Thursday, November 14, 2024

ಚಿನ್ಮಯಿ ಆಸ್ಪತ್ರೆಯಲ್ಲಿ ‘ಹಾಲಿವುಡ್ ಸ್ಪೆಕ್ಟ್ರಾ’ ಲೇಸರ್ ಯಂತ್ರ ಉದ್ಘಾಟನೆ

ಕುಂದಾಪುರ:  ಚಿನ್ಮಯಿ ಆಸ್ಪತ್ರೆಯ ಲೇಸರ್ ಎಂಡ್ ಕಾಸ್ಮೆಟೋಲಜಿ ವಿಭಾಗದಲ್ಲಿ ಹಾಲಿವುಡ್ ಸ್ಪೆಕ್ಟ್ರಾ ಎಂಬ ಅತ್ಯಾಧುನಿಕ ಲೇಸರ್ ಯಂತ್ರ ಅಳವಡಿಸಲಾಗಿದ್ದು ಅದರ ಉದ್ಘಾಟನೆಯನ್ನು ಐ‌ಎಂಎ ಕುಂದಾಪುರ ಘಟಕದ ಅಧ್ಯಕ್ಷೆ, ಖ್ಯಾತ ಪ್ರಸೂತಿ ತಜ್ಞೆ ಡಾ| ಪ್ರಮೀಳಾ ನಾಯಕ್ ಉದ್ಘಾಟಿಸಿ, ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ಸೇವೆಯನ್ನು ಶ್ಲಾಘಿಸಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್, ಖ್ಯಾತ ಉದ್ಯಮಿ ಅಭಿನಂದನ್ ಎ. ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅಭಿನಂದನೆ ಸಲ್ಲಿಸಿದರು.
ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಖ್ಯಾತ ಚರ್ಮರೋಗ ತಜ್ಞ ಡಾ| ಉಮೇಶ ಪುತ್ರನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತ್ವಚೆಯ ಆರೈಕೆಯಲ್ಲಿ ಲೇಸರ್ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಚರ್ಮದ ಸೌಂದರ್ಯ ವರ್ಧನೆಯಲ್ಲಿ ಅನುಕೂಲಕರ ವಾಗಿದೆ. ಎಂದು ನೂತನ ಲೇಸರ್ ಯಂತ್ರದ ಉಪಯುಕ್ತತೆಯನ್ನು ಡಾ| ಉಮೇಶ ಪುತ್ರನ್ ವಿವರಿಸಿದರು.
ತಜ್ಞ ವೈದ್ಯರಾದ ಡಾ| ಬಾಲಕೃಷ್ಣ ಶೆಟ್ಟಿ, ಡಾ| ದಿನೇಶ ಶೆಟ್ಟಿ, ಡಾ| ಮೋಹನ ಕಾಮತ್, ಡಾ| ಶ್ರೀದೇವಿ ಕಟ್ಟೆ, ಡಾ| ಶೇಖರ, ಡಾ ಲಕ್ಷ್ಮೀನಾರಾಯಣ್, ಆಸ್ಪತ್ರೆಯ ಆಡಳಿತ ವರ್ಗದ ರಾಜೇಂದ್ರ ಕಟ್ಟೆ, ಸುಮಾ ಪುತ್ರನ್ ಮತ್ತು ಚಿನ್ಮಯಿ ಪುತ್ರನ್ ಉಪಸ್ಥಿತರಿದ್ದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷೆ ಜ್ಯೂಡಿತ್ ಮೆಂಡೋನ್ಸಾ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರದ ಮುತ್ತಯ್ಯ ಶೆಟ್ಟಿ ಶುಭ ಹಾರೈಸಿದರು.
ಶ್ರೀಮತಿ ಸುಮಾ ಪುತ್ರನ್ ಅತಿಥಿಗಳನ್ನು ಗೌರವಿಸಿದರು. ರಾಜೇಂದ್ರ ಕಟ್ಟೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!