿ ಮುರಳಿ ಇವರಿಂದ ಹರಿಕಥಾ ಕಾರ್ಯಕ್ರಮ. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ನಾರಾಯಣ ರಂಗಾಭಟ್ಟ ಮಧೂರು ಜ್ಯೋತಿಷ್ಯರು ಇವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ದೇಶಮಂಗಲ ಕೃಷ್ಣ ಕಾರಂತರು ನಡೆದು ಬಂದ ದಾರಿ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳು, ಅವರ ಬರೆಹಗಳ ಸಾಹಿತ್ಯದ ವಿಶೇಷತೆ ,ಸಂಸ್ಕರಣಾ ಭಾಷಣದಲ್ಲಿ ವಿವರಿಸಿದರು. ಪ್ರತಿಷ್ಠಾನ ಈ ರೀತಿ ಆಯೋಜಿಸುತ್ತಿರುವುದು ಔಚಿತ್ಯಪೂರ್ಣ ಎಂದರು.  ಕೃಷ್ಣ ಕಾರಂತರ ಪುತ್ರ  ಎರಡು ವರುಷಗಳ ಹಿಂದೆ ನಮ್ಮನ್ನಗಲಿದ ದಿ. ಜಯರಾಮ ಕಾರಂತರನ್ನು ಈ ಸಂದರ್ಭದಲ್ಲಿ ನೆನಪಿಸಲಾಯಿತು.  ರಾಜಾರಾಮ ರಾವ್ ಮೀಯಪದವುರವರು ಡಾ. ರಮಾನಂದ ಬನಾರಿಯವರಿಗೆ ಅಭಿನಂದನಾ ಭಾಷಣ ಮಾಡಿದರು.
ಸಾಧಕ ರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ರೇಷ್ಠ: ಎಡನೀರು ಶ್ರೀಗಳು
ಗಡಿನಾಡು ಕಾಸರಗೋಡು ಹಲವಾರು ಸಾಧಕರಿಂದಾಗಿ ಬೆಳಗಿಬಂದ ನಾಡು. ಅಂತಹ ಸಾಧಕರಲ್ಲಿ ದೇಶಮಂಗಲ ಕೃಷ್ಣ ಕಾರಂತರು ಒಬ್ಬರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆಬ- ಸಂಸ್ಮರಣಾ ಕಾರ್ಯಕ್ರಮದಿಂದ ಹಿಂದಿನ ಸಾಧಕರ ಸಾಧನೆಯ ಕುರಿತಾಗಿ ಇಂದಿನ ಪೀಳಿಗೆಗೆ ಮನದಟ್ಟು ಮಾಡುವ ಪ್ರತಿಷ್ಠಾನದ ಕಾರ್ಯ ಶ್ರೇಷ್ಠವಾದದ್ದು. ಅದರಲ್ಲೂ ಸಾಧಕರ ಹೆಸರಿನಲ್ಲಿ ನಾಡಿನ ಹಿರಿಯ ಸಾಧಕರನ್ನು ಗುರುತಿಸುವುದು ಒಂದು ಒಳ್ಳೆಯ ಪರಂಪರೆ ಎಂದರು. ದೇಶಮಂಗಳ ಕೃಷ್ಣ ಕಾರಂತರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಡಾ| ರಮಾನಂದ ಬನಾರಿಯವರಿಗೆ ಅವರಿಗೆ ವಿಶೇಷ ಗೌರವ ಪುರಸ್ಕಾರ ನೀಡುತ್ತಿರುವುದರಿಂದ ಇಂದಿನ ಜನರಿಗೆ ಅವರೆಲ್ಲರ ಸಾಧನೆಗಳು ಮನವರಿಕೆಯಾಗುವಂತಾಯಿತು. ಪ್ರತಿಷ್ಠಾನದ ಯಾವುದೇ ಕಾರ್ಯಕ್ರಮಗಳಿದ್ದರೂ ಬಿಡುವಿನ ವೇಳೆ ಸದಾ ಒಂದು ಭಾಗವಹಿಸುತ್ತೇನೆ ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಆಶೀರ್ವಚನದಲ್ಲಿ ತಿಳಿಸಿದರು.
ಸಮಾಜದಿಂದ ಪಡೆದುದರ ಒಂದು ನೂಲಿನ ಎಳೆಯಷ್ಟಾದರೂ ಸಮಾಜಕ್ಕೆ ಹಿಂದಿರುಗಿಸಬೇಕು: ಡಾ| ಬನಾರಿ
ದೇಶಮಂಗಲ ಕೃಷ್ಣ ಕಾರಂತರ ಜನ್ಮ ದಿನಾಚರಣೆ ಸಂಸ್ಮರಣಾ  ಕಾರ್ಯಕ್ರಮದ “ವಿಶೇಷ ಗೌರವ ಪುರಸ್ಕಾರವನ್ನು” ಸ್ವೀಕರಿಸಿದ ಡಾ| ಬನಾರಿಯವರು ಸಮಾಜದಿಂದ ತಾನು ಪಡೆಯುವುದಕ್ಕಿಂತ ಒಂದು ನೂಲಿನ ಎಳೆಯಷ್ಟಾದರೂ  ಸಮಾಜಕ್ಕೆ ಕೊಡುಗೆ ನೀಡಬೇಕು. ಆ ನಿಟ್ಟಿನಲ್ಲಿ ಹಿಂದಿನ ಹಿರಿಯರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರವಾದದು. ಆ ಹಿರಿಯರ ಹೆಸರಿನಲ್ಲಿ ನೀಡಿದ ವಿಶೇಷ ಗೌರವ ಸಂತೋಷ ತಂದಿದೆ. ಈ ಪ್ರತಿಷ್ಠಾನ ಮುಂದೆಯೂ ಹೆಚ್ಚು ಬೆಳಗಿ ಬರಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ  ಸುಜೀರ್  ಸುಬ್ರಾಯ  ಸುರತ್ಕಲ್ ಇವರು ಕೋಲಾರ ದಕ್ಷಿಣ ಕನ್ನಡ ಯಕ್ಷಗಾನ ಕಲಾ ವೃಂದ, ಕೋಲಾರ ಚಿನ್ನದ ಗಣಿ ಪ್ರದೇಶ ಇವರು ಉಪಯೋಗಿಸುತ್ತಿದ್ದ ಇನ್ನೂರು ವರುಷಗಳ ಹಿಂದಿನ ತೆಂಕುತಿಟ್ಟು ಯಕ್ಷಗಾನದ ಎರಡು ಕಿರೀಟಗಳನ್ನು ಪ್ರತಿಷ್ಠಾನದ ಮ್ಯೂಸಿಯಂಗೆ ಹಸ್ತಾಂತರಿಸಿದರು. ಈ ಕಿರೀಟವು ಹಿಂದಿನ ಕಾಲದಲ್ಲಿ ಗಡಿನಾಡು ಕಾಸರಗೋಡು ಪ್ರದೇಶದ ಯಾವುದೇ ಮೇಳದ ಕಿರೀಟವಾಗಿರಬೇಕು. ಅದು ಈ ಪ್ರತಿಷ್ಠಾನಕ್ಕೆ ಯೋಗ್ಯವೆಂದು ಶ್ರೀಯುತರು ಪೂಜ್ಯ ಸ್ವಾಮಿಗಳ ಆಶೀರ್ವಾದದ ಮೂಲಕ ಪ್ರತಿಷ್ಠಾನಕ್ಕೆ ಸಮರ್ಪಿಸಿದರು. ಸಭೆಯ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನಿವೃತ್ತ ಮುಖ್ಯೋಪಾಧ್ಯಾಯರಾದ  ಕೃಷ್ಣ ಶರ್ಮ ರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಭಾಗವತ ಪ್ರಸಂಗ ಕರ್ತ ದಿವಂಗತ ಶಿರೂರು ಫಣಿಯಪ್ಪಯ್ಯ  ಅವರ ಪುತ್ರ, ಫಣಿಗಿರಿ ಪ್ರತಿಷ್ಠಾನ, ಬೈಂದೂರು ಇದರ ಅಧ್ಯಕ್ಷ ರಾದ  ಉಮೇಶ ಶಿರೂರು ಅವರ ಭಾಗವಹಿಸಿದರು.  ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರೊ. ಶ್ರೀನಾಥ್ ಕಾಸರಗೋಡು,  ವಾಸುದೇವ ಕಾರಂತ ಉಜಿರೆಕೆರೆಮುಂತಾದ ಗಣ್ಯರು ಉಪಸ್ಥಿತರಿದ್ದರು.
ಗಣಿತ ವಿಜ್ಞಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ. ಯಚ್. ಡಿ. ಪದವಿ ಪಡೆದ ಕೃಷ್ಣ ಕಾರಂತರ ಮೊಮ್ಮಗಳು, ಜಯರಾಮ ಕಾರಂತರ ಮಗಳು ಶ್ರೀಮತಿ ಶುಭಲಕ್ಷ್ಮಿ ಮಹೇಶ ಮಯ್ಯ  ಇವರನ್ನು ಅಭಿನಂದಿಸಲಾಯಿತು. ಪ್ರಸನ್ನ ಕಾರಂತ ದೇಶಮಂಗಲ ನಿರೂಪಿಸಿದರೆ , ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಜಗದೀಶ ಕೆ. ಕೂಡ್ಲು ವಂದಿಸಿದರು.
 ಇದೇ ಸಂದರ್ಭದಲ್ಲಿ ಪ್ರಸಿದ್ಧ ಕಲಾವಿದರಿಂದ ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಡಗುತ್ತಿಟ್ಟಿನ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ ಹಿಮ್ಮೇಳದಲ್ಲಿ ಚೈತನ್ಯ ಕೃಷ್ಣ ಪದ್ಯಾಣ,ಶ ಶಿ ಆಚಾರ್ಯ ಭಾಗವಹಿಸಿದರು. ಭೀಷ್ಮನಾಗಿ ಉಜಿರೆ ಅಶೋಕ್ ಭಟ್, ಸಾಲ್ವ ನಾಗಿ ರಾಧಾಕೃಷ್ಣ  ಕಲ್ಚಾರ್ ,ಅಂಬೆಯ ಪಾತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಪರಶುರಾಮನಾಗಿ ಸರ್ಪಂಗಳ ಈಶ್ವರ ಭಟ್ ವೃದ್ದ ಬ್ರಾಹ್ಮಣನಾಗಿ ವೈಕುಂಠ ಹೇರ್ಳೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!